Bank Account: ಬ್ಯಾಂಕ್ನಲ್ಲಿ ಸಾವಿರ ಹಣಕ್ಕಿಂತ ಕಡಿಮೆ ಇಡಬಹುದೇ? ಇಲ್ಲಿ ಬಂದಿದೆ ನೋಡಿ ಹೊಸ ರೂಲ್ಸ್!!!
Bank Account: ಬ್ಯಾಂಕ್ ಖಾತೆ ಹೊಂದಿರುವ ಎಲ್ಲರಿಗೂ ಇದೊಂದು ಮುಖ್ಯವಾದ ವಿಷಯ. ಬಹುತೇಕ ಎಲ್ಲರೂ ತಮ್ಮತಮ್ಮ ಬ್ಯಾಂಕ್ ಖಾತೆ ಹೊಂದಿರುತ್ತಾರೆ. ವಿವಿಧ ಯೋಜನೆಗಳ ಮೂಲಕ ಸರಕಾರ ಕೂಡಾ ಫಲಾನುಭವಿಗಳ ಖಾತೆಗೆ ಸಹಾಯಧನವನ್ನು ನೀಡುತ್ತದೆ. ಹಾಗಾಗಿ ಬ್ಯಾಂಕ್ ಖಾತೆ ತೆರೆಯೋದು ಅನಿವಾರ್ಯ. ಉಳಿತಾಯ ಖಾತೆ ಎನ್ನವುದು ಎಲ್ಲರೂ ತೆರೆದೇ ತೆರಯುತ್ತಾರೆ. ಅಲ್ಲದೆ ಈ ಖಾತೆಯಲ್ಲಿ ಹಣ ಸುರಕ್ಷಿತವಾಗಿರುತ್ತದೆ.
ನಾವು ಅಕೌಂಟ್ ಇಡುವ ಠೇವಣಿಗಳ ಮೇಲೆ ನಮಗೆ ಬಡ್ಡಿಯೂ ಸಿಗುತ್ತದೆ. ಆದರೆ ಉಳಿತಾಯ ಖಾತೆಯಲ್ಲಿ ಹೆಚ್ಚು ಹಣ ಇಡುವುದು ಅಷ್ಟು ಒಳ್ಳೆಯದಲ್ಲ. ಹಾಗಾದರೆ ಓರ್ವ ವ್ಯಕ್ತಿ ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇಡಬೇಕು? ಇದರ ನಿರ್ಧಾರ ಯಾರು ತೆಗೆದುಕೊಳ್ಳುವುದು? ಬನ್ನಿ ತಿಳಿಯೋಣ. ಇಲ್ಲಿ ನಾವು ಬ್ಯಾಂಕ್ನಲ್ಲಿ ಇಡುವ ಮಿನಿಮಮ್ ಹಣದ ಕುರಿತು ಹೇಳುವುದಿಲ್ಲ. ಹಾಗೆ ನೋಡಿದರೆ ಪ್ರತಿಯೊಂದು ಬ್ಯಾಂಕ್ನಲ್ಲಿ ಸಾವಿರ ಮಿನಿಮಮ್ ಹಣ ಇಡಬೇಕು. ಐನೂರು ಇಡಬೇಕು ಎನ್ನುವ ವಿಚಾರಕ್ಕಿಂತ ಎಷ್ಟು ಇಟ್ಟರೆ ಉತ್ತಮ, ಅದರಿಂದ ನಮಗೇನು ಲಾಭ? ಇದರ ಬಗ್ಗೆ ತಿಳಿಯುವ.
ಹಣಕಾಸಿನ ಸ್ಥಿತಿ, ನಿಮ್ಮ ಆದಾಯ, ಸಾಲ, ಖರ್ಚುಗಳು ಹಾಗೂ ನಿಮ್ಮ ಭವಿಷ್ಯದ ಆರ್ಥಿಕ ಸ್ಥಿತಿ ಇವುಗಳನ್ನು ಗಮನದಲ್ಲಿಟ್ಟುಕೊಂಡು ಉಳಿತಾಯ ಖಾತೆಯನ್ನು ಹಣ ಇಡಬೇಕು.
ಉಳಿತಾಯ ಖಾತೆಯಲ್ಲಿ ಸುರಕ್ಷತೆ ಮತ್ತು ಅನುಕೂಲತೆ ಎರಡೂ ಇದೆ. ಆದರೆ ಇವುಗಳಲ್ಲಿ ನೀವು ದೊಡ್ಡ ಮೊತ್ತದ ಹಣವನ್ನು ಹಾಕುವ ಅಪಾಯ ಮಾಡಬಾರದು. ಅಂದರೆ ನಿಶ್ಚಿತ ಠೇವಣಿಗಳು (Fixed Deposit), ಮ್ಯೂಚುವಲ್ ಫಂಡ್ಗಳು (Mutual Funds) ಅಥವಾ ಷೇರುಗಳಂತಹ ಹೂಡಿಕೆಗೆ ಹೋಲಿಕೆ ಮಾಡಿದ ಉಳಿತಾಯ ಖಾತೆಗೆ ಸಿಗುವ ಬಡ್ಡಿ ತುಂಬಾ ಕಡಿಮೆ.
ಉಳಿತಾಯ ಖಾತೆ ತೆರೆಯುವಾಗ, ಮಾಸಿಕ ವೆಚ್ಚಗಳು, ನಗದಿನ ಅಗತ್ಯತೆ, ಬಾಡಿಗೆ, ದಿನಸಿ, ವಿಮಾ ಪ್ರೀಮಿಯಂ ಇಂತಹ ಪ್ರಮುಖ ವೆಚ್ಚಗಳನ್ನು ಲೆಕ್ಕ ಹಾಕಿ ಹಣ ಇಟ್ಟರೆ ಉತ್ತಮ ಅನಿರೀಕ್ಷಿತ ವೆಚ್ಚ ಇದ್ದರೆ ಅವುಗಳ ಕುರಿತು ಮುನ್ನೆಚ್ಚರಿಕೆ ವಹಿಸುವುದು ಉತ್ತಮ.