Home National Road Accident: ಕ್ರೂಸರ್‌ ಲಾರಿ ನಡುವೆ ಭೀಕರ ಅಪಘಾತ! ತಿರುಪತಿ ದರ್ಶನ ಮಾಡಿ ವಾಪಸ್‌ ಬರುತ್ತಿದ್ದಾಗ...

Road Accident: ಕ್ರೂಸರ್‌ ಲಾರಿ ನಡುವೆ ಭೀಕರ ಅಪಘಾತ! ತಿರುಪತಿ ದರ್ಶನ ಮಾಡಿ ವಾಪಸ್‌ ಬರುತ್ತಿದ್ದಾಗ ನಡೆದ ದುರ್ಘಟನೆ!!! ಒಂದೇ ಕುಟುಂಬದ ಐವರ ದಾರುಣ ಸಾವು!!!

Belagavi

Hindu neighbor gifts plot of land

Hindu neighbour gifts land to Muslim journalist

Belagavi: ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ (Tirupati Temple) ಗೆ ಹೋಗಿ ವಾಪಾಸ್‌ ಬರುತ್ತಿದ್ದ ಸಂದರ್ಭದಲ್ಲಿ ಬೆಳಗಾವಿ ಮೂಲದ ಒಂದೇ ಕುಟುಂಬದ ಐವರು ಅಪಘಾತವೊಂದರಲ್ಲಿ ಪ್ರಾಣ ಕಳೆದುಕೊಂಡಿರುವ ಘಟನೆಯೊಂದು ನಡೆದಿದೆ. ಅಷ್ಟು ಮಾತ್ರವಲ್ಲದೇ 11 ಮಂದಿ ಈ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಘಟನೆ ಬೆಳಗಾವಿ (belagavi) ಜಿಲ್ಲೆಯ ಅಥಣಿ ತಾಲೂಕಿನ ಬಡಚಿ ಗ್ರಾಮದಲ್ಲಿ ನಡೆದಿದೆ. 16 ಮಂದಿ ಕ್ರೂಸರ್‌ ವಾಹನದಲ್ಲಿ ತಿರುಪತಿಗೆ ಹೋಗಿದ್ದು, ವಾಪಸ್‌ ಬರುತ್ತಿರುವಾಗ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆ ಇಂದು (ಶುಕ್ರವಾರ) ಬೆಳಗಿನ ಜಾವ ಈ ದುರಂತ ನಡೆದಿದೆ.

ಇಂದು ಬೆಳಗಿನ ಜಾವ 3.30 ರ ಸುಮಾರಿಗೆ ಕಡಪ-ಚಿತ್ತೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ದುರ್ಘಟನೆಯಲ್ಲಿ ಶೋಭಾ ಆಜೂರ (36), ಅಂಬಿಕಾ ಆಜೂರ (14), ಮಾನಂದಾ ಆಜೂರ (32), ಹನುಮಂತ ಆಜೂರ (42), ಚಾಲಕ ಹನುಮಂತರ ಜಾಧವ (32) ಎಂದು ಗುರುತಿಸಲಾಗಿದೆ.

ಗುರುವಾರ ದೇವರ ದರ್ಶನ ಪಡೆದು ರಾತ್ರಿ ಊರಿಗೆ ಹೊರಟ ಸಂದರ್ಭದಲ್ಲಿ ವಿಧಿಯೇ ಬೇರೆನೇ ಬರೆದಿತ್ತು. ಒಂದೇ ಕುಟುಂಬದ ಐವರ ಮರಣ ಇಡೀ ಕುಟುಂಬವನ್ನು ತಲ್ಲಣಗೊಳಿಸಿದೆ.

ಇದನ್ನೂ ಓದಿ: ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಬಾಯಿಯಲ್ಲಿ ನೊರೆ, ಆಸ್ಪತ್ರೆಗೆ ದಾಖಲು ಮಾಡಿದ ಸಿಸಿಬಿ ಪೊಲೀಸರು!!!