Sri Ram Sena activitists:ಗೋಮಾಂಸ ಸಾಗಾಟ ತಡೆದು ಗೋವಿನ ತಲೆಯನ್ನೇ ಕಡುಕರ ಮೇಲಿಟ್ಟು, ಕಾರಿಗೆ ಬೆಂಕಿಹಚ್ಚಿದ ಶ್ರೀರಾಮಸೇನೆ – ನಂತರ ಆದದ್ದೇನು?

Bangalore doddaballapura police take Sri Ram Sena activitists for custody news

Sri Ram Sena Activitists: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ದೊಡ್ಡಬಳ್ಳಾಪುರ (Daddaballapur) ನಗರದ ಐಬಿ‌ ವೃತ್ತದಲ್ಲಿ ಅಕ್ರಮವಾಗಿ 15 ಟನ್ ಗೋಮಾಂಸ ಸಾಗಿಸುತ್ತಿದ್ದ ನಾಲ್ಕು ಗೂಡ್ಸ್ ವಾಹನಗಳನ್ನು ಶ್ರೀರಾಮಸೇನೆ ಕಾರ್ಯಕರ್ತರು(Sri Ram Sena Activitists)ತಡೆದ ಘಟನೆ ನಡೆದಿದೆ.

ಹಿಂದೂಪುರ ಯಲಹಂಕ ರಾಜ್ಯ ಹೆದ್ದಾರಿ ಮಾರ್ಗವಾಗಿ ದೊಡ್ಡಬಳ್ಳಾಪುರ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ವಾಹನಗಳನ್ನು ತಡೆದ ಪರಿಣಾಮ ಶ್ರೀರಾಮಸೇನೆ(Sriram Sena) ಕಾರ್ಯಕರ್ತರ ಮೇಲೆ ಗೋಮಾಂಸ ಸಾಗಾಟ ಮಾಡುವರು ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ, ಶ್ರೀರಾಮಸೇನೆ ಕಾರ್ಯಕರ್ತರು ಕುಪಿತರಾಗಿ ಆಕ್ರೋಶಗೊಂಡು ಗೋಮಾಂಸ ಸಾಗಾಟ ಮಾಡುತ್ತಿದ್ದವರ ಕಾರಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ ಎನ್ನಲಾಗಿದೆ. ಈ ವಿಚಾರ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗೂಡ್ಸ್ ವಾಹನಗಳಲ್ಲಿದ್ದ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

ಶ್ರೀರಾಮ ಸೇನೆ ಕಾರ್ಯಕರ್ತರು ಗೋಮಾಂಸ ಸಾಗಾಟ ಮಾಡುತ್ತಿದ್ದವರ ತಲೆಯ ಮೇಲೆ‌ ಹಸುಗಳ ರುಂಡಗಳನ್ನು ಇರಿಸಿದ್ದರು ಎನ್ನಲಾಗಿದ್ದು, ಈ ಸಂದರ್ಭ ಪೋಲೀಸರು ಹಲ್ಲೆ ಮಾಡದಂತೆ ಸೂಚನೆ ನೀಡಿದ್ದಾರೆ. ಐಬಿ ವೃತ್ತ ಹಾಗೂ ಗುಂಜೂರು ಟೋಲ್ಗಳ ಸಿಸಿಟಿವಿಯನ್ನು ಪೊಲೀಸರು ಪರಿಶೀಲಿಸಿದ್ದು, ಇದರ ಜೊತೆಗೆ ಕಾರಿಗೆ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ 20 ಕ್ಕೂ ಅಧಿಕ ಶ್ರೀರಾಮಸೇನೆ ಕಾರ್ಯಕರ್ತರನ್ನು ದೊಡ್ಡಬಳ್ಳಾಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: CM Siddaramaiah On PM Modi: ಮಹಿಳೆಯರಿಗೆ ಟೋಪಿ ಹಾಕಿದ ದೇವಮಾನವ !! CM ಸಿದ್ದು ಹೀಗಂದಿದ್ದು ಯಾರಿಗೆ ?

Leave A Reply

Your email address will not be published.