Abhinava Halaveerappa Swamiji: ಒಂದೊಂದೇ ಬಯಲಾಗ್ತಿದೆ ಹಾಲವೀರಪ್ಪನ ಕರ್ಮಖಾಂಡ- ಪ್ರಧಾನಿ ಹೆಸರಿನಲ್ಲೇ 1.50 ಕೋಟಿ ಪಡೆದಿದ್ದ ಅಭಿನವ ಹಾಲಶ್ರೀ –
Karnataka news BJP ticket cheating case Abhinava Halaveerappa Swamiji received rs 1.50 crore in the name of Prime Minister
Abhinava Halaveerappa Swamiji: ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಹಣ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ (Chaitra Kundapura) ಮತ್ತು ಆಕೆಯ ಗ್ಯಾಂಗ್ನನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದು, ಈ ತನಿಖೆಯ ವೇಳೆ ದಿನಕ್ಕೊಂದು ಸ್ಫೋಟಕ ವಿಚಾರಗಳು ಬಯಲಾಗುತ್ತಿದೆ ಆರೋಪಿಗಳಿಂದ ಸಿಸಿಬಿ ಪೊಲೀಸರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟಿ-ಕೋಟಿ ಹಣ ವಶ ಪಡಿಸಿಕೊಂಡಿದ್ದಾರೆ.
ಚೈತ್ರಾ ಕುಂದಾಪುರ & ಗ್ಯಾಂಗ್ನಿಂದ (Chaitra Kundapura And Gang) ₹5 ಕೋಟಿ ಡೀಲ್ ಕೇಸ್ ತನಿಖೆ ಬಿರುಸುಗೊಂಡಿದೆ. ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ವಂಚಿಸಿದ್ದ ಪ್ರಕರಣದ ಆರೋಪಿಯಾಗಿರುವ ಅಭಿನವ ಹಾಲವೀರಪ್ಪ ಸ್ವಾಮೀಜಿ(Abhinava Halaveerappa Swamiji), ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದ ಹಾಲವೀರಪ್ಪ ಸ್ವಾಮೀಜಿ ಅವರನ್ನು ವಿಚಾರಣೆ ನಡೆಸಿದ್ದ ಸಿಸಿಬಿ ಪೊಲೀಸರು ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಹಾಲವೀರಪ್ಪ ಸ್ವಾಮೀಜಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರು ಬಳಸಿ, ₹ 1.50 ಕೋಟಿ ಪಡೆದಿದ್ದ ಸಂಗತಿ ತನಿಖೆಯಿಂದ ಬಯಲಾಗಿದ್ದು, ಈ ಕುರಿತು ಲಿಖಿತ ಹೇಳಿಕೆ ಪಡೆದು, ಬೆಂಗಳೂರು ಹಾಗೂ ಹಿರೇಹಡಗಲಿಯಲ್ಲಿ ಮಹಜರು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆಯಲಾಗುತ್ತಿದೆ. ದೂರುದಾರಾನಾದ ಗೋವಿಂದ ಬಾಬು ಪೂಜಾರಿಗೆ 2022ರ ಸೆಪ್ಟೆಂಬರ್ನಲ್ಲಿ ಕರೆ ಮಾಡಿದ್ದ ಚೈತ್ರಾ ಮತ್ತು ರಮೇಶ್ ಅಲಿಯಾಸ್ ವಿಶ್ವನಾಥ್ ಜೀ, ‘ಬೈಂದೂರಿನಿಂದ ಸ್ಪರ್ಧಿಸಲು ನಿಮಗೆ ಟಿಕೆಟ್ ನೀಡಲು ಬಿಜೆಪಿ ಕೇಂದ್ರದ ನಾಯಕರು ಒಪ್ಪಿಗೆ ಸೂಚಿಸಿದ್ದು, ಕರ್ನಾಟಕದಲ್ಲಿ ಸೀಟು ಹಂಚಿಕೆ ಮಾಡಲು ಹೊಸಪೇಟೆಯ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿ ಅವರ ಶಿಫಾರಸು ಮಾಡಬೇಕು. ಹೀಗಾಗಿ, ಪ್ರಭಾವಿಗಳಾಗಿರುವ ಹಾಲಶ್ರೀ ಸ್ವಾಮೀಜಿಯನ್ನ ಭೇಟಿಯಾಗಲು ಸೂಚಿಸಿದ್ದಾರೆ. ಇವರ ಮಾತನ್ನು ನಿಜ ಎಂದು ಭಾವಿಸಿ ಗೋವಿಂದ ಬಾಬು, ಸ್ವಾಮೀಜಿಯನ್ನು ಬೆಂಗಳೂರಿನ ವಿಜಯನಗರದಲ್ಲಿರುವ ಮನೆ ಹಾಗೂ ಹಿರೇಹಡಗಲಿ ಮಠದಲ್ಲಿ ಹಲವು ಬಾರಿ ಭೇಟಿಯಾಗಿದ್ದಾರೆ ಎಂದು ಸಿಸಿಬಿ ಮೂಲಗಳು ಹೇಳಿವೆ ಎನ್ನಲಾಗಿದೆ. ಪ್ರಧಾನಿ ಹೆಸರು ಬಳಸಿರುವ ಬಗ್ಗೆ ಸ್ವಾಮೀಜಿ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಬಲ್ಲ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಗೋವಿಂದ ಬಾಬು ಸ್ವಾಮೀಜಿಯನ್ನು ಭೇಟಿ ಆದಾಗ ‘ಟಿಕೆಟ್ ಆಯ್ಕೆ ಸಮಿತಿಯಲ್ಲಿ ವಿಶ್ವನಾಥ್ ಜೀ ಅವರು ಹಿರಿಯರಾಗಿದ್ದು, ಅವರೇ ನನಗೆ ಕರ್ನಾಟಕದ ಜವಾಬ್ದಾರಿ ನೀಡಿದ್ದು, ಪ್ರಧಾನ ಮಂತ್ರಿ ಮೋದಿ ಅವರ ಜೊತೆಗೂ ನಾನು ನಿಕಟ ಸಂಪರ್ಕ ಇಟ್ಟುಕೊಂಡಿದ್ದೇನೆ. ನಿಮಗೆ ಟಿಕೆಟ್ ಕೊಡಿಸುತ್ತೇನೆ. ಇದಕ್ಕಾಗಿ ₹ 1.50 ಕೋಟಿ ನೀಡಬೇಕು’ ಎಂದಿದ್ದರಂತೆ. ಸ್ವಾಮೀಜಿ ಹೇಳಿದ್ದ ಸುಳ್ಳನ್ನೇ ನಿಜವೆಂದು ಭಾವಿಸಿ ದೂರುದಾರ ಹಣ ನೀಡಿದ್ದಾರೆ.
ಈ ನಡುವೆ, ಮತ್ತೊಂದು ಮೆಗಾ ಡ್ರಾಮ ಮಾಡಿರುವ ಚೈತ್ರ ಕುಂದಾಪುರ ಆಂಡ್ ಗ್ಯಾಂಗ್ , ‘ವಿಶ್ವನಾಥ್ ಜೀ ತೀರಿಕೊಂಡಿದ್ದಾರೆ ಎಂದೆಲ್ಲ ಹೇಳಿದ್ದಾರೆ. ಗೋವಿಂದ ಬಾಬು ಅವರಿಗೆ ಮೋಸ ಹೋಗಿದ್ದು ಅರಿವಾಗುತ್ತಿದ್ದಂತೆ ಹಣ ವಾಪಸು ಪಡೆಯಲು ಪ್ರಯತ್ನಿಸಿದ್ದರಂತೆ. ಈ ನಿಟ್ಟಿನಲ್ಲಿ ಸ್ವಾಮೀಜಿಯನ್ನು ಮತ್ತೊಮ್ಮೆ ಭೇಟಿಯಾಗಿದ್ದರು ಎನ್ನಲಾಗಿದೆ. ಈ ಸಂದರ್ಭ, ‘ವಿಶ್ವನಾಥ್ ಜೀ ಯಾರು ಎಂಬುದು ನನಗೆ ತಿಳಿದಿಲ್ಲ. ನಾನು ಪಡೆದಿರುವ ₹ 1.50 ಕೋಟಿ ಹಣವನ್ನು ಒಂದು ತಿಂಗಳೊಳಗೆ ಹಿಂತಿರುಗಿಸುತ್ತೇನೆ. ಈ ವಿಚಾರದಲ್ಲಿ ನನ್ನನ್ನು ಬಿಟ್ಟು ಬಿಡಿ’ ಎಂದು ಸ್ವಾಮೀಜಿ ಮನವಿ ಮಾಡಿದ್ದರಂತೆ. ಆ ಬಳಿಕ ಸ್ವಾಮೀಜಿ ಕೂಡ ತಲೆ ಮರೆಸಿಕೊಂಡಿದ್ದರು. ಒಟ್ಟಿನಲ್ಲಿ, ಗೋವಿಂದ ಬಾಬು ವಂಚನೆ ಪ್ರಕರಣದಲ್ಲಿ ಬಗೆದಷ್ಟು ರೋಚಕ ಮಾಹಿತಿಗಳು ಹೊರಬಿದ್ದಿವೆ.
ಇದನ್ನೂ ಓದಿ: Yuvanidhi Scheme: ಮತ್ತೊಂದು ಗ್ಯಾರಂಟಿ ಜಾರಿಗೆ ಸದ್ದಿಲ್ಲದೆ ನಡೆಯುತ್ತಿದೆ ತಯಾರಿ- ಇವರಿಗಂತೂ ಸಿಗಲಿ ಭರ್ಜರಿ ಲಾಭ