Government Scheme for Women: ಮಹಿಳೆಯರೇ ಕೇಂದ್ರ ಸರ್ಕಾರದ ಈ ಯೋಜನೆಗಳಿಂದ ನಿಮ್ಮ ಬದುಕು ಕಟ್ಟಿಕೊಳ್ಳಿ – ಇಲ್ಲಿದೆ ನೋಡಿ ಭರ್ಜರಿ ಆರ್ಥಿಕ ಲಾಭ
Central government schemes top five schemes of Central Government for women empowerment
Government Scheme for Women: ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬ ಮಹಾ ಉದ್ದೇಶದಿಂದ ಸರ್ಕಾರ ಕೆಲವು ಯೋಜನೆಗಳನ್ನು ಶುರು ಮಾಡಿದೆ. ಮಹಿಳೆಯರು ಸಮಾಜದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಯಾವುದೇ ರೀತಿಯಲ್ಲಿ ಹಿಂದುಳಿಯದಂತೆ ಪುರುಷರಂತೆ ಮಹಿಳೆಯರು ಸಬಲರಾಗಲು, ಸ್ವಾವಲಂಬಿಯಾಗಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಅದರಂತೆ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸಲು, ಶಿಕ್ಷಣ, ಸುರಕ್ಷತೆ ಅಗತ್ಯವನ್ನು ಪೂರೈಸಲು ನೆರವಾಗುವಂತೆ ಸರ್ಕಾರ ಮಹಿಳೆಯರಿಗಾಗಿ 5 ಪ್ರಮುಖ ಯೋಜನೆಗಳು (Government Scheme for Women) ಜಾರಿ ತಂದಿದೆ.
1. ಮಹಿಳಾ ಶಕ್ತಿ ಕೇಂದ್ರ ಯೋಜನೆ :
ಕೌಶಲ್ಯಾಭಿವೃದ್ಧಿ, ಉದ್ಯೋಗ, ಡಿಜಿಟಲ್ ಸಾಕ್ಷರತೆ, ಆರೋಗ್ಯ ಮತ್ತು ಪೋಷಣೆಯ ಅವಕಾಶಗಳೊಂದಿಗೆ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸಲು ಈ ಯೋಜನೆ ಜಾರಿಗೆ ತರಲಾಗಿದೆ.
2. ಮಹಿಳಾ ಸಮ್ಮಾನ್ ಬಚತ್ ಪತ್ರ ಯೋಜನೆ ಅಥವಾ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ :
ಮಹಿಳೆಯರು ಮತ್ತು ಹೆಣ್ಣುಮಕ್ಕಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ 2023 ರ ಬಜೆಟ್‌ನಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳಾ ಸಮ್ಮಾನ್ ಬಚತ್ ಪತ್ರ ಯೋಜನೆ ಅಥವಾ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ ಎಂಬ ಉಳಿತಾಯ ಯೋಜನೆಯನ್ನು ಘೋಷಿಸಿದರು. ಇದು ಸಣ್ಣ ಉಳಿತಾಯ ಯೋಜನೆ. ಇಲ್ಲಿ ಒಂದೇ ಬಾರಿ ಹಣವನ್ನು ಠೇವಣಿ ಮಾಡಬಹುದು. ಇದರಿಂದ ಗರಿಷ್ಠ 2 ಲಕ್ಷ ಠೇವಣಿಗೆ ಶೇಕಡಾ 7.5 ರ ಬಡ್ಡಿದರವನ್ನು ನೀಡುತ್ತದೆ.
3. ಸುಕನ್ಯಾ ಸಮೃದ್ಧಿ ಯೋಜನೆ :
‘ಬೇಟಿ ಪಡಾವೋ-ಬೇಟಿ ಬಚಾವೋ’ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ಈ ಉಳಿತಾಯ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ, 10 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಈ ಯೋಜನೆಯು ಹೆಚ್ಚಿನ ಬಡ್ಡಿದರ ಮತ್ತು ಹಲವಾರು ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ಈ ಯೋಜನೆಯಲ್ಲಿ ಪೋಷಕರು ಹೆಣ್ಣು ಮಗುವಿನ ಹೆಸರಿನಲ್ಲಿ ಕನಿಷ್ಠ 250 ರೂ ಮತ್ತು ಗರಿಷ್ಠ 1,50,000 ವರೆಗೆ ಠೇವಣಿ ಮಾಡಬಹುದು.
4. ಸಖಿ ನಿವಾಸ :
ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷಿತ ಮತ್ತು ಅನುಕೂಲಕರವಾದ ವಸತಿ ಸೌಕರ್ಯವನ್ನು ಒದಗಿಸುವ ಸಲುವಾಗಿ, ಸಖಿ ನಿವಾಸ್ ಎಂಬ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ಯೋಜನೆಯು ಹೊಸ ಹಾಸ್ಟೆಲ್ ಕಟ್ಟಡಗಳ ನಿರ್ಮಾಣ, ಅಸ್ತಿತ್ವದಲ್ಲಿರುವ ಹಾಸ್ಟೆಲ್ ಕಟ್ಟಡಗಳ ವಿಸ್ತರಣೆ ಮತ್ತು ಬಾಡಿಗೆ ಆವರಣದಲ್ಲಿ ಹಾಸ್ಟೆಲ್ ಕಟ್ಟಡಗಳ ಯೋಜನೆಗಳಿಗೆ ಸಹಾಯ ಮಾಡುತ್ತಿದೆ. ಈ ಯೋಜನೆಯಡಿಯಲ್ಲಿ ಸಹಾಯ ಮಾಡಲಾಗುತ್ತಿರುವ ಮಹಿಳಾ ಹಾಸ್ಟೆಲ್ ಜಾತಿ, ಧರ್ಮ, ವೈವಾಹಿಕ ಸ್ಥಿತಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಯಾವುದೇ ಭೇದವಿಲ್ಲದೆ ಎಲ್ಲಾ ಉದ್ಯೋಗಸ್ಥ ಮಹಿಳೆಯರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು.
5. ಮಹಿಳಾ ಸಹಾಯವಾಣಿ ಯೋಜನೆ :
ಈ ಕಾರ್ಯಕ್ರಮವು ಖಾಸಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ 24 ಗಂಟೆಗಳ ತುರ್ತು ಸಹಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ. ದೇಶದಾದ್ಯಂತ ಮಹಿಳೆಯರಿಗೆ ತಕ್ಷಣದ ಸಹಾಯವನ್ನು ಒದಗಿಸುವ ಏಕೈಕ ಟೋಲ್-ಫ್ರೀ ಸಂಖ್ಯೆ (181) ಮೂಲಕ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಮಹಿಳಾ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ.
ಇದನ್ನೂ ಓದಿ: ಕೆನಡಾ ವೀಸಾ ಸೇವೆ ಕಂಪ್ಲೀಟ್ ಸ್ಥಗಿತ – ಇನ್ನು ಇವರಿಗೂ ಇಲ್ಲ ಪ್ರವೇಶ !! ದಿಟ್ಟ ನಿರ್ಧಾರ ಕೈಗೊಂಡ ಭಾರತ