Ayushman bhava: ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಕೇಂದ್ರ- ಈ ಯೋಜನೆಯಿಂದ ಇವರಿಗೆ ಸಿಗಲಿದೆ 5 ಲಕ್ಷದಷ್ಟು ಖಾಸಗಿ ಆಸ್ಪತ್ರೆಯ ಚಿಕಿತ್ಸಾ ಸೌಲಭ್ಯ
Ayushman bhava scheme medical health treatment up to rupees 5 lakhs insurance facility
Ayushman Bhava: ಆರೋಗ್ಯ ಸೌಲಭ್ಯಗಳ ಅಗತ್ಯವಿರುವ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ‘ಆಯುಷ್ಮಾನ್ ಭವ’ ಅಭಿಯಾನ ಕಾರ್ಯಕ್ರಮ ಮೂಲಕ ಕರ್ನಾಟಕ ಆರೋಗ್ಯ ಯೋಜನೆಯ ಸೌಲಭ್ಯ ಮತ್ತಷ್ಟು ಉತ್ತಮಪಡಿಸುವ ಉದ್ದೇಶದಿಂದ ಹಲವು ಬದಲಾವಣೆ ತರಲಾಗುತ್ತಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಜಿಲ್ಲಾ ಆಸ್ಪತ್ರೆ ಆವರಣದ ಡಿ.ಎನ್.ಬಿ ಹಾಲ್‍ನಲ್ಲಿ ಬುಧವಾರ ಏರ್ಪಡಿಸಿದ್ದ ಸಮುದಾಯಕ್ಕೆ ಆರೋಗ್ಯ ಸೇವೆಗಳನ್ನು ಸಂಪೂರ್ಣವಾಗಿ ತಲುಪಿಸುವ ‘ಆಯುಷ್ಮಾನ್ ಭವ’ (Ayushman Bhava) ಅಭಿಯಾನ ಶುಭಾರಂಭ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪ ಮೇಯರ್ ಬಿ.ಜಾನಕಿ ಅವರು, ಪ್ರತಿಯೊಬ್ಬರೂ ಆರೋಗ್ಯ ಕುರಿತಾಗಿ ಜಾಗೃತಿ ಹೊಂದಬೇಕು. ಕೇಂದ್ರ ಮತ್ತು ರಾಜ್ಯ ಸರಕಾರದ ಆರೋಗ್ಯ ಸೇವೆಗಳನ್ನು ಎಲ್ಲರೂ ಪಡೆದುಕೊಳ್ಳಬೇಕು. ‘ಆಯುಷ್ಮಾನ್ ಭವ’ ಸಾರ್ವಜನಿಕ ಆರೋಗ್ಯ ಅಭಿಯಾನವಾಗಿದ್ದು, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಜನರಿಗಾಗಿ ಸೆಪ್ಟೆಂಬರ್ 17 ರಿಂದ ಈ ಅಭಿಯಾನ ಪ್ರಾರಂಭವಾಗಲಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ಸದ್ಯ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುಜರಾತ್‍ನ ರಾಜಭವನದಲ್ಲಿ ಆರೋಗ್ಯ ಇಲಾಖೆಯ ಒಂದೇ ಸೂರಿನಡಿ ಹಲವು ಕಾರ್ಯಕ್ರಮಗಳನ್ನು ಹೊಂದಿರುವ ‘ಆಯುಷ್ಮಾನ್ ಭವ’ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸೆ.17 ರಿಂದ ಪ್ರತಿ ಮಂಗಳವಾರ ಆರೋಗ್ಯ ತಪಾಸಣಾ ಶಿಬಿರಗಳನ್ನು ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡು ರಕ್ತದೊತ್ತಡ, ಸಕ್ಕರೆ ಖಾಯಿಲೆ, ಮತ್ತು ಬಾಯಿ, ಸ್ಥನ, ಗರ್ಭಕೋಶದ ಕ್ಯಾನ್ಸರ್ ಗಳ ತಪಾಸಣೆಗೆ ಒತ್ತು ನೀಡಲಾಗುವುದು. ಇಲ್ಲಿಯವರೆಗೆ 17,92,727 ಜನರ ನೋಂದಣಿ ಮಾಡಿಸಲಾಗಿದ್ದು, ಇವರಲ್ಲಿ 30 ವರ್ಷ ಮೇಲ್ಪಟ್ಟ 6,70,047 ಮಹಿಳೆಯರ ತಪಾಸಣೆ ಮಾಡಲಾಗಿದೆ. ಅಲ್ಲದೆ ಕ್ಷಯರೋಗಿಗಳಿಗೆ ಚಿಕಿತ್ಸೆಯನ್ನು ಸಂಪೂರ್ಣವಾಗಿ ಒದಗಿಸುವ ಖಾತ್ರಿ ಕೈಗೊಳ್ಳಲಾಗುವುದು. ಹಾಗೂ ನೀಕ್ಷಯ ಮಿತ್ರದಡಿ ದಾನಿಗಳಿಂದ ಉಚಿತ ಪೌಷ್ಟಿಕ ಅಹಾರ ಕಿಟ್‍ಗಳನ್ನು ಒದಗಿಸಲಾಗುತ್ತಿದೆ ಪ್ರಸ್ತುತ 1450 ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ತಜ್ಞರ ಮೂಲಕ ಎಲ್ಲಾ ಆರೋಗ್ಯ ಸೇವೆಗಳನ್ನು ಜಿಲ್ಲೆಯ ರೂಪನಗುಡಿ, ಮೋಕಾ, ತೆಕ್ಕಲಕೊಟೆ, ತೋರಣಗಲ್ಲು, ಕುರುಗೋಡು, ಕಂಪ್ಲಿ ತಾಲೂಕುಗಳಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ: ಈತ 17 ಹೆಂಡಿರು, 96 ಮಕ್ಕಳಿರೋ 77ರ ಕಿಲಾಡಿ ತಾತ !! ಇನ್ನೂ ನಡೀತಿದೆ 18ನೇ ಮದುವೆಯ ತಯಾರಿ ಗೊತ್ತಾ !!