7th Pay Commission: ಕೇಂದ್ರ ನೌಕರರಿಗೆ ಮಹತ್ವದ ಸುದ್ದಿ- ಬಡ್ತಿಗೆ ಹೊಸ ರೂಲ್ಸ್ ಜಾರಿಗೊಳಿಸಿದ ಸರ್ಕಾರ – ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್
Central Government news 7th pay commission update change in promotion rules of Government employees
7th Pay Commission Update : ಕೇಂದ್ರ ಸರ್ಕಾರಿ ನೌಕರರಿಗೆ ಒಂದರ ಮೇಲೊಂದು ಗುಡ್ ನ್ಯೂಸ್ ಹೊರ ಬೀಳುತ್ತಿದೆ. ಕೆಲವೇ ದಿನಗಳಲ್ಲಿ ಡಿಎ(DA) ಹೆಚ್ಚಳವಾಗಲಿದ್ದು, ಇದಕ್ಕೂ ಮೊದಲೇ ಸರ್ಕಾರಿ ನೌಕರರ ಬಡ್ತಿಗೆ ಸಂಬಂಧಿಸಿದಂತೆ ಬೊಂಬಾಟ್ ಸುದ್ದಿ ಪ್ರಕಟವಾಗಿದೆ.ಏಳನೇ ವೇತನ ಆಯೋಗದ ಅಡಿಯಲ್ಲಿ(7th Pay Commission Update) ವೇತನ ಪಡೆಯುತ್ತಿರುವ ಮತ್ತು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಹೆಚ್ಚು ಪ್ರಯೋಜನ ನೀಡುವ ಮಾಹಿತಿ ಇಲ್ಲಿದೆ.
ಕೇಂದ್ರ ಸರ್ಕಾರ ಶೀಘ್ರದಲ್ಲೇ ನೌಕರರಿಗೆ ಡಿಎ ಹೆಚ್ಚಳ ಮಾಡುವ ಸಾಧ್ಯತೆ ಹೆಚ್ಚಿದೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಡಿಎ ಹೆಚ್ಚಳದ ಬಗ್ಗೆ ಘೋಷಿಸಬಹುದು. ಇದರಿಂದ ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಇದರ ನಡುವೆ, ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ರಕ್ಷಣಾ ಉದ್ಯೋಗಿಗಳಿಗೆ ಪರಿಷ್ಕೃತ ಮಾನದಂಡಗಳನ್ನು ನಿಗದಿ ಮಾಡಲಾಗಿದೆ. ಈ ಕುರಿತು ರಕ್ಷಣಾ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಈ ಅಧಿಸೂಚನೆಯಲ್ಲಿ ಬಡ್ತಿಗೆ ಅಗತ್ಯವಿರುವ ಅರ್ಹತೆಯ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ರಕ್ಷಣಾ ಸಚಿವಾಲಯದ ರಕ್ಷಣಾ ನಾಗರಿಕ ನೌಕರರಿಗೆ (defense civilian employees)ಬಡ್ತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇಲ್ಲಿ ಕನಿಷ್ಠ ಸೇವಾ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ.
ಏಳನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುತ್ತಿರುವ ಮತ್ತು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಇದು ಅನುಕೂಲ ನೀಡಲಿದೆ. ಸರ್ಕಾರ ಬಡ್ತಿ ನಿಯಮಗಳಲ್ಲಿ ಬದಲಾವಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಪ್ರತಿ ಹಂತಕ್ಕೆ ಅನುಗುಣವಾಗಿ ಬಡ್ತಿಯ ಮಾನದಂಡಗಳನ್ನು ನಿಗದಿ ಮಾಡಲಾಗಿದ್ದು, ಇದರೊಂದಿಗೆ ಜ್ಞಾಪಕ ಪತ್ರ ಕೂಡ ನೀಡಲಾಗಿದೆ.ಇದರ ಜೊತೆಗೆ ಗ್ರೇಡ್ ಪ್ರಕಾರ ಬಡ್ತಿ ಎಷ್ಟು ಎಂಬ ಮಾಹಿತಿಯ ಪಟ್ಟಿಯನ್ನು ಶೇರ್ ಮಾಡಲಾಗಿದೆ.
ಬಿಡುಗಡೆ ಮಾಡಿದ ಪಟ್ಟಿಯ ಮಾಹಿತಿ ಅನುಸಾರ, ಹಂತ 1 ರಿಂದ 2 ಮತ್ತು 2 ರಿಂದ 3 ರವರೆಗಿನ ಉದ್ಯೋಗಿಗಳು 3 ವರ್ಷಗಳ ಅನುಭವ ಪಡೆದಿರಬೇಕು. ಹಂತ 2 ರಿಂದ 4 ರವರೆಗೆ, 8 ವರ್ಷಗಳ ಅನುಭವ ಹೊಂದಿರಬೇಕು. ಆದರೆ ಹಂತ 3 ರಿಂದ 4 ರವರೆಗೆ, 5 ವರ್ಷಗಳ ಅನುಭವವಿರಬೇಕು. 17 ನೇ ಹಂತದವರೆಗಿನ ಉದ್ಯೋಗಿಗಳು 1 ವರ್ಷದ ಅನುಭವವನ್ನು ಹೊಂದಿರತಕ್ಕದ್ದು ಇದರ ಜೊತೆಗೆ 6 ರಿಂದ 11 ಹಂತಗಳಿಗೆ, 12 ವರ್ಷಗಳ ಅನುಭವವನ್ನು ಹೊಂದಿರತಕ್ಕದ್ದು. ಇದರ ಆಧಾರದ ಮೇಲೆ ನೌಕರರಿಗೆ ಬಡ್ತಿ ನೀಡಲಾಗುತ್ತದೆ.