Inflation Rates in India:ಬ್ಯಾಂಕ್ ನಲ್ಲಿ ಸಾಲ ಪಡೆದವರಿಗೆ ಸಿಹಿ ಸುದ್ದಿ- RBI ನಿಂದಲೇ ನಿಮಗೆ ಸಿಗಲಿದೆ ಪರಿಹಾರ

Inflation Rates in India: ರಿಸರ್ವ್ ಬ್ಯಾಂಕ್(Reseve Bank Of India)ಫೆಬ್ರವರಿ 8, 2023 ರಂದು ರೆಪೋ ದರವನ್ನು(Repo Rate)ಶೇಕಡಾ 6.5 ಕ್ಕೆ ಹೆಚ್ಚಳ ಮಾಡಿದ್ದು, ಆ ಬಳಿಕ ಅತ್ಯಂತ ಹೆಚ್ಚಿನ ಚಿಲ್ಲರೆ ಹಣದುಬ್ಬರ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಕಚ್ಚಾ ತೈಲ ಬೆಲೆಗಳನ್ನೊಳಗೊಂಡ ಕೆಲವು ಜಾಗತಿಕ ಅಂಶಗಳ ದೆಸೆಯಲ್ಲಿ ಈ ದರಗಳನ್ನು ಅದೇ ಮಟ್ಟದಲ್ಲಿ ಉಳಿಸಿಕೊಂಡಿದೆ.

 

ಆರ್‌ಬಿಐ ಗವರ್ನರ್ ನೇತೃತ್ವದಲ್ಲಿ ಆರು ಸದಸ್ಯರ ಎಂಪಿಸಿಯ ಸಭೆಯನ್ನು ಅಕ್ಟೋಬರ್ 4-6 ರಂದು ನಡೆಯಲಿದೆ ಎನ್ನಲಾಗಿದೆ. ಒಂದು ವೇಳೆ, ರೆಪೋ ದರದಲ್ಲಿ ಯಾವುದೇ ಬದಲಾವಣೆಯಾಗದಿದ್ದಲ್ಲಿ ಬ್ಯಾಂಕ್ ಇಎಂಐ ಮೇಲೆ ಯಾವುದೇ ರೀತಿಯ ವ್ಯತ್ಯಾಸವಿರದು. ಒಂದು ವೇಳೆ ರೆಪೋ ದರ ಹೆಚ್ಚಾದಲ್ಲಿ ಗ್ರಾಹಕರು ಬ್ಯಾಂಕ್ ನಿಂದ ಪಡೆದ ಸಾಲದ ಮೇಲಿನ ಬಡ್ಡಿ ಸಹಿತ ಏರಿಕೆಯಾಗಲಿದೆ. ಈ ಸಂದರ್ಭ ಇಎಂಐ ಕೂಡ ಏರಿಕೆಯಾಗುತ್ತದೆ. ಆದರೆ, ಈ ಬಾರಿ ರೆಪೋ ದರ ಯಥಾ ಸ್ಥಿತಿಯಲ್ಲಿಯೇ ಇರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ದೇಶದಾದ್ಯಂತ ಹಣದುಬ್ಬರ ದರಗಳು(Inflation Rates in India)ಏರಿಕೆ ಮಾಡಿದೆ. ಚಿಲ್ಲರೆ ಹಣದುಬ್ಬರ ಹೆಚ್ಚಿನ ಮಟ್ಟದಲ್ಲಿರುವ ಹಿನ್ನೆಲೆಯಲ್ಲಿ ಯುಎಸ್ ಸೆಂಟ್ರಲ್ ಬ್ಯಾಂಕ್ ಫೆಡರಲ್ ರಿಸರ್ವ್ ಸ್ವಲ್ಪ ಸಮಯದವರೆಗೆ ಕಟ್ಟುನಿಟ್ಟಿನ ಧೋರಣೆ ತೋರಲು ನಿರ್ಣಯಿಸಿದೆ. ಇದರ ಜೊತೆಗೆ ಮುಂದಿನ ತಿಂಗಳ ಆರಂಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ (Reserve Bank of India) ಇಂಡಿಯಾದ ವಿತ್ತೀಯ ಪರಿಶೀಲನಾ ಸಭೆ ನಡೆಯಲಿದ್ದು, ಮತ್ತೊಮ್ಮೆ ರೆಪೋ ದರವನ್ನು ಯಥಾಸ್ಥಿತಿಯಲ್ಲಿಡಲು ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ರಿಸರ್ವ್ ಬ್ಯಾಂಕ್ 2023-24ಕ್ಕೆ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 5.4 ಎಂದು ಅಂದಾಜಿಸಿದ್ದು, ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ.6.2, ಮೂರನೇ ತ್ರೈಮಾಸಿಕದಲ್ಲಿ ಶೇ.5.7 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ.5.2 ಎಂದು ಅಂದಾಜಿಸಲಾಗಿದೆ. ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಹಣದುಬ್ಬರವು ಶೇಕಡಾ 5.2 ಆಗುವ ಸಂಭವವಿದೆ. ಇದರ ನಡುವೆ, ಖಾರಿಫ್ ಬೆಳೆಗಳಿಗೆ, ವಿಶೇಷವಾಗಿ ಬೇಳೆಕಾಳುಗಳಿಗೆ ಸಂಬಂಧಿಸಿದಂತೆ ಅನಿಶ್ಚಿತತೆ ಹೆಚ್ಚಿದ್ದು, ಹೀಗಿದ್ದರು ಕೂಡ, ಗ್ರಾಹಕರ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರವು ಆಗಸ್ಟ್ ನಲ್ಲಿ ಕಡಿಮೆಯಾಗಿ 6.83 ಶೇಕಡಾಕ್ಕೆ ಕುಸಿತ ಕಂಡಿದೆ. ಹಣದುಬ್ಬರವನ್ನು ಶೇಕಡಾ ಎರಡರಷ್ಟು ವ್ಯತ್ಯಾಸದೊಂದಿಗೆ ಶೇಕಡಾ 4 ರಲ್ಲಿ ಇರಿಸಲು ಸರಕಾರವು RBIಗೆ ಜವಾಬ್ದಾರಿಯನ್ನು ವಹಿಸಿದೆ.

Leave A Reply

Your email address will not be published.