Bangalore Strike: ಈ ದಿನ ಮತ್ತೆ ಬಂದ್ ಆಗಲಿದೆ ಬೆಂಗಳೂರು – ಕಾರಣವೇನು ಗೊತ್ತಾ?
Karnataka news Bengaluru strike Cauvery water disputes Bengaluru bandh on Tuesday
Bengaluru Bandh: ರಾಜ್ಯದಲ್ಲಿ ಕಾವೇರಿ ನೀರಿಗಾಗಿ ಪ್ರತಿಭಟನೆ ತೀವ್ರವಾಗಿದ್ದು, ಕಾವೇರಿ ನೀರನ್ನು ನಂಬಿಕೊಂಡ ರೈತರ ಪಾಡು ಕೇಳುವುದೇ ಬೇಡ. ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ ಬೆನ್ನಲ್ಲೇ ಇಂದು ಶನಿವಾರ ಮಂಡ್ಯ ಬಂದ್ ಆಗಿದೆ. ಇದೀಗ ಬೆಂಗಳೂರು ಬಂದ್(bengaluru bandh) ಗೆ ಕರೆ ನೀಡಲಾಗಿದೆ.
ರೈತರ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದು, ಈ ನಡುವೆ ಕಾವೇರಿ ನೀರಿಗಾಗಿ ಸೆ.26ರಂದು ಬೆಂಗಳೂರು ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ತಮಿಳುನಾಡಿಗೆ (Tamilnadu)ಮತ್ತೆ ಕಾವೇರಿ ನೀರು(Cauvery Issue)ಬಿಡುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ ಹಿನ್ನೆಲೆ ರೈತ ಸಂಘಟನೆ, ಕನ್ನಡಪರ ಸಂಘಟನೆಗಳು ಇಂದು ಮಂಡ್ಯ, ಮದ್ದೂರು ಬಂದ್ ಗೆ ಕರೆ ನೀಡಿ ರಸ್ತೆಗಿಳಿದು ಹೋರಾಟಕ್ಕೆ ಇಳಿದಿವೆ. ನಾಡಿದ್ದು ಮಂಗಳವಾರ ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಮಂಗಳವಾರ ರಾಜಧಾನಿ ಬೆಂಗಳೂರು ಬಂದ್ ಗೆ ಕರೆ ನೀಡಿದ್ದು, ಹೀಗಾಗಿ, ಹಿನ್ನೆಲೆಯಲ್ಲಿ ಬೆಂಗಳೂರು ಸೆ. 26ರಂದು ಮಂಗಳವಾರ ಸಂಪೂರ್ಣ ಬಂದ್ ಆಗುವುದು ಖಚಿತ ಎನ್ನಲಾಗಿದೆ.
ಇದನ್ನೂ ಓದಿ: Kabaddi Player Died: ಕಬಡ್ಡಿ ಆಟಗಾರನ ರಣಭೀಕರ ಹತ್ಯೆ: ತುಂಡು ತುಂಡಾಗಿ ದೇಹ ಕತ್ತರಿಸಿ ಮನೆ ಮುಂದೆ ಎಸೆದ ಪಾಪಿಗಳು!