Eclipse: ಸದ್ಯದಲ್ಲೇ ಸಂಭವಿಸಲಿದೆ 2 ಗ್ರಹಣಗಳು – ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
Astrology news eclipse in October 2023 two eclipse solar and lunar eclipse in the month of October
Eclipse in October: ಈ ವರ್ಷದ ಎರಡನೇ ಮತ್ತು ಕೊನೆಯ ಸೂರ್ಯ ಗ್ರಹಣ ಮುಂದಿನ ತಿಂಗಳು ಸಂಭವಿಸಲಿದೆ(Eclipse in October). ಅಕ್ಟೋಬರ್ 14, 2023ರಂದು ಈ ವರ್ಷದ ಕೊನೆಯ ಸೂರ್ಯ ಗ್ರಹಣ ಸಂಭವಿಸಲಿದೆ.
ಈ ವರ್ಷ 4 ಗ್ರಹಣಗಳಲ್ಲಿ ಮೊದಲ ಸೂರ್ಯಗ್ರಹಣ ಏಪ್ರಿಲ್ 20 ರಂದು ಸಂಭವಿಸಿದರೆ, ಎರಡನೇ ಚಂದ್ರಗ್ರಹಣವು ಮೇ 5 ರಂದು ಸಂಭವಿಸಿದೆ. ಇನ್ನುಳಿದ ಎರಡು ಗ್ರಹಣಗಳು ಅಕ್ಟೋಬರ್‌ನಲ್ಲಿ ಸಂಭವಿಸಲಿವೆ. ವರ್ಷದ ಮೂರನೇ ಗ್ರಹಣ ಸೂರ್ಯಗ್ರಹಣ 2023 ಅಕ್ಟೋಬರ್ 14 ರಂದು ಸಂಭವಿಸಲಿದ್ದು, ಇದು ವೃತ್ತಾಕಾರದ ಸೂರ್ಯಗ್ರಹಣವಾಗಿರಲಿದೆ. ಟೆಕ್ಸಾಸ್, ಮೆಕ್ಸಿಕೊ, ಮಧ್ಯ ಅಮೆರಿಕ, ಕೊಲಂಬಿಯಾ, ಬ್ರೆಜಿಲ್‌ನ ಕೆಲವು ಭಾಗಗಳಲ್ಲಿ, ಅಲಾಸ್ಕಾ ಮತ್ತು ಅರ್ಜೆಂಟೀನಾದಲ್ಲಿ ಗ್ರಹಣ ಗೋಚರಿಸಲಿದೆ. ಆದರೆ, ಇದು ಭಾರತದಲ್ಲಿ ಗೋಚರವಾಗುವುದಿಲ್ಲ. ಹೀಗಾಗಿ, ಇದರ ಅವಧಿಯೂ ಭಾರತಕ್ಕೆ ಮಾನ್ಯವಾಗುವುದಿಲ್ಲ.
ಎಲ್ಲರಿಗೂ ಗೊತ್ತಿರುವ ಹಾಗೆ ಪ್ರತಿ ವರ್ಷ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣ ಸಂಭವಿಸುತ್ತದೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋದ ಸಂದರ್ಭ ಚಂದ್ರ ಗ್ರಹಣ ಸಂಭವಿಸುತ್ತವೆ. ಇದರಿಂದಾಗಿ ಚಂದ್ರನು ಭೂಮಿಯ ನೆರಳಿನಲ್ಲಿ ಚಲಿಸುತ್ತಾನೆ. ಹೀಗಾಗಿ, ಕೆಲವು ಗ್ರಹಣಗಳು ಕೆಲ ಅಡ್ಡಪರಿಣಾಮಗಳನ್ನು ಬೀರುತ್ತವೆ. ಅಕ್ಟೋಬರ್ 28 ರಂದು ಚಂದ್ರಗ್ರಹಣ ಸಂಭವಿಸಲಿದ್ದು, ಇದು ವರ್ಷದ ನಾಲ್ಕನೇ ಹಾಗೂ ಕೊನೆಯ ಗ್ರಹಣವಾಗಿರಲಿದೆ. ಇದು ಭಾಗಶಃ ಚಂದ್ರಗ್ರಹಣವಾಗಿದ್ದು, ಭಾರತವನ್ನು ಹೊರತುಪಡಿಸಿ, ಯುರೋಪ್, ಆಸ್ಟ್ರೇಲಿಯಾ, ಉತ್ತರ-ದಕ್ಷಿಣ ಆಫ್ರಿಕಾ, ಆರ್ಕ್ಟಿಕ್, ಅಂಟಾರ್ಟಿಕಾ, ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಏಷ್ಯಾ ಸೇರಿದಂತೆ ಹಿಂದೂ ಮಹಾಸಾಗರದ ಹಲವು ಭಾಗಗಳಲ್ಲಿ ಇದು ಗೋಚರಿಸುತ್ತದೆ. ಈ ಗ್ರಹಣವು ಭಾರತದ ಕೆಲವು ಭಾಗಗಳಲ್ಲಿ ಗೋಚರವಾಗಲಿದೆ. ಈ ಅವಧಿ ಭಾರತಕ್ಕೆ ಮಾನ್ಯವಾಗಿರುತ್ತದೆ.
ಭೂಮಿಯು ಚಂದ್ರ ಮತ್ತು ಸೂರ್ಯನ ನಡುವೆ ಹಾದುಹೋದಾಗ ಮತ್ತು ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಇದು ಸಂಭವಿಸುತ್ತದೆ. ಈ ಗ್ರಹಣವು ಶುಕ್ರವಾರ, ಅಕ್ಟೋಬರ್ 29 ರಂದು 1:06 ಕ್ಕೆ ಗೋಚರಿಸಲಿದ್ದು, 2:22 ಕ್ಕೆ ಕೊನೆಗೊಳ್ಳಲಿದೆ. ಈ ಗ್ರಹಣದಲ್ಲಿ ಚಂದ್ರನ ಬಣ್ಣ ಕಿತ್ತಳೆ ಬಣ್ಣದಂತೆ ಕಂಡುಬರುತ್ತದೆ. ವರ್ಷದ ಎರಡನೇ ಚಂದ್ರಗ್ರಹಣವನ್ನು ಭಾರತದಿಂದ ನೋಡಬಹುದಾಗಿದೆ
ಇದನ್ನೂ ಓದಿ: Bangalore Strike: ಈ ದಿನ ಮತ್ತೆ ಬಂದ್ ಆಗಲಿದೆ ಬೆಂಗಳೂರು – ಕಾರಣವೇನು ಗೊತ್ತಾ?