Actress Padmini: ಆಟೋ ಚಾರ್ಜ್ ಕೊಡದೇ ಚಾಲಕನ ಜೊತೆಗೆ ಕಿರಿಕ್ ಮಾಡಿಕೊಂಡ ಪುನರ್ ವಿವಾಹ ನಟಿ!

Sandalwood news Kannada serial actress Padmini cheated auto driver news goes Viral

Actress Padmini:ಪುನರ್ ವಿವಾಹ ಖ್ಯಾತಿಯ ಪದ್ಮಿನಿ (Actress Padmini) ಅವರು ಆಟೋ(Auto)ಚಾರ್ಜ್ ಕೊಡಲು ಕಿರಿಕ್ ಮಾಡಿರುವ ಆರೋಪ ಕೇಳಿಬಂದಿದೆ.

 

ಆಟೋ ಚಾಲಕನ ಬಳಿ ಕಿರಿಕ್ ಮಾಡಿಕೊಂಡು ನಟಿ ಪದ್ಮಿನಿ ಸ್ಥಳದಿಂದ ಕಾಲ್ಕಿತ್ತ ಘಟನೆ ನಡೆದಿದೆ ಎನ್ನಲಾಗಿದೆ.ಆಟೋ ಚಾರ್ಜ್ ಪೇಮೆಂಟ್ ಮಾಡದೆ ಘಟನಾ ಸ್ಥಳದಿಂದ ಕಾಲ್ಕಿತ್ತ ಕಿರುತೆರೆ ನಟಿ (Smallscreen actress) ವಿರುದ್ಧ ಡ್ರೈವರ್ ಕೋಪಗೊಂಡಿದ್ದಾನೆ.

ಮಲ್ಲೇಶ್ವರಂನ ಮಾರ್ಗೋಸ ರಸ್ತೆಯಿಂದ ಬನಶಂಕರಿಗೆ ಆಟೋ ಬುಕ್ ಮಾಡಿದ್ದ ಪದ್ಮಿನಿ ಅವರು ಮಲ್ಲೇಶ್ವರಂನಿಂದ ಬನಶಂಕರಿ ಬಳಿ ಹೋಗಿ ಚಾಲಕ ಕುಲ್ದೀಪ್ ಬಳಿ ಕಿರಿಕ್ ಮಾಡಿಕೊಂಡು ಅರ್ಧದಲ್ಲೆ ಇಳಿದು ಆಟೋ ಚಾರ್ಜ್ ನೀಡದೆ ಕಾಲ್ಕಿತ್ತಿದ್ದಾರೆ. ಕ್ಷುಲ್ಲಕ‌ ಕಾರಣಕ್ಕೆ ಕಿರಿಕ್ ಮಾಡಿಕೊಂಡ ಪದ್ಮಿನಿ ಅವರು ಆಟೋ ಚಾರ್ಜ್ 437 ರೂಪಾಯಿ ಕೊಡದೇ ಗಲಾಟೆ ಮಾಡಿಕೊಂಡು ಅರ್ಧ ದಾರಿಯಲ್ಲಿ ಇಳಿದು ಹೋಗಿದ್ದು, ಪದ್ಮಿನಿ ಅವರ ವಿರುದ್ಧ ಆಟೋ ಡ್ರೈವರ್ ಫುಲ್ ಗರಂ ಆಗಿದ್ದಾರೆ.

ಒಂದೆಡೆ ಆಟೋ ಚಾರ್ಜ್ ಸಿಗದೇ ಲಾಸ್ ಆಗಿದ್ದರೆ, ಮತ್ತೊಂದೆಡೆ ದುರ್ನಡತೆ ಆರೋಪದ ಮೇಲೆ ಓಲಾದವರು ಕೂಡ ತಾತ್ಕಲಿಕವಾಗಿ ಅವರ ಕರ್ತವ್ಯಕ್ಕೆ ನಿರ್ಬಂಧ ಹಾಕಿದ್ದಾರೆ. ಕಿರುತರೆ ನಟಿ ಪದ್ಮಿನಿ ಅವರಿಂದ ಆದ ಅನ್ಯಾಯದ ವಿರುದ್ಧ ಚಾಲಕ ಕುಲ್ದೀಪ್ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Vijay Sethupathi: ಈಕೆ ಬೇಡ, ಬೇರೆ ಹೀರೋಯಿನ್ ಇದ್ರೆ ನೋಡಿ – ಡೈರೆಕ್ಟ್ ಕೃತಿ ಶೆಟ್ಟಿಯನ್ನೇ ರಿಜೆಕ್ಟ್ ಮಾಡಿದ ವಿಜಯ್ ಸೇತುಪತಿ !! ಕೊಟ್ಟ ರೀಸನ್ ಏನು ಗೊತ್ತಾ ?!

Leave A Reply

Your email address will not be published.