Home National Shocking News: ಇನ್ನೇನು ತಾಳಿ ಕಟ್ಟಬೇಕು ಅನ್ನುವಾಗ ಪೋಲೀಸರ ಅತಿಥಿಯಾದ ವರ !! ಒಬ್ಬಂಟಿಯಾದ ವಧು...

Shocking News: ಇನ್ನೇನು ತಾಳಿ ಕಟ್ಟಬೇಕು ಅನ್ನುವಾಗ ಪೋಲೀಸರ ಅತಿಥಿಯಾದ ವರ !! ಒಬ್ಬಂಟಿಯಾದ ವಧು ಏನು ಮಾಡಿದ್ಲು ಗೊತ್ತಾ?

Uttar Pradesh
Image source Credit: vidhikarya.com

Hindu neighbor gifts plot of land

Hindu neighbour gifts land to Muslim journalist

Uttar Pradesh: ಮದುವೆ (Marraige)ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತು ಹೆಚ್ಚು ಪ್ರಚಲಿತ. ಅದೇ ರೀತಿ, ಹಸೆ ಮಣೆ ಏರಿದ್ದ ಯುವಕ ಜೈಲು(Prision)ಪಾಲಾದ ಘಟನೆ ವರದಿಯಾಗಿದ್ದು, ಹಸೆ ಮಣೆ ಮೇಲೆ ಕುಳಿತ ವಧುವಿನ ಕಥೆ ಏನಾಯ್ತು ಅನ್ನೋದೆ ಇಂಟ್ರೆಸ್ಟಿಂಗ್ ಸಂಗತಿ.

ಉತ್ತರಪ್ರದೇಶದ(Uttar Pradesh)ಅಲಿಗಢದಲ್ಲಿ ಮದುವೆ ಮಂಟಪದಲ್ಲಿ ಸಿನಿಮೀಯ ಮಾದರಿಯ ಘಟನೆಯೊಂದು ನಡೆದಿದೆ. ಸಾಮಾನ್ಯವಾಗಿ ನಾವು ಧಾರಾವಾಹಿ, ಸಿನಿಮಾಗಳಲ್ಲಿ ನೋಡುವಂತೆ ವರ ಇನ್ನೇನು ವಧುವಿಗೆ ತಾಳಿ ಕಟ್ಟಬೇಕು ಅನ್ನುವಾಗ ಪೋಲಿಸರು ಬಂದು ಮದುವೆಯನ್ನು ನಿಲ್ಲಿಸುವಂತೆ ನೈಜ ಘಟನೆಯೊಂದು ವರದಿಯಾಗಿದೆ.

ಉತ್ತರ ಪ್ರದೇಶದಲ್ಲಿ ವಿವಾಹವಾಗುವ ಮೊದಲೇ ವರ ಕಳ್ಳತನದ ಆರೋಪದಲ್ಲಿ ಸಿಕಿಬಿದ್ದ ಹಿನ್ನೆಲೆ ವಧುವನ್ನು ಅದೇ ಮಂಟಪದಲ್ಲಿ ಪೋಷಕರು ವರನ ಸಹೋದರನೊಂದಿಗೆ ಮದುವೆ ಮಾಡಿಸಿದ ಘಟನೆ ವರದಿಯಾಗಿದೆ. ಉತ್ತರ ಪ್ರದೇಶದಲ್ಲಿ ನಿಶ್ಚಯಿಸಿದ್ದ ವಧುವಿಗೆ(Bride)ತಾಳಿ ಕಟ್ಟಲು ಸಿದ್ಧನಾಗಿದ್ದ ವರ ಕಳ್ಳತನ ಪ್ರಕರಣದಲ್ಲಿ ಶಂಕಿತನಾಗಿದ್ದ ಹಿನ್ನೆಲೆ ಪೊಲೀಸರು ಮದುವೆ ಮಂಟಪಕ್ಕೆ ಆಗಮಿಸಿ, ಆತನನ್ನು ಬಂಧಿಸಿದ ಘಟನೆ ನಡೆದಿದ್ದು, ಇದರಿಂದ ಮಂಟಪದಲ್ಲಿ ಭಾರೀ ಗದ್ದಲ ಕೋಲಾಹಲ ಉಂಟಾಗಿದೆ.

ಪೋಲಿಸರು (Police)ವರನನ್ನು ಬಂಧಿಸಿದ ಬೆನ್ನಲ್ಲೇ ವರನ ಕಡೆಯವರು ಪೋಲಿಸ್ ಠಾಣೆಗೆ ಜಮಾಯಿಸಿದ್ದಾರೆ.ಇತ್ತ ಮದುವೆಗೆ ಸಿದ್ಧಗೊಂಡಿದ್ದ ವಧು, ಮಂಟಪ್ಪದಲ್ಲೇ ಕಾಯುತ್ತಿದ್ದನ್ನು ಕಂಡು ಮರುಗಿದ ವರನ ಅಣ್ಣ, ಆಕೆಯನ್ನು ವಿವಾಹವಾಗಲು ತೀರ್ಮಾನ ಕೈಗೊಂಡಿದ್ದಾರೆ. ಎರಡು ಕುಟುಂಬದವರು ಇಬ್ಬರಿಗೂ ಮದುವೆ ಮಾಡಿಸಿದ್ದು, ಒಟ್ಟಿನಲ್ಲಿ ಕಥೆ ಸುಖಾಂತ್ಯ ಕಂಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: PPF Savings Account: ಕೇಂದ್ರದ ಈ ಯೋಜನೆಯಲ್ಲಿ ನೀವೂ ಹೂಡಿಕೆ ಮಾಡಿದ್ದೀರಾ? ಹಾಗಿದ್ರೆ ನಿಮಗಿದೆ ಬಿಗ್ ಗುಡ್ ನ್ಯೂಸ್!