Tulsi Rules: ತುಳಸಿ ಗಿಡವನ್ನು ಮನೆಗೆ ತರಬೇಕು ಅಂದ್ಕೊಂಡಿದ್ದೀರಾ? ಹಾಗಿದ್ರೆ ಅದಕ್ಕೆ ಈ ದಿನ ಮಾತ್ರ ಸೂಕ್ತ!
Tulasi plant vastu tips these are the Tulasi plant related rules to remove money problem
Tulasi Plant rules: ತುಳಸಿ ಗಿಡವನ್ನು (Tulsi Plant) ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಯ ರೂಪವೆಂದು ಹೇಳಲಾಗುತ್ತದೆ. ಅದಕ್ಕಾಗಿಯೇ ತುಳಸಿ ಗಿಡ ಇರುವಲ್ಲಿ ಲಕ್ಷ್ಮಿ ದೇವಿಯು ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ಸನಾತನ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ತುಳಸಿ ಸಸ್ಯದ ಮಹತ್ವವನ್ನು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಅನೇಕ ಗ್ರಂಥಗಳು ಮತ್ತು ಪುರಾಣಗಳಲ್ಲಿ ವಿವರಿಸಲಾಗಿದೆ.
ಅಂತೆಯೇ ತುಳಸಿ ಗಿಡವನ್ನು ತಪ್ಪಾದ ದಿನಗಳಲ್ಲಿ, ತಪ್ಪಾದ ಕ್ರಮಗಳಲ್ಲಿ ನೆಟ್ಟರೆ ಅದು ಕುಟುಂಬಕ್ಕೆ ಅದೃಷ್ಟದ ಬದಲು ದುರಾದೃಷ್ಟವನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಹಾಗಾಗಿ ತುಳಸಿ ಗಿಡವನ್ನು ಯಾವ ದಿನಗಳಲ್ಲಿ, ಯಾವ ಕ್ರಮದಲ್ಲಿ ನೆಡಬೇಕು ಎಂದು ಇಲ್ಲಿ ತಿಳಿಸಲಾಗಿದೆ(Tulasi Plant rules).
ಹೌದು, ತುಳಸಿ ಗಿಡವನ್ನು ಮನೆಯಲ್ಲಿ ನೆಡಲು ಶಾಸ್ತ್ರದಲ್ಲಿ ಕೆಲವು ನಿಯಮಗಳ ಬಗ್ಗೆ ಹೇಳಲಾಗಿದೆ. ಶಾಸ್ತ್ರದ ಪ್ರಕಾರ, ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಅದು ಜೀವನದ ಪ್ರತಿಯೊಂದು ಹಂತದಲ್ಲಿ ಪ್ರಗತಿಯನ್ನು ಸಾಧಿಸಲು ಸಹಕಾರಿಯಾಗುತ್ತದೆ. ಆದರೆ ತುಳಸಿ ಗಿಡವನ್ನು ಸೋಮವಾರ, ಬುಧವಾರ ಮತ್ತು ಭಾನುವಾರ ತುಳಸಿ ಗಿಡವನ್ನು ನೆಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದಲ್ಲದೆ ಭಾನುವಾರದಂದು ತುಳಸಿಯನ್ನು ಮುಟ್ಟುವುದನ್ನು ತಪ್ಪಿಸಬೇಕು. ತುಳಸಿ ಗಿಡವನ್ನು ಏಕಾದಶಿಯಂದು ಕೂಡ ನೆಡಬಾರದು. ಆದರೆ ಏಕಾದಶಿಯ ದಿನದಂದು ವಿಷ್ಣುವಿನ ಪೂಜೆಯಲ್ಲಿ ತುಳಸಿ ದಳಗಳನ್ನು ಅರ್ಪಿಸಬೇಕು. ಇದಕ್ಕಾಗಿ ಒಂದು ದಿನ ಮುಂಚಿತವಾಗಿ ತುಳಸಿಯನ್ನು ಕಿತ್ತು ಇಟ್ಟುಕೊಳ್ಳಬೇಕು. ಸೂರ್ಯಗ್ರಹಣ ಅಥವಾ ಚಂದ್ರಗ್ರಹಣದ ದಿನವೂ ತಪ್ಪದೆ ತುಳಸಿ ಗಿಡವನ್ನು ನೆಡಬಾರದು.
ಹೊಸ ತುಳಸಿ ಗಿಡವನ್ನು ನೆಡಲು ಗುರುವಾರವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಗುರುವಾರ ವಿಷ್ಣುವಿಗೆ ಸಮರ್ಪಿತವಾಗಿದೆ ಮತ್ತು ತುಳಸಿಯು ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ. ಆದ್ದರಿಂದಲೇ ಗುರುವಾರ ತುಳಸಿಯನ್ನು ನೆಡುವುದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ. ಕಾರ್ತಿಕ ಮಾಸದ ಯಾವುದೇ ಶುಭ ಗುರುವಾರದಂದು ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟರೆ ಮತ್ತು ಅದರ ಆರೈಕೆಯನ್ನು ಮಾಡಿದರೆ, ಸಸ್ಯವು ಹಸಿರಾಗಿದ್ದರೆ, ನಿಮ್ಮ ಮನೆಗೆ ಹೆಚ್ಚಿನ ಸಂತೋಷವು ಬರುತ್ತದೆ ಎಂದು ನಂಬಲಾಗಿದೆ. ಇದರಿಂದ ನೀವು ಹಣಕಾಸಿನ ಬೆಂಬಲವನ್ನೂ ಪಡೆದುಕೊಳ್ಳುತ್ತೀರಿ.
ಗುರುವಾರದ ಜೊತೆಗೆ ಶುಕ್ರವಾರ ಮತ್ತು ಶನಿವಾರ ತುಳಸಿ ಗಿಡವನ್ನೂ ನೆಡಬಹುದು. ಶನಿವಾರದಂದು ತುಳಸಿ ಗಿಡವನ್ನು ನೆಟ್ಟರೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಮತ್ತೊಂದೆಡೆ, ಶುಕ್ರವಾರದಂದು ತುಳಸಿ ಗಿಡವನ್ನು ನೆಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದವೂ ಸಿಗುತ್ತದೆ.
ತುಳಸಿಯನ್ನು ನೆಡುವ ಸ್ಥಳದ ಆಯ್ಕೆ ಬಗ್ಗೆ ಹೇಳುವುದಾದರೆ, ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮುಖ್ಯವಾಗಿ ತುಳಸಿ ಗಿಡವನ್ನು ನಿಯಮಿತವಾಗಿ ಸ್ವಚ್ಛವಾಗಿಟ್ಟುಕೊಳ್ಳಿ. ಇನ್ನು ತುಳಸಿ ಗಿಡವನ್ನು ನೆಟ್ಟು ನಿಯಮಿತವಾಗಿ ನೀರುಹಾಕಬೇಕು. ಆದರೆ ಗೊಬ್ಬರವನ್ನು ಬಳಸಬೇಡಿ. ತುಳಸಿಗೆ ಹಿತ ಮಿತವಾಗಿ ನೀರು ಹಾಕಿ, ನೈಸರ್ಗಿಕವಾಗಿ ಬೆಳೆಯಲು ಬಿಡಿ.
ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಭರ್ಜರಿ ಆಫರ್ ಕೊಟ್ಟ ‘iPhone’ – ನೀವೆಂದೂ ಊಹಿಸದ ದರದಲ್ಲಿ ಕೈಗುಟಕಲಿದೆ ಈ ಫೋನ್