Kerala lottery: ಮಂಗಳೂರಿನ ಯುವಕನಿಗೆ ಹೊಡೆಯಿತು ಬರೋಬ್ಬರಿ 25 ಕೋಟಿ ರೂ. ಲಾಟ್ರಿ- ಆದ್ರೆ ಶುಭಾಶಯಗಳಿಗೆ ಬೆಚ್ಚಿಬಿದ್ದ !! ಅರೆ ಏನಿದು ವಿಚಿತ್ರ?
Mangaluru news Kerala lottery win mangalorean bored of receiving wishes for winning 25 crores in lottery
Kerala Lottery: ತನ್ನ ಪಾಡಿಗೆ ತಾನು ಇದ್ದಾಗ, ಕೋಟಿ ಕೋಟಿ ಲಾಟರಿ ಹೊಡೆದಾಗ ಯಾರಿಗೆ ತಾನೆ ಖುಷಿ ಆಗಲ್ಲ ಹೇಳಿ? ಜೊತೆಗೆ ಖುಷಿ ಆದಷ್ಟು ಆತಂಕ ಕೂಡ ಕಾಡುತ್ತದೆ! ಹಾಗೆಯೇ ಮಂಗಳೂರಿನ ಮಂಜನಾಡಿಯ ಯುವಕನಿಗೂ ಕೇರಳ ರಾಜ್ಯ ಲಾಟರಿಯಲ್ಲಿ (Kerala state Lottery) 25 ಕೋಟಿ ಬಂದಿದೆ.
ಹೌದು, ಮಂಜನಾಡಿ ಮೊಂಟೆಪದವು ನಿವಾಸಿ ಆಸೀಫ್ ನಿಗೆ ಬಂಪರ್ ಅದೃಷ್ಟ ಒಲಿದು ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಆದರೆ, ಈ ಸುದ್ದಿ ಆತನಿಗೆ ಭಾರಿ ಕಿರಿಕಿರಿಯಾಗಿದೆ. ಶುಭಾಶಯಗಳ ಮಹಾಪೂರದಿಂದ (wishes) ಆತ ಕಂಗಾಲಾಗಿ ಹೋಗಿದ್ದಾನೆ.
ಮೂಲತಃ ಆಸೀಫ್ ಎಂಬ ಯುವಕ ಬೆಂಗಳೂರಿನಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಆತನಿಗೆ ಎರಡು ದಿನಗಳ ಹಿಂದಷ್ಟೇ ಡ್ರಾ ಆದ ಕೇರಳದ ರೂ.25 ಕೋಟಿ ಲಾಟರಿ(Kerala lottery) ಒಲಿದಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆರಂಭದಲ್ಲಿ ಈ ವಿಷಯ ಆಸಿಫ್ ಅವರಿಗೆ ಗೊತ್ತೇ ಆಗಿರಲಿಲ್ಲ. ಆಸಿಫ್ ಬೆಂಗಳೂರಿನಿಂದ ಕಾರಿನಲ್ಲಿ ಊರಿಗೆ ಬರುತ್ತಿದ್ದಾಗ, ಶುಭಾಶಯಗಳ ಸುರಿಮಳೆ ಎದುರಾಗಿತ್ತು. ಕೆಲವು ಫೋನ್ ಮಾಡಿದ್ದರೆ, ಇನ್ನು ಕೆಲವರು ಮೆಸೇಜ್ ಮಾಡಿದ್ದರು. ವಿಶೇಷ ಎಂದರೆ ಈತನಿಗೆ ಸ್ನೇಹಿತರ ಮೂಲಕವೇ ತಾನು 25 ಕೋಟಿ ರೂ. ಲಾಟರಿ ಗೆದ್ದ ವಿಚಾರ ತಿಳಿದಿದೆ.
ಆದರೆ 25 ಕೋಟಿ ರೂ. ಲಾಟರಿ ಹೊಡೆದರೆ ಹಣ ಏನು ಮಾಡುವುದಪ್ಪಾ ಎನ್ನುವ ಯೋಚನೆಯೂ ಸರಿದುಹೋಯಿತು. ಲಾಟರಿ ಒಲಿದರೆ ಯಾರಿಗೆ ಸಹಾಯ ಮಾಡಲಿ, ಬಿಡಲ?! ಅನ್ನೋ ಚಿಂತೆಯಲ್ಲಿ ಮುಳುಗಿದ್ದ. ಕೊನೆಗೆ ಕಿರಿಕಿರಿಗೆ ಒಳಗಾದ ಆತ ನನಗೆ ಈ ಜನ್ಮದಲ್ಲಿ ಲಾಟರಿ ಹೊಡೆಯದಿರಲಿ ಎನ್ನುವ ಯೋಚನೆ ಕೂಡ ಮಾಡಿಬಿಟ್ಟ.
ಇನ್ನೊಂದು ಆಶ್ಚರ್ಯ ಎಂದರೆ, ನಾನು ಲಾಟರಿ ಟಿಕೆಟೇ ಖರೀದಿಸಿಲ್ಲ. ಹಾಗಿರುವಾಗ ಲಾಟರಿ ಹೊಡೆದದ್ದು ಹೇಗೆ? ನಿಜಕ್ಕೂ ಆಸಿಫ್ ಯೋಚಿಸುತ್ತಿದ್ದ ಮೂಲ ಪ್ರಶ್ನೆ ಅದೇ ಆಗಿತ್ತು. ಈ ಕುರಿತು ಆಸೀಫ್ ಒಬ್ಬರಲ್ಲಿ ವಿಚಾರಿಸಿದಾಗ ನಿಜಾಂಶ ಬೆಳಕಿಗೆ ಬಂದಿದೆ. ವಾಟ್ಸ್ ಅಪ್ ಮೂಲಕ ಬಂದಿದ್ದ ಲಾಟರಿ ಗೆದ್ದವರ ಲಿಂಕ್ ಬಳಸಿ ತಮ್ಮ ಸ್ನೇಹಿತರ ಭಾವಚಿತ್ರ ಹಾಗೂ ಹೆಸರನ್ನು ಹಾಕಿ ಮಜಾ ತೆಗೆದುಕೊಳ್ಳುವ ತಂಡ ಈ ಕೆಲಸ ಮಾಡಿದೆ ಎಂದು.
ಈಗಾಗಲೇ ಕೇರಳದ ಲಾಟರಿ ಗಳಿಸಿದವರ ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರವನ್ನು ಬಳಸಿ ಬೇರೆ ಫೋಟೊ ಅಂಟಿಸಿ ಸಾಮಾಜಿಕ ಜಾಲತಾಣದಲ್ಲಿ ರವಾನಿಸುತ್ತಿರುವ ವಿಚಾರವೂ ಬೆಳಕಿಗೆ ಬಂದಿದೆ. ಈ ಹಿಂದೆಯೂ ಜಿಲ್ಲೆಯ ವಿವಿಧೆಡೆ ಇಂತಹ ಪ್ರಕರಣಗಳು ನಡದಿರುವುದಾಗಿಯು ತಿಳಿದುಬಂದಿದೆ. ಕೊನೆಗೂ ಆಸಿಫ್ ವಿಷಯದಲ್ಲಿ ಈ ಲಾಟರಿ ಚಿಂತೆಯು ರಾತ್ರಿ ಬೆಳಗಾಗುವಷ್ಟರಲ್ಲಿ ತಿರುಕನ ಕನಸಿನಂತೆ ಸಮಾಪ್ತಿ ಆಗಿದೆ.
ಇದನ್ನೂ ಓದಿ: ಮಹಿಳೆಯರೇ ಕೇಂದ್ರ ಸರ್ಕಾರದ ಈ ಯೋಜನೆಗಳಿಂದ ನಿಮ್ಮ ಬದುಕು ಕಟ್ಟಿಕೊಳ್ಳಿ – ಇಲ್ಲಿದೆ ನೋಡಿ ಭರ್ಜರಿ ಆರ್ಥಿಕ ಲಾಭ