Congress Politics: ಡಿಸಿಎಂ ಕುರಿತು ಕಾಂಗ್ರೆಸ್ ನಲ್ಲಿ ಸಿಡಿಯಿತು ಮತ್ತೊಂದು ಬಾಂಬ್- ಬೇಕಾಗಿರುವುದು 3 ಅಲ್ಲ 5 ಡಿಸಿಎಂ ಎಂದ ಬಸವರಾಜ ರಾಯರೆಡ್ಡಿ
Karnataka politics news congress government basavaraja RayaReddy wants five DCM
Congress Politics : ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ (DK Shivakumar) ಅವರಲ್ಲದೆ ಇನ್ನೂ ಮೂರು ಹೊಸ ಡಿಸಿಎಂ ಸ್ಥಾನಗಳನ್ನು ಸೃಷ್ಟಿ ಮಾಡಿ ಬೇರೆ ಬೇರೆ ವರ್ಗಕ್ಕೆ ಅವಕಾಶ ನೀಡಬೇಕು ಎಂಬ ಕಾಂಗ್ರೆಸ್(Congress Politics) ಸಹಕಾರ ಸಚಿವ ಕೆ.ಎನ್. ರಾಜಣ್ಣ (KN Rajanna) ಅವರು ಡಿಮ್ಯಾಂಡ್ ಮಾಡಿದ್ದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಶಾಸಕ ಬಸವರಾಜ ರಾಯರೆಡ್ಡಿ (MLA Basavaraja Rayareddy) ಮೀರಿಸಿ ಹೊಸದಾಗಿ ಐದು ಉಪಮುಖ್ಯಮಂತ್ರಿಗಳು ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಜತೆ ಹೆಚ್ಚುವರಿಯಾಗಿ ಡಿಸಿಎಂಗಳನ್ನು ಮಾಡುವ ವಿಚಾರ ಪಕ್ಷದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಜಿ. ಪರಮೇಶ್ವರ್ ಸೇರಿದಂತೆ ಕೆಲವೇ ಕೆಲವು ಮಂದಿ ಈ ಬೇಡಿಕೆಗೆ ಬೆಂಬಲ ನೀಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಅತ್ಯಾಪ್ತ ವಲಯದಿಂದ ಈ ರೀತಿಯ ಬೇಡಿಕೆ ಬರುತ್ತಿರುವುದು ನಿಜಕ್ಕೂ ನೋಡುಗರಿಗೆ ವಿಸ್ಮಯ ಮೂಡಿಸುತ್ತದೆ. ಈ ಹಿಂದೆ ಮೂವರು ಬೇಕೆಂದ ಕೆ.ಎನ್. ರಾಜಣ್ಣ ಅವರಿಗೆ ಬೆಂಬಲ ನೀಡಿರುವ ಬಸವರಾಜ ರಾಯರೆಡ್ಡಿ ಒಟ್ಟು ಆರು ಡಿಸಿಎಂಗಳ ಪೈಕಿ ಡಿ.ಕೆ. ಶಿವಕುಮಾರ್ ಅವರು ಪ್ರಿನ್ಸಿಪಾಲ್ ಡಿಸಿಎಂ (Principal DCM) ಆಗಲಿ ಎಂಬ ಬಿಟ್ಟಿ ಸಲಹೆ ನೀಡಿದ್ದಾರೆ.
ಬಸವರಾಜ ರಾಯರೆಡ್ಡಿ ಅವರ ಬೇಡಿಕೆ ಅನುಸಾರ ರಾಜ್ಯದಲ್ಲಿ ಮೂರಲ್ಲ, ಇನ್ನೂ ಐದು ಹೆಚ್ಚು ಡಿಸಿಎಂ ಹುದ್ದೆಗಳು ಸೃಷ್ಟಿಯಾಗಬೇಕು.ಈಗ ಡಿಕೆಶಿ ಡಿಸಿಎಂ ಆಗಿದ್ದು, ಅವರೊಂದಿಗೆ ಪ್ರಾದೇಶಿಕವಾರು ಮತ್ತು ಜಿಲ್ಲಾವಾರು ಅವಕಾಶ ನೀಡಿ,ಲಿಂಗಾಯತ, ಮುಸ್ಲಿಂ, ದಲಿತ, ಒಂದು ಮಹಿಳೆಗೆ ಅವಕಾಶ ಕೊಡಬೇಕು ಎಂದು ಹೇಳಿಕೊಂಡಿದ್ದಾರೆ. ಬಸವರಾಜ ರಾಯರೆಡ್ಡಿ ಅವರ ಪ್ರಕಾರ, ಐದು ಮಂದಿ ಡಿಸಿಎಂ ಆದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಸಮುದಾಯಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲ ನೀಡುತ್ತದೆ ಎಂದಿದ್ದು, ಹೀಗಾಗಿ ನಾನು ಡಿಸಿಎಂ ಹುದ್ದೆ ಸೃಷ್ಟಿ ವಿಚಾರದಲ್ಲಿ ರಾಜಣ್ಣ ಅವರನ್ನು ಬೆಂಬಲಿಸುತ್ತೇನೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Eclipse: ಸದ್ಯದಲ್ಲೇ ಸಂಭವಿಸಲಿದೆ 2 ಗ್ರಹಣಗಳು – ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ