Ration Card Holder: ಪಡಿತರ ಚೀಟಿದಾರರೇ ನಿಮಗೊಂದು ಶಾಕಿಂಗ್ ನ್ಯೂಸ್ ! ಸರ್ಕಾರ ಮಾಡ್ತು ಮಹತ್ವದ ಒಂದು ನಿರ್ಧಾರ
Karnataka Government news ration card update shocking news for BPL and APL card holders
Ration Card Holder: ರಾಜ್ಯ ಹಾಗೂ ಕೇಂದ್ರ ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಏಳಿಗೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಜನರಿಗೆ ಬೆಂಬಲವಾಗಿ ನಿಂತಿವೆ. ಇವುಗಳಲ್ಲಿ ಪಡಿತರ ವಿತರಣೆ(Ration Card)ಕೂಡ ಒಂದಾಗಿದೆ.
ಕಳೆದ 14 ದಿನದಲ್ಲಿ 53 ಸಾವಿರ ಅರ್ಜಿ ತಿದ್ದುಪಡಿಗೆ ಸಲ್ಲಿಕೆಯಾಗಿದ್ದು, ಈ ಹಿಂದೆ 3.18 ಲಕ್ಷ ಅರ್ಜಿಗಳು ತಿದ್ದುಪಡಿಗೆ ಬಾಕಿ ಆಗಿದೆ. ಒಟ್ಟು 3.71 ಲಕ್ಷ ಬಿಪಿಎಲ್ ಕಾರ್ಡ್(BPL Card)ತಿದ್ದುಪಡಿಗಾಗಿ ಅರ್ಜಿ ಬಾಕಿಯಿದೆ. ಇದೀಗ 1.17 ಲಕ್ಷ ಅರ್ಜಿಗಳಿಗೆ ಆಹಾರ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ, ಬರೋಬ್ಬರಿ 93 ಸಾವಿರ ಅರ್ಜಿಗಳು ತಿರಸ್ಕೃತವಾಗಿದೆ. ಇನ್ನುಳಿದ ತಿದ್ದುಪಡಿ ಅರ್ಜಿಗಳ ಪರಿಷ್ಕರಣೆ ಕಾರ್ಯ ತಿಂಗಳ ಕೊನೆಗೆ ಪೂರ್ಣವಾಗಲಿದೆ.
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ 1.13 ಯಜಮಾನಿಯರಲ್ಲಿ 82 ಲಕ್ಷ ಅರ್ಜಿದಾರರಿಗೆ ಹಣ ವರ್ಗಾವಣೆಯಾಗಿದೆ. ಇನ್ನುಳಿದ 28 ಲಕ್ಷ ಅರ್ಜಿದಾರ ಮನೆಯೊಡತಿಯರಿಗೆ ಹಣ ವರ್ಗಾವಣೆ ಆಗಬೇಕಾಗಿದೆ. ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ತಿದ್ದುಪಡಿಗೆ ಎಪಿಎಲ್ ಕಾರ್ಡ್ದಾರರು(APL Card) ಅರ್ಜಿ ಸಲ್ಲಿಸಿದ್ದು, ಎಪಿಎಲ್ ಕಾರ್ಡ್ದಾರರ ಬಹುತೇಕ ಅರ್ಜಿಗಳು ತಿರಸ್ಕೃತಗೊಂಡಿದೆ. ರಾಜ್ಯದಲ್ಲಿ ಒಟ್ಟು 24 ಲಕ್ಷ APL ಕಾರ್ಡ್ ದಾರರಿದ್ದು, ಅರ್ಜಿ ಹಾಕಿದವರಲ್ಲಿ ಶೇ.70ರಷ್ಟು ಎಪಿಎಲ್ ಕಾರ್ಡ್ದಾರರಿದ್ದಾರೆ.
ಸರ್ಕಾರಿ ಕೆಲಸದಲ್ಲಿದ್ದವರು ಸಹ ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಇದರ ಜೊತೆಗೆ ಗೃಹ ಲಕ್ಷ್ಮಿ ಯೋಜನೆಗಾಗಿ ನಕಲಿ ವಿಳಾಸ ಬದಲಾವಣೆ ಅರ್ಜಿಗೆ ಸಲ್ಲಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ರಕ್ತಸಂಬಂಧ ಇಲ್ಲದವರ ಹೆಸರನ್ನು ಗೃಹಲಕ್ಷಿ ಯೋಜನೆಗೆ (Gruha Lakshmi Yojana)ಸೇರ್ಪಡೆ ಮಾಡಲಾಗಿದ್ದು,ಅತ್ತೆ, ಸೊಸೆ ಇಬ್ಬರೂ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಯಾಗಲು ಪ್ರತ್ಯೇಕ ಆಗುವ ನಿಟ್ಟಿನಲ್ಲಿ ಡಿಲಿಟ್ ಮಾಡಲು ಅರ್ಜಿ ಸಲ್ಲಿಕೆ ಮಾಡಲಾಗಿದೆ. ಕೆಲವರು ಕುಟುಂಬ ಸದಸ್ಯರು ಬೇರೆ ಬೇರೆಯಾಗಿ ತೋರಿಸಿದ್ದಾರೆ.
ಪಡಿತರ ಸರಬರಾಜು ವ್ಯವಸ್ಥೆಯಲ್ಲಿ ಪ್ರಸ್ತುತ ಕುಟುಂಬದ ಓರ್ವ ಸದಸ್ಯನಿಗೆ ಐದು ಕೆಜಿ ಅಕ್ಕಿ ಮಾತ್ರ ವಿತರಿಸಲಾಗುತ್ತಿದೆ. ಇನ್ನು ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ವಿತರಿಸುವ ಅನ್ನಭಾಗ್ಯ ಗ್ಯಾರಂಟಿ ಯೋಜನೆಗೆ ಸಮರ್ಪಕ ಪ್ರಮಾಣದಲ್ಲಿ ಅಕ್ಕಿ ಸಿಗದೆ ಇರುವ ಹಿನ್ನೆಲೆ ಒಬ್ಬ ಸದಸ್ಯರಿಗೆ ಕೆಜಿಗೆ 34 ರೂ.ಗಳಂತೆ 170 ರೂ. ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಆಹಾರ ಇಲಾಖೆ ಅಧಿಕಾರಿಗಳು, ಪಡಿತರ ಅಕ್ಕಿ ಮಾರಿದರೆ ಪಡಿತರ ಚೀಟಿ ರದ್ದು ಮಾಡಲಾಗುತ್ತದೆ. ಪಡಿತರದಾರರಿಂದ ಅಕ್ಕಿ ಖರೀದಿ ಮಾಡಿದರೆ ಅಕ್ಕಿ, ವಾಹನ ಎರಡನ್ನೂ ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದ್ದರು ಕೂಡ ಪಡಿತರ ಅಕ್ಕಿ ಮಾರಾಟ ನಿಯಂತ್ರಣಕ್ಕೆ ಬಂದಿಲ್ಲ. ಈ ನಡುವೆ, ಪ್ರಸ್ತುತ ಕುಟುಂಬಗಳಿಗೆ ಪಡಿತರ ಅಕ್ಕಿ ಸಿಗುವ ಪ್ರಮಾಣವೇ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಕಾಳಸಂತೆ ಮಾರಾಟಕ್ಕೆ ಕೊಂಚ ಬ್ರೇಕ್ ಸಿಕ್ಕಂತಾಗಿದೆ.
ಇದನ್ನೂ ಓದಿ: Hyderabad: ಇನ್ನು ಮುಸ್ಲಿಂ, ಅಗಸರಿಗೆ ಮಾತ್ರ ಸಿಗಲಿದೆ ಉಚಿತ ವಿದ್ಯುತ್ ?! – ಸಿಡಿದೆದ್ದ ಬಿಜೆಪಿ
Hi there! Do you know if they make any plugins to assist with
Search Engine Optimization? I’m trying to get my website to
rank for some targeted keywords but I’m not seeing very good success.
If you know of any please share. Many thanks!
I saw similar text here: Wool product