Bantwala: ಬೆಳ್ಳಂಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಲಾರಿ!!

Bantwal lorry accident The driver lost control of the lorry and fell into the drain

Share the Article

Bantwala: ಚಾಲಕನೋರ್ವನ ನಿಯಂತ್ರಣ ತಪ್ಪಿ ಲಾರಿಯೊಂದು ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆಯೊಂದು ನಡೆದಿದೆ. ಇದು ಮುಂಜಾನೆ ದಾಸಕೋಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ಚಾಲಕ ಮತ್ತು ಕ್ಲೀನರ್‌ ಇಬ್ಬರು ಅಲ್ಪಸ್ವಲ್ಪ ಪ್ರಮಾಣ ಗಾಯಗಳಿಂದ ಪಾರಾಗಿರುವ ಘಟನೆ ನಡೆದಿದೆ(Bantwala).

ಗಾಯಗೊಂಡವರನ್ನು ಆರಿಪ್‌ ಮತ್ತು ರಿಯಾಜ್‌ ಎಂದು ಗುರುತಿಸಲಾಗಿದೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಬೆಂಗಳೂರು ಕಡೆಯಿಂದ ಮಂಗಳೂರಿಗೆ ಇದ್ದಿಲು ತುಂಬಿಸಿಕೊಂಡು ಬರುತ್ತಿದ್ದ ಲಾರಿಯು ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ಚರಂಡಿಗೆ ಬಿದ್ದಿದೆ. ಮುಂಜಾನೆ 4.30 ರ ವೇಳೆಗೆ ಈ ಘಟನೆ ಸಂಭವಿಸಿದೆ.
ನಿದ್ದೆಯ ಮಂಪರಿನಲ್ಲಿದ್ದ ಚಾಲಕನಿಂದ ಈ ಅಪಘಾತ ಸಂಭವಿಸಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.

ಅಂದ ಹಾಗೆ ಲಾರಿಯೊಳಗಿದ್ದ ಇಬ್ಬರು ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದಾರೆ.

ಇದನ್ನೂ ಓದಿ:Google ವಿರುದ್ಧ ಮಹಿಳೆ ಕೇಸು! ನನ್ನ ಗಂಡನ ಸಾವಿಗೆ ಮ್ಯಾಪ್‌ ಕಾರಣ ಎಂದು ದಾವೆ ಹೂಡಿದೆ ಪತ್ನಿ!!! 

Leave A Reply

Your email address will not be published.