Ganesha: ವಿಘ್ನ ವಿನಾಶಕ ಗಣಪತಿ ಪೂಜೆಯಲ್ಲಿ ತಪ್ಪಿಯೂ ತುಳಸಿ ಬಳಕೆ ಮಾಡದಿರಿ ! ಯಾಕೆಂದು ಕಾರಣವೂ ತಿಳಿಯಿರಿ
Astrology news Ganapathi Pooja tips why tulsi is not offered to Lord Ganesha here is reason
Ganapathi Pooja: ಸನಾತನ ಹಿಂದೂ ಧರ್ಮದಲ್ಲಿ ವಿಘ್ನ ವಿನಾಶಕ ಗಣೇಶನಿಗೆ ಮೊದಲ ಪೂಜೆ ಸಲ್ಲುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ (Indian Tradition) ಪ್ರತಿ ಪೂಜೆಯೂ (Puja) ಕೂಡ ವಿಶೇಷವಾಗಿದ್ದು, ದೇವರನ್ನು ಸಿಂಗರಿಸಿ ಹೂವಿಟ್ಟು ಗಂಧ ಹಚ್ಚಿ ಪೂಜಿಸುವುದರಲ್ಲಿಯೇ ಭಕ್ತರು ಪರಮಾನಂದ ಕಾಣುತ್ತಾರೆ. ಅದರಲ್ಲಿಯೂ ಗಣೇಶ ಹಬ್ಬದಂದು ಗಣಪನಿಗೆ ವಿಶೇಷ ಪೂಜೆಗಳು (Ganapathi Pooja) ವಿಶೇಷ ಅಲಂಕಾರಗಳಂತು ಇದ್ದೇ ಇರುತ್ತವೆ ಆದ್ರೆ ಗಣಪನ ಪೂಜೆಗೆ ಆ ಒಂದು ಸಿಂಗಾರವನ್ನು ಮಾಡಬಾರದಂತೆ.
ಗಣಪನನ್ನು ಭೋಜನ ಪ್ರಿಯ ಎಂದು ಕರೆಯುತ್ತೇವೆ. ಅಂತೆಯೇ ಸಿಂಗಾರ ಪ್ರಿಯನಾಗಿರುವ ಕಾರಣ, ಗಣೇಶನನ್ನು ಹಲವು ರೀತಿಯಲ್ಲಿ ಸಿಂಗರಿಸಲಾಗುತ್ತದೆ. ಮಾಲೆ ಹಾಕಿ, ಹೂವಿಟ್ಟು ಕುಂಕುಮ ಗಂಧಗಳನ್ನಿಟ್ಟು ಪೂಜೆ ಮಾಡುತ್ತೇವೆ. ಆದರೆ ಗಣಪನಿಗೆ ಎಲ್ಲ ಹೂವುಗಳನ್ನು ಅರ್ಪಣೆ ಮಾಡಬಹುದು. ತುಳಸಿಯನ್ನು ಮಾತ್ರ ಬಳಸುವುದಿಲ್ಲ. ತುಳಸಿ ಮಾಲೆಯನ್ನಾಗಲಿ ದಳವನ್ನಾಗಲಿ ಅಪ್ಪಿ ತಪ್ಪಿಯೂ ಕೂಡ ಗಣೇಶನಿಗೆ ಅರ್ಪಿಸುವುದಿಲ್ಲ. ಅದಕ್ಕೂ ಕೂಡ ಒಂದು ಕಾರಣವಿದೆ.
ಗಣೇಶ ಹೇಗೆ ಪೂಜೆಯ ಪ್ರಥಮ ಭಾಗವೋ ಹಾಗೆ ತುಳಸಿಯೂ ಕೂಡ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾಳೆ. ತೀರ್ಥದಿಂದ ಹಿಡಿದು ನೈವೇದ್ಯದವರೆಗೂ ತುಳಸಿಯನ್ನು ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಗಿಡವೆಂದರೆ ಅದು ತುಳಸಿಯೇ ಎಂದು ಗುರುತಿಸಲಾಗುತ್ತದೆ. ಹಿಂದೂಗಳ ಪ್ರತಿಯೊಂದು ಮನೆಯಲ್ಲಿಯೂ ಕೂಡ ತುಳಸಿ ನೆಲೆಸಿಯೇ ಇರುತ್ತಾಳೆ.
ಭಗವಾನ್ ಮಹಾವಿಷ್ಣುವಿನ ಪರಮ ಭಕ್ತೆ ತುಳಸಿ. ಕೊನೆಗೆ ಕೃಷ್ಣನನ್ನೂ ಕೂಡ ಆಕೆ ವರಿಸುತ್ತಾಳೆ. ತುಳಸಿ ಅನೇಕ ವಿಷಯಗಳಲ್ಲಿ ನಮಗೆ ಪವಿತ್ರವಾಗಿ ಕಾಣುತ್ತಾಳೆ. ಇಷ್ಟೆಲ್ಲಾ ಇದ್ದರೂ ಕೂಡ ತುಳಸಿಯನ್ನು ಗಣಪನ ಪೂಜೆಯಲ್ಲಿ ಬಳಸುವುದಿಲ್ಲ. ಅದಕ್ಕೆ ಕಾರಣ ಇಬ್ಬರ ನಡುವೆಯೇ ನಡೆದ ಆ ಒಂದು ಸಣ್ಣ ಮುನಿಸು.
ತುಳಸಿ ಮಹಾ ಧರ್ಮರಾಯನ ಪುತ್ರಿ. ಪರಮ ಸುಂದರಿ ಬಾಲ್ಯದಿಂದಲೇ ವಿಷ್ಣುವಿಗಾಗಿ ತಪಿಸಿದವಳು ಪರಿತಪಿಸಿದವಳು. ಒಂದು ಬಾರಿ ವಿಷ್ಣುವಿನ ಪೂಜೆಗೆಂದೇ ಅವಳು ನದಿಯ ತೀರಕ್ಕೆ ಹೋದಾಗ, ನದಿಯ ತೀರದಲ್ಲಿ ಒಬ್ಬ ಸ್ಪರದ್ರೂಪ ಸುಂದರನೊಬ್ಬ ತಪಸ್ಸು ಮಾಡುತ್ತಿದ್ದ. ಆತನ ದೇಹವು ಶುದ್ಧ ಶ್ರೀಗಂಧದ ಮತ್ತು ನೈಸರ್ಗಿಕ ಸುಗಂಧ ದ್ರವ್ಯಗಳ ಸುವಾಸನೆಯಿಂದ ತುಂಬಿತ್ತು. ಆತ ಹೊಳೆಯುವ ಆಭರಣದಿಂದ ಕಂಗೊಳಿಸುತ್ತಿದ್ದ ಆ ಸುಂದರನನ್ನು ಕಂಡ ಕೂಡಲೇ ತುಳಸಿ ಪ್ರೇಮ ಪಾಶದಲ್ಲಿ ಸಿಲುಕಿ ಅವನ ಮೈಕಟ್ಟು ಕಂಡು ಅವನತ್ತ ಧಾವಿಸುತ್ತಾಳೆ. ಅವನನ್ನೇ ವರಿಸಬೇಕು ಎಂದು ಮನಸ್ಸಿನಲ್ಲಿಯೇ ಹಂಬಲಿಸುತ್ತಾಳೆ.
ಆದರೆ ನದಿ ತೀರದಲ್ಲಿ ತಪಸ್ಸಿನಲ್ಲಿ ನಿರತನಾದದ್ದು ಬೇರೆ ಯಾರು ಅಲ್ಲ, ಅದೇ ಗಣಪ. ಗಣಪನನ್ನು ಕಂಡು ಮೋಹಿತಳಾದ ತುಳಸಿ ಅವನ ಬಳಿಗೆ ಬಂದು ಅವನ ತಪಸ್ಸಿಗೆ ಭಂಗ ತರುತ್ತಾಳೆ. ನಾನು ನಿನ್ನನ್ನು ಮನಾಸಾರೆ ಮೆಚ್ಚಿಕೊಂಡಿದ್ದೇನೆ, ನನ್ನನ್ನು ಮದುವೆಯಾಗು ಎಂದು ವಿಘ್ನ ನಾಶಕನನ್ನು ಬೇಡಿಕೊಳ್ಳುತ್ತಾಳೆ. ತುಳಸಿ ನಿವೇದನೆಯನ್ನು ಶಾಂತಚಿತ್ತದಿಂದ ಕೇಳಿಸಿಕೊಂಡ ವಕ್ರದಂತ. ನಯವಾಗಿಯೇ ಆಕೆಯ ನಿವೇದನೆಯನ್ನು ತಿರಸ್ಕಾರಿಸುತ್ತಾನೆ.
ದೇವಿ, ನಾನು ಸಂಸಾರ ಸಾಗರದಿಂದ ದೂರವಿರಬೇಕು ಎಂದುಕೊಂಡವನು. ನನ್ನ ಇಡೀ ಬದುಕನ್ನು ದೇವರ ಧ್ಯಾನಕ್ಕಾಗಿಯೇ ಮೀಸಲಿಟ್ಟವನು. ನನ್ನ ತಂದೆ ತಾಯಿಗೆ ಅರ್ಪಿಸಿದವನು. ಮದುವೆ ಮನಸ್ಸಿನ ಶಾಂತಿಯನ್ನು ಹಾಳು ಮಾಡುತ್ತದೆ. ನನ್ನನ್ನು ನಿರಂತರ ತಪಸ್ಸಿನಿಂದ ದೂರವಿಡುತ್ತದೆ. ಹೀಗಾಗಿ ನಾನು ನಿನ್ನನ್ನು ವಿವಾಹವಾಗಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ.
ಆದರೆ ಪರಮ ಸುಂದರಿ ತುಳಸಿ, ಗಣೇಶನ ಈ ಒಂದು ತಿರಸ್ಕಾರ ಆಕೆಯ ಮನಸ್ಸನ್ನು ಇನ್ನಿಲ್ಲದಂತೆ ಘಾಸಿ ಮಾಡಿ ಹಾಕುತ್ತದೆ. ಅವನ ನಿರಾಕರಣೆಯಿಂದ ಕುಸಿದ ಮನಸ್ಸು ಏಕಾಏಕಿ ಕುಪಿತಗೊಂಡು ತನ್ನ ಸ್ಥಿಮಿತೆಯನ್ನೇ ಕಳೆದುಕೊಂಡ ತುಳಸಿ ಗಣೇಶನಿಗೆ ಶಾಪವಿಟ್ಟು ಬಿಡುತ್ತಾಳೆ.
ವಿಘ್ನ ವಿನಾಶಕ ನೀನು ನನ್ನ ಪವಿತ್ರ ಪ್ರೇಮವನ್ನು ಅಲ್ಲಗಳೆದಿದ್ದೀಯಾ. ನಿಸ್ವಾರ್ಥ ಪ್ರೀತಿಯನ್ನು ದೂರ ಮಾಡಿದ್ದೀಯಾ. ಯಾವ ತಪಸ್ಸಿಗೋಸ್ಕರ ನೀನು ನನ್ನನ್ನು ತಿರಸ್ಕರಿಸಿದ್ದೀಯೋ. ಯಾವ ಸಂಸಾರ ಸಾಗರದಲ್ಲಿ ನೀನು ಬೀಳಬಾರದು ಎಂದುಕೊಂಡು ನನ್ನ ಪ್ರೀತಿಯನ್ನು ನೀರಾಕರಿಸಿದ್ದಿಯೋ, ಅದಕ್ಕಾಗಿ ಶಾಶ್ವತವಾಗಿ ಸಂತನಾಗಿಬೇಕೆಂದಿರುವ ನಿನ್ನ ಪ್ರತಿಜ್ಞೆ ಎಂದಿಗೂ ಕೂಡ ಈಡೇರದೇ ಹೋಗಲಿ ಎಂದು ಗಣೇಶನನ್ನು ಶಪಿಸಿಬಿಡುತ್ತಾಳೆ.
ತುಳಸಿಯೂ ಹೀಗೆ ಸಿಡಿದೆದ್ದು ಶಾಪವಿಟ್ಟಿದ್ದರಿಂದ ಗಣೇಶ ಬೆಂಕಿಯಾಗಿ ಹೋಗುತ್ತಾನೆ. ವಿನಃಕಾರಣ ನನ್ನನ್ನು ತುಳಸಿ ಶಪಿಸಿದಳಲ್ಲ ಎಂದು ದೇವಿ, ನೀನು ಅನವಶ್ಯಕವಾಗಿ ನನ್ನನ್ನು ಶಪಿಸಿದ್ದೀಯ ನನ್ನದಲ್ಲದ ತಪ್ಪಿಗೆ ನಾನು ನಿನ್ನಿಂದ ಶಾಪಿತನಾಗಿದ್ದೇನೆ, ಅದಕ್ಕೆ ತಕ್ಕ ಶಾಸ್ತಿಯನ್ನು ನೀನು ಅನುಭವಿಸಲಿದ್ದೀಯಾ ಎಂದು ತುಳಸಿಗೆ ಮರುಶಾಪ ಹಾಕಿಬಿಡುತ್ತಾನೆ ಗಣಪ.
ಪರಮ ಸುಂದರಿಯೆಂಬ ಅಹಂಕಾರ ನಿನಗಿದೆ. ಇಂತಹ ಸುಂದರಿಯಾದ ನೀನು ಒಬ್ಬ ರಾಕ್ಷಸನ್ನು ವಿವಾಹವಾಗುಂತಾಗಲಿ ಶಾಶ್ವತ ಸಂತನಾಗಬೇಕೆಂದು ಬಯಸಿದ್ದ ನನ್ನನ್ನು ಶಪಿಸಿದ ನೀನು ಶಾಶ್ವತವಾಗಿ ಒಂದು ಗಿಡವಾಗಿ ಹೋಗು ಎಂದು ಶಪಿಸಿಬಿಡುತ್ತಾನೆ. ಕೋಪ ಆವೇಗ ಆವೇಶದಲ್ಲಿ ಇಬ್ಬರೂ ಒಬ್ಬರಿಗೊಬ್ಬರನ್ನು ಶಪಿಸಿಕೊಂಡು ಬಿಡುತ್ತಾರೆ.
ಆದರೆ ವಿನಾಯಕನ ಶಾಪದಿಂದ ಮನನೊಂದ ತುಳಸಿ ನನ್ನದು ತಪ್ಪಾಯ್ತು ವಿನಾಯಕ ಶಾಪದಿಂದ ನನ್ನನ್ನು ಮುಕ್ತಗೊಳಿಸು ಎಂದು ಬೇಡಿಕೊಳ್ಳುತ್ತಾಳೆ. ಇದರಿಂದ ಮನ ಕರಗಿದ ,ವಿನಾಯಕನು. ದೇವಿ ಶಾಪ ಕೊಟ್ಟಿದ್ದನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ ಆದ್ರೆ ಅದರ ಪ್ರಭಾವವನ್ನು ನಾನು ಕಡಿಮೆ ಮಾಡಬಲ್ಲೆ ಎಂದಾಗ ಅಷ್ಟಾದರೂ ಮಾಡಿ ಸ್ವಾಮಿ ಎಂದು ಮತ್ತೆ ಬೇಡಿಕೊಳ್ಳುತ್ತಾಳೆ.
ದೇವಿ ಮುಂದಿನ ತಲೆಮಾರು ನಿನ್ನನ್ನು ಶುಭ ಸಸ್ಯವೆಂದು ಪೂಜೆ ಮಾಡುವಂತಾಗುತ್ತದೆ. ನಿಮ್ಮ ಪಾವಿತ್ರ್ಯತೆಯು ಪ್ರತಿಯೊಂದು ಆಚರಣೆಗಳಲ್ಲೂ ಬಳಕೆಯಾಗುತ್ತದೆ. ದೇವಾನು ದೇವತೆಗಳ ಪೂಜೆಯಲ್ಲಿ ನಿಮ್ಮದೇ ಪಾತ್ರವಿರುತ್ತದೆ. ಆದರೆ ನನ್ನ ಪೂಜೆಯಲ್ಲಿ ಮಾತ್ರ ನಿನ್ನನ್ನು ಬಳಸಲಾಗುವುದಿಲ್ಲ ಎಂದು ಗಣೇಶ ತನ್ನದೇ ಶಾಪಕ್ಕೆ ತಾನೇ ಒಂದು ಪರಿಹಾರ ನೀಡುತ್ತಾನೆ. ಆದ್ದರಿಂದ ಗಣೇಶನ ಶಾಪದಿಂದಾಗಿಯೇ ತುಳಸಿದಳವನ್ನು ಇಂದಿಗೂ ಗಣೇಶನಿಗೆ ಅರ್ಪಿಸುವುದಿಲ್ಲ.
ಗಣೇಶನ ಶಾಪದಿಂದ ತುಳಸಿಯು ತನ್ನ ಭವಿಷ್ಯದಲ್ಲಿ ಶಂಖಚೂಡ ಎನ್ನುವ ರಾಕ್ಷಸನನ್ನು ವಿವಾಹವಾಗಿ, ತುಳಸಿ ಮತ್ತು ಶಂಖಚೂಡನ ವೈವಾಹಿಕ ಜೀವನ ಅನ್ಯೋನ್ಯತೆಯಿಂದಿದ್ದರೂ ಕೂಡ ಶಂಖಚೂಡನ ಕೆಲವೊಂದು ಅಹಿತಕರ ವರ್ತನೆಯಿಂದ ಭಗವಾನ್ ಶಿವನು ಆತನನ್ನು ಕೊಲ್ಲುತ್ತಾನೆ. ನಂತರ ತುಳಸಿ ತನಗೆ ಮರುಜನ್ಮ ನೀಡುವಂತೆ ಹಾಗು ಪತ್ನಿಯಾಗಿ ಸ್ವೀಕರಿಸುವಂತೆ ಭಗವಾನ್ ವಿಷ್ಣುವಿನ ಬಳಿ ವರವನ್ನು ಪಡೆದು ತುಳಸಿ ಗಿಡವಾಗಿ ಜನಿಸುತ್ತಾಳೆ.