LPG ಬೆಲೆ ಇಳಿಕೆ ನಂತರ ಕೇಂದ್ರದಿಂದ ಮಧ್ಯಮ ವರ್ಗದವರಿಗೆ ಇನ್ನೊಂದು ಭರ್ಜರಿ ಗಿಫ್ಟ್‌!!!

Central Government news new Modi govt scheme to offer home loan interest subsidy

Central Government new scheme: ಕೇಂದ್ರ ಸರಕಾರವು ದೇಶೀಯ ಎಲ್ಪಿಜಿ ಸಿಲಿಂಡರ್‌ ಬೆಲೆಯನ್ನು ಇತ್ತೀಚೆಗಷ್ಟೇ ರೂ.200 ಗಳಷ್ಟು ಕಡಿಮೆ ಮಾಡಿದೆ. ಇದು ನಿಜಕ್ಕೂ ಮಧ್ಯಮ ವರ್ಗದವರಿಗೆ ಸಂತಸದ ಸುದ್ದಿ ಎಂದೇ ಹೇಳಬಹುದು. ಲೋಕಸಭಾ ಚುನಾವಣೆಯ ಮುನ್ನ ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಸರಕಾರವು ಈ ಕ್ರಮ(Central Government new scheme) ತೆಗೆದುಕೊಂಡಿದೆ. ಇದೀಗ ಮಧ್ಯಮ ವರ್ಗದವರಿಗೆ ಹೊಸ ಉಡುಗೊರೆಯೊಂದನ್ನು ನೀಡಲು ಕೇಂದ್ರ ಸಜ್ಜಾಗಿದೆ.

ಮಧ್ಯಮ ವರ್ಗದವರಿಗಾಗಿ ಹೊಸ ವಸತಿ ಯೋಜನೆಯನ್ನು ಕೇಂದ್ರ ಸರಕಾರವು ತರಲು ಯೋಜನೆ ಮಾಡುತ್ತಿದೆ. ಇದರ ಮೂಲಕ ಬ್ಯಾಂಕುಗಳಿಂದ ಸಾಲ ಪಡೆಯುವ ಬಡ್ಡಿಯಲ್ಲಿ ಜನರಿಗೆ ದೊಡ್ಡ ಪರಿಹಾರ ನೀಡಲಾಗುವುದು.

ಆಗಸ್ಟ್‌ 15 ರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಕೆಂಪುಕೋಟೆಯಲ್ಲಿ ಹೇಳಿದ್ದರು. ಬಡ್ಡಿ ಹಣವನ್ನು ಮುಂಗಡವಾಗಿ ಫಲಾನುಭವಿಗಳ ಗೃಹಸಾಲದ ಖಾತೆಗೆ ಜಮಾ ಮಾಡಲಾಗುವುದು ಎಂದು ವರದಿಯಾಗಿದೆ. 2028 ರಲ್ಲಿ ಈ ಯೋಜನೆ ಜಾರಿಗೆ ತರಬಹುದು.

ಆದರೆ ಈ ಕುರಿತು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಮತ್ತು ಹಣಕಾಸು ಸಚಿವಾಲಯ ಯಾವುದೇ ಮಾಹಿತಿಯನ್ನು ಹೇಳಿಲ್ಲ. ಈ ಯೋಜನೆಯು ನಗರ ಪ್ರದೇಶಗಳಲ್ಲಿ ಕಡಿಮೆ ಆದಾಯದ ಗುಂಪುಗಳಲ್ಲಿ 2.5 ಮಿಲಿಯನ್‌ ಸಾಲ ಅರ್ಜಿದಾರರಿಗೆ ಪ್ರಯೋಜನ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: AC ಹಾಕಿ ನಿದ್ದೆ ಮಾಡಿದ ವೈದ್ಯ! 2 ನವಜಾತ ಶಿಶುಗಳ ಸಾವು!!!

Leave A Reply

Your email address will not be published.