Electricity Rates Increased:ರಾಜ್ಯದ ಜನತೆಗೆ ಮತ್ತೆ ‘ಕರೆಂಟ್ ಶಾಕ್’ ಕೊಟ್ಟ ಸರ್ಕಾರ – ಶೇ. ಐದರಿಂದ ಏಳರಷ್ಟು ವಿದ್ಯುತ್ ದರದಲ್ಲಿ ಏರಿಕೆ

Shocking News electricity rates increased by 5 to 7percent will cost more from October first onwards news

Electricity Rates Increased: ವಿದ್ಯುತ್ ದರ ಇಳಿಕೆ ಆಗುವುದನ್ನು ಎದುರು ನೋಡುತ್ತಿದ್ದ ಮಂದಿಗೆ ಶಾಕಿಂಗ್ ನ್ಯೂಸ್ (Shocking News)ಹೊರಬಿದ್ದಿದೆ.ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿ (Electricity Rates Increased)ಆದೇಶ ಹೊರಡಿಸಿದೆ.

ತ್ರಿಪುರಾ ಸ್ಟೇಟ್ ಇಲೆಕ್ಟ್ರಿಸಿಟಿ ಕಾರ್ಪೊರೇಷನ್ ಲಿಮಿಟೆಡ್ (TSECL) ವಿದ್ಯುತ್ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.ಹೊಸ ವಿದ್ಯುತ್ ದರಗಳು ಅಕ್ಟೋಬರ್ 1, 2023 ರಿಂದ ಜಾರಿಗೆ ಬರಲಿದೆ. ಈ ಬಾರಿ ಸರಾಸರಿ ಶೇ.5ರಿಂದ 7ರಷ್ಟು ವಿದ್ಯುತ್ ದರ ಏರಿಕೆಯಾಗಿರುವ ಬಗ್ಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

TSECL ಈ ಹಿಂದೆ 2014 ರಲ್ಲಿ ವಿದ್ಯುತ್ ದರವನ್ನು ಬದಲಾಯಿಸಿತ್ತು. ಈ ಹಿಂದೆ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳನ್ನು ನಡೆಸಲು TSECL ಗ್ಯಾಸ್ ಖರೀದಿ ಮಾಡಲು ತಿಂಗಳಿಗೆ 15 ಕೋಟಿ ರೂಪಾಯಿ ವ್ಯಯಿಸುತ್ತಿತ್ತು. ಆದರೆ ಈಗ ಈ ವೆಚ್ಚವು ತಿಂಗಳಿಗೆ 35-40 ಕೋಟಿ ರೂಪಾಯಿಗಳಿಗೆ ಹೆಚ್ಚಳವಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಎಲ್ಲಾ ಅಂಶಗಳನ್ನು ಪರಿಗಣಿಸಿ ಮತ್ತು ತ್ರಿಪುರಾ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಜೊತೆಗೆ ಸಮಾಲೋಚನೆ ಮಾಡಿದ ಬಳಿಕ ವಿದ್ಯುತ್ ನಿಗಮವನ್ನು ಉಳಿಸುವ ನಿಟ್ಟಿನಲ್ಲಿ ವಿದ್ಯುತ್ ದರವನ್ನು ಸರಾಸರಿ 5-7% ರಷ್ಟು ಹೆಚ್ಚಿಸಲಾಗುತ್ತದೆ ಎಂದು TSECL ವ್ಯವಸ್ಥಾಪಕ ನಿರ್ದೇಶಕ ದೇಬಶಿಶ್ ಸರ್ಕಾರ್ ಹೇಳಿದ್ದಾರೆ.

 

ಇದನ್ನು ಓದಿ: Chandrayaan-3 MahaQuiz: ಇಸ್ರೋ ಚಂದ್ರಯಾನದ ಮೆಗಾ ಕ್ವಿಜ್ ನಲ್ಲಿ ಪಾಲ್ಗೊಳ್ಳಿ – ನೀವೂ ಲಕ್ಷ ಲಕ್ಷ ಬಹುಮಾನ ಗೆಲ್ಲಿ

Leave A Reply

Your email address will not be published.