UPI: ಫೋನ್ ಪೇ, ಗೂಗಲ್ ಪೇಗಳಲ್ಲಿ ಹಣ ಹಾಕುವಾಗ ತಪ್ಪಾದ ಖಾತೆಗೆ ಹೋದ್ರೆ ತಲೆಬಿಸಿ ಬೇಡ !! ಜಸ್ಟ್ ಹೀಗ್ ಮಾಡಿ, ಮರಳಿ ಹಣ ಪಡೆಯಿರಿ
UPI: ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಭಾರತದ ಎಲ್ಲೆಡೆ ಸ್ಮಾರ್ಟ್ ಫೋನ್ ನಲ್ಲಿಯೇ UPI ಮೂಲಕ ಹಣ ಪಾವತಿ ಮಾಡಲಾಗುತ್ತಿದೆ. ಇದು ಬ್ಯಾಂಕ್ (bank) ವ್ಯವಹಾರಗಳನ್ನು ಸರಳವಾಗಿ ಸುಲಭವಾಗಿ ಮಾಡಲು ಅನುವು ಮಾಡಿಕೊಟ್ಟಿದೆ. UPI ಪಾವತಿಯು ಅತ್ಯಂತ ಸರಳವಾದ ವಿಧಾನವಾಗಿದ್ದರಿಂದ ಭಾರತದ (India) ಎಲ್ಲ ವ್ಯಾಪಾರಿಗಳು, ಜನರು ಡಿಜಿಟಲ್ ಪಾವತಿಯನ್ನು ಬಳಸುತ್ತಿದ್ದಾರೆ.
ಆದರೆ, ಈ ಯುಪಿಐ ಪಾವತಿಯಿಂದ ಹಲವು ಬಾರಿ ಸಂಕಷ್ಟಕ್ಕೆ ಸಿಲುಕುವ ಪ್ರಸಂಗ ಎದುರಾಗುತ್ತದೆ. ಹೌದು, ತಪ್ಪಾದ ಯುಪಿಐ ಖಾತೆಗೆ ಹಣ ವರ್ಗಾವಣೆ ಮಾಡಿ, ನಂತರ ಅದನ್ನು ಮರಳಿ ಪಡೆಯಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಈ ಸಂದರ್ಭಗಳಲ್ಲಿ ಹಣ ಸುಭವಾಗಿ ಮರಳಿ ಸಿಗುವಂತೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ರೀಫಂಡ್ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಆರ್ ಬಿಐ ನೀಡಿರುವ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸುವ ಮೂಲಕ ನೀವು ಹಣ ಹಿಂಪಡೆಯಬಹುದು.
ತಪ್ಪಾದ ಖಾತೆಗೆ ಹಣ ವರ್ಗಾವಣೆ ಮಾಡಿದ ಮೂರು ದಿನಗಳೊಳಗೆ ನೀವು ದೂರು ದಾಖಲಿಸೋದು ಅಗತ್ಯ. ನೀವು ಹಣವನ್ನು ತಪ್ಪಾದ ಯುಪಿಐ ಖಾತೆಗೆ ವರ್ಗಾಯಿಸಿದ್ದರೆ 18001201740 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದು. ತಪ್ಪಾದ ಖಾತೆಗೆ ಹಣ ವರ್ಗಾವಣೆ ಮಾಡಿರುವ ಬಗ್ಗೆ ಎಲ್ಲ ಮಾಹಿತಿಗಳನ್ನು ನೀಡಿ. ಬಳಿಕ ನಿಮ್ಮ ಖಾತೆಯಿರುವ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಎಲ್ಲ ಮಾಹಿತಿಗಳೊಂದಿಗೆ ಅರ್ಜಿ ನಮೂನೆ ಭರ್ತಿ ಮಾಡಿ. ಬ್ಯಾಂಕ್ ಸಂಖ್ಯೆ ಅಥವಾ ಮನವಿ ಸಂಖ್ಯೆಯನ್ನು ಬ್ಯಾಂಕ್ ಮ್ಯಾನೇಜರ್ ನಿಮಗೆ ನೀಡುತ್ತಾರೆ.
ಅಥವಾ ನೀವು bankingombudsman.rbi.org.in ಮೇಲ್ ಮಾಡುವ ಮೂಲಕ ಕೂಡ ನಿಮ್ಮ ದೂರು ದಾಖಲಿಸಬಹುದು. ಆರ್ ಬಿಐ ಮಾರ್ಗಸೂಚಿಗಳ ಅನ್ವಯ ತಪ್ಪಾದ ಖಾತೆಗೆ ಹಣ ವರ್ಗಾವಣೆ ಮಾಡಿದ್ದರೆ ದೂರು ದಾಖಲಿಸಿದ ಬಳಿಕ 48 ಗಂಟೆಗಳೊಳಗೆ ಹಣವನ್ನು ರೀಫಂಡ್ ಮಾಡಬೇಕು. ಆದರೆ, ದೂರು ನೀಡಿರುವ ಬಗ್ಗೆ ನಿಮಗೆ ಬಂದಿರುವ ಯಾವುದೇ ಸಂದೇಶ ಡಿಲೀಟ್ ಮಾಡಬೇಡಿ.