Gruhalakshmi Scheme: ಮೆಸೇಜ್ ಬಂದ್ರೂ ಗೃಹಲಕ್ಷ್ಮೀ ಹಣ ಬಂದಿದ್ಯೋ ಇಲ್ವೋ ಎಂಬ ಗೊಂದಲವೇ ? ಹಾಗಿದ್ರೆ ಕೂತಲ್ಲೇ ಈ ರೀತಿ ಚೆಕ್ ಮಾಡಿ !

Gruhalakshmi Scheme: ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರಕಾರವು ‘ಗೃಹಲಕ್ಷ್ಮಿ’ ಯೋಜನೆ (Gruhalakshmi Scheme) ಆರಂಭಿಸಿದೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ 2,000 ರೂಪಾಯಿ ಸಿಗುತ್ತದೆ. ನೀವು ಗೃಹಲಕ್ಷೀ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ಮೆಸೇಜ್ ಬಂದ್ರೂ ಗೃಹಲಕ್ಷ್ಮೀ ಹಣ ಬಂದಿದ್ಯೋ ಇಲ್ವೋ ಎಂಬ ಗೊಂದಲವಿದ್ದರೆ, ಕೂತಲ್ಲೇ ಈ ರೀತಿ ಚೆಕ್ ಮಾಡಿ!!.

ನೇರ ನಗದು ವರ್ಗಾವಣೆ(DBT) ಮೂಲಕ ಮೊದಲ ಕಂತಿನ ಹಣ ವರ್ಗಾವಣೆ ಆಗುತ್ತದೆ. ನಿಮ್ಮ ಖಾತೆಗೆ ಈ ಯೋಜನೆಯಡಿ ಹಣ ಜಮಾ ಆಗಿದೆಯೇ ಎಂದು ತಿಳಿದುಕೊಳ್ಳಲು ವಿಧಾನವಿದೆ. ಈ ಮೂಲಕ ನೀವು ಕೂತಲ್ಲೇ ಗೃಹಲಕ್ಷೀ ಹಣದ ಬಗ್ಗೆ ಮಾಹಿತಿ ಪಡೆಯಬಹುದು.

• ಬ್ಯಾಂಕ್ ಸಹಾಯವಾಣಿಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ಅಥವಾ
• DBT Karnataka ಮೊಬೈಲ್ ಅಪ್ಲಿಕೇಶನ್
ಮೂಲಕ ತಿಳಿಯಬಹುದು.
• https://play.google.com/store/ apps/details?id=com.dbtkarnataka ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
• ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ ‘DBT Karnataka’ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
• ಫಲಾನುಭವಿಯ ಆಧಾರ್ ನಂಬರ್ ನಮೂದಿಸಿ
• ಆಧಾರ್ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ ಒಟಿಪಿಯನ್ನು ನಮೂದಿಸಿ
• “VERIFY OTP” ಬಟನ್ ಮೇಲೆ ಕ್ಲಿಕ್ ಮಾಡಬೇಕು.
• ಬಳಿಕ ನಿಮಗೆ 4 ಅಂಕಿಯ Secure code ಅನ್ನು ಹಾಕಿ
• “SUBMIT” ಬಟನ್ ಮೇಲೆ ಕ್ಲಿಕ್ ಮಾಡಬೇಕು.
• ಫಲಾನುಭವಿಯ ವಿವರ ತೋರಿಸುತ್ತದೆ ಈ ಪುಟದ ಕೊನೆಯ ಕಾಲಂ ನಲ್ಲಿ ಮೊಬೈಲ್ ನಂಬರ್ ಹಾಕಿ
• “OK” ಬಟನ್ ಮೇಲೆ ಕ್ಲಿಕ್ ಮಾಡಿಬೇಕು.
• ಈ ಪುಟದಲ್ಲಿ “Payment Status” ಆಯ್ಕೆಯ ಮೇಲೆ ಕ್ಲಿಕ್ ಮಾಡಿ
• ನಂತರ ಯೋಜನೆಯ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ಈ ಯೋಜನೆಯಡಿ ಹಣ ಜಮಾ ಅಗಿರುವುದರ ಕುರಿತು ಮಾಹಿತಿ ತಿಳಿಯುತ್ತದೆ.
• ಯಾವ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಎಂದು ತಿಳಿಯಲು “Sending status of Aadhar in Bank Account” ಮೇಲೆ ಕ್ಲಿಕ್ ಮಾಡಿದರೆ ವಿವರ ಕಾಣಿಸುತ್ತದೆ.

Leave A Reply

Your email address will not be published.