Bengalore: ಬೆಂಗಳೂರಿನ ಜನರೇ.. ನಿಮಗಿನ್ನು ಕುಡಿಯೋದಕ್ಕೆ ಸಿಗಲ್ಲ ಈ ನೀರು – ಗೃಹ ಸಚಿವ ಪರಮೇಶ್ವರ್ ಕೊಟ್ರು ಅಚ್ಚರಿಯ ಸ್ಟೇಟ್ಮೆಂಟ್

Bengaluru news cauvery water cannot be given to Bengaluru people minister G Parameshwar informed

Cauvery water: ರಾಜ್ಯದಲ್ಲಿ ಈ ಸಲ ಮಳೆಯ ಅಭಾವ ಯಥೇಚ್ಛವಾಗಿದೆ. ರೈತರ ಬೆಳೆಗಳಿಗೆ ಬಿಡಿ ಕುಡಿಯಲು ಕೂಡ ನೀರಿಗೆ ಆಹಾಕಾರ ಶುರುವಾಗಿದೆ. ಅದು ಅಲ್ಲದೆ ತಮಿಳುನಾಡು ಮತ್ತು ಕರ್ನಾಟಕ ಕಾವೇರಿ ನೀರಿಗಾಗಿ ನಿರಂತರವಾಗಿ ಹೋರಾಡುತ್ತಿವೆ. ಇದರಿಂದ ಕಾವೇರಿ ನಂಬಿಕೊಂಡು ಬದುಕುತ್ತಿರುವ ಬೆಂಗಳೂರು(Bengalore) ಮತ್ತು ಮೈಸೂರು(Mysore) ಜನರಿಗೆ ಕಾವೇರಿಯ ಬಿಸಿತಟ್ಟುವುದು ಪಕ್ಕ ಆಗಿದೆ. ಹೀಗಿರುವಾಗ ಬೆಂಗಳೂರಿನ ಜನತೆಗೆ ಗೃಹ ಸಚಿವ ಡಾ ಪರಮೇಶ್ವರ್(G Parameshwar) ಬಿಗ್ ಶಾಕ್ ನೀಡಿದ್ದಾರೆ.

ಹೌದು, ಕಳೆದ ಕೆಲವು ವಾರಗಳಿಂದ ಕರ್ನಾಟಕ ಹಾಗೂ ತಮಿಳುನಾಡು(Tamilu nadu) ಕಾವೇರಿ ನೀರಿ(Cauvery water) ಗಾಗಿ ಕಿತ್ತಾಡುತ್ತಿವೆ. ಈ ಕುರಿತು ಮಂಡ್ಯ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಡಾ ಪರಮೇಶ್ವರ್ ಅವರು ‘ನಮ್ಮ ರಾಜ್ಯದಲ್ಲಿ ಕೇವಲ ಶೇ.35 ರಷ್ಟು ಮಾತ್ರ ಮಳೆಯಾಗಿದೆ. ಹೀಗಾಗಿ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ತಿಳಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆ ಪಾಲಿಸುವುದು ಸಾಧ್ಯವಿಲ್ಲ. ತಮಿಳುನಾಡಿಗೆ ಹರಿಸಲು ನೀರು ಇಲ್ಲವೇ ಇಲ್ಲ, ಹಾಗಾಗಿ ನೀರು ಬಿಡುವ ಹಾಗೂ ಬಿಡದಿರುವ ಪ್ರಶ್ನೆಯೇ ಇಲ್ಲ. ಬೆಂಗಳೂರಿನ ಜನರಿಗೆ ಕುಡಿಯೋದಕ್ಕೆ ನೀರು ಕೊಡಲು ಆಗದು ಅಂತಹ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ.

ಅಲ್ಲದೆ ಕಾವೇರಿ ಜಲಾಶಯಗಳಲ್ಲಿ ನೀರೇ ಇಲ್ಲ. ಹಾಗಾಗಿ ತಮಿಳುನಾಡಿಗೆ ನೀರು ಬಿಡುವ, ಬಿಡದಿರುವ ಪ್ರಶ್ನೆಯೇ ಇಲ್ಲ. ಬೆಂಗಳೂರಿನ ಜನರಿಗೆ ಕುಡಿಯೋದಕ್ಕೆ ನೀರು ಕೊಡಲು ಆಗದಿರುವ ಪರಿಸ್ಥಿತಿ ಇದೆ. ಈಗಿನ್ನೂ ನಾವು ಅಕ್ಟೋಬರ್‌‌‌‌ನಲ್ಲಿದ್ದೇವೆ. ಈಗಲೇ ಈ ಪರಿಸ್ಥಿತಿ ಇದೆಯೆಂದರೆ, ಮುಂದೆ ಏನಾಗಬೇಕು. ಮಧ್ಯದಲ್ಲಿ ಮಳೆ ಬರದಿದ್ರೆ ಇನ್ನು ಕಷ್ಟವಾಗಲಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಪ್ರಾಧಿಕಾರವು ತಮಿಳುನಾಡಿಗೆ ನೀರು ಬಿಡಲು ಸೂಚಿಸಲ್ಲ ಎಂಬ ವಿಶ್ವಾಸವಿದೆ ಎಂದರು.

ಜೊತೆಗೆ ಹಲವು ಸಂಧರ್ಭಗಳಲ್ಲಿ ನೀರಿನ ಕೊರತೆ ಬಗ್ಗೆ ಪ್ರಾಧಿಕಾರಕ್ಕೆ ತಿಳಿಸಿದ್ದೇವೆ. ಆದರೂ ಯಾವ ಕಾರಣಕ್ಕೆ ಪ್ರಾಧಿಕಾರದವರು ತಮಿಳುನಾಡಿಗೆ ನೀರು ಬಿಡಲು ಸೂಚಿಸಿದ್ದಾರೆ ಗೊತ್ತಿಲ್ಲ. ನಮಗೆ ವಿಶ್ವಾಸ ಇದೆ. ಸಂಕಷ್ಟ ಸೂತ್ರ ರೂಪಿಸಿ ಈ ವರ್ಷಕ್ಕೆ ಪರಿಸ್ಥಿತಿ ತಕ್ಕಂತೆ ಆದೇಶ ಬರಲಿದೆ. ಕೇಂದ್ರ ತಜ್ಞರ ತಂಡ ಬರಬಾರದು ಎಂದು ನಾವು ಹೇಳಿಲ್ಲ. ಬಂದು ವಾಸ್ತವ ಸ್ಥಿತಿ ಬಗ್ಗೆ ಅಂಕಿ ಅಂಶ ಕಲೆ ಹಾಕಲಿ ಎಂದು ಅರ್ಜಿಗಳಲ್ಲಿ ಕೇಳಿದ್ದೇವೆ. ನಾವೂ ಕೂಡ ಫಿಸಿಕಲ್ ವೆರಿಫಿಕಶನ್ ಮಾಡಿ ಎಂದು ಮನವಿ ಮಾಡಿದ್ದೇವೆ. ಅವರು ಬಂದು ನೋಡಿದ್ರೆ ಸತ್ಯಾಂಶ ಗೊತ್ತಗಲಿದೆ ಎಂದರು.

ಇದನ್ನೂ ಓದಿ: Chamarajanagara: ಈತ ಬಿತ್ತಿದ್ದು ಬೀಟ್ರೋಟ್, ಆದ್ರೆ ಬಂದಿದ್ದು ಮಾತ್ರ ಬೇರೆ ಬೆಳೆ !! ವಿಚಿತ್ರವಾದ ಬೆಳೆ ಕಂಡು ರೈತನೇ ಶಾಕ್

Leave A Reply

Your email address will not be published.