Home Breaking Entertainment News Kannada Pooja Bhatt: ತಂದೆಯೊಂದಿಗೇ ಲಿಪ್ ಲಾಕ್ ಮಾಡಿದ ಪೂಜಾ ಭಟ್- ವೈರಲ್ ಫೋಟೋ ಬಗ್ಗೆ ಕೊನೆಗೂ...

Pooja Bhatt: ತಂದೆಯೊಂದಿಗೇ ಲಿಪ್ ಲಾಕ್ ಮಾಡಿದ ಪೂಜಾ ಭಟ್- ವೈರಲ್ ಫೋಟೋ ಬಗ್ಗೆ ಕೊನೆಗೂ ತುಟಿಬಿಚ್ಚಿದ ನಟಿ

Pooja Bhatt
Image source Credit: Indian Express

Hindu neighbor gifts plot of land

Hindu neighbour gifts land to Muslim journalist

Pooja Bhatt : ಬಾಲಿವುಡ್‌ ಸ್ಟಾರ್‌ ನಿರ್ದೇಕರಲ್ಲಿ ಮಹೇಶ್‌ ಭಟ್‌ ಕೂಡಾ ಒಬ್ಬರು. ನಿರ್ಮಾಪಕ ಹಾಗೂ ನಟಿ ಪೂಜಾ ಭಟ್ ಅವರ ತಂದೆ ಮಹೇಶ್ ಭಟ್ (Mahesh Bhatt) ವಿವಾದಗಳ ಮೂಲಕವೇ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಮಹಿಳೆಯರ ವಿಷಯದಲ್ಲಿ ಮಹೇಶ್ ಭಟ್ ಹಲವು ಬಾರಿ ವಿವಾದಗಳಿಗೆ ಗುರಿಯಾಗಿದ್ದಾರೆ.ಮಹೇಶ್ ಭಟ್ ಅವರ ಕುರಿತಂತೆ ಪೂಜಾ ಭಟ್ ಅವರ ಮಗಳನ್ನು ಪ್ರಶ್ನೆ ಕೇಳಲಾಗಿದೆ. ಮ್ಯಾಗಜಿನ್‌ ಕವರ್‌ ಪೇಜ್‌ಗಾಗಿ ತಂದೆ ಮಹೇಶ್‌ ಭಟ್‌ ಜೊತೆಗೆ ಲಿಪ್‌ ಕಿಸ್‌ (Lip Kiss)ಮಾಡುವ ಫೋಟೋಶೂಟ್‌ (Photo Shoot) ಮಾಡಿಸಿದ್ದು, ಈಗಲೂ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.

ಪೂಜಾ ಭಟ್‌ (Pooja Bhatt) –ಮಹೇಶ್‌ ಭಟ್‌ ತಂದೆ-ಮಗಳಾಗಿದ್ದರು ಕೂಡ ಪರಸ್ಪರ ಚುಂಬಿಸುವ (Kissing) ಫೋಟೋವನ್ನು ಮ್ಯಾಗಜಿನ್ ಗಾಗಿ ಶೂಟ್‌ ಮಾಡಲಾಗಿತ್ತು. ಈ ಸಂದರ್ಭ ಪೂಜಾ ಭಟ್ ತಂದೆ ಮಹೇಶ್‌ ಭಟ್ ಮಡಿಲಿನ ಮೇಲೆ ಕುಳಿತು ಲಿಪ್‌ಲಾಕ್‌ ಮಾಡಿದ ಫೋಟೋ ಮ್ಯಾಗಜಿನ್‌ ಮುಖಪುಟದಲ್ಲಿ ಪ್ರಕಟವಾಗಿತ್ತು. ಈ ಫೋಟೋ ನೋಡಿದವರೆಲ್ಲ ಅಚ್ಚರಿ ವ್ಯಕ್ತಪಡಿಸಿ, ತಂದೆ-ಮಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಸಂದರ್ಭ ಭಾರೀ ಟ್ರೋಲ್ ಕೂಡ ಆಗಿದ್ದರು. ಸದ್ಯ, ಈ ವಿಚಾರ ಈಗಲೂ ಕೂಡ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ಸಿದ್ದಾರ್ಥ್‌ ಕಣ್ಣನ್‌ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪೂಜಾ ಭಟ್‌ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

”ಅದೊಂದು ಇನೋಸೆಂಟ್‌ ಫೋಟೋಶೂಟ್‌ ಆಗಿತ್ತು. ಮಕ್ಕಳು ಎಷ್ಟೇ ದೊಡ್ಡವರೆ ಆದರೂ ಕೂಡ ಮಕ್ಕಳು ಹೆತ್ತವರಿಗೆ ಇನ್ನೂ ಚಿಕ್ಕ ಮಕ್ಕಳೇ! ಆಗ ನನಗೆ 17 ವರ್ಷ ವಯಸ್ಸು, ಈ ಸಮಾಜ ಆ ಫೋಟೋ ನೋಡಿ ಅಷ್ಟರ ಮಟ್ಟಿಗೆ ಟ್ರೋಲ್‌ ಮಾಡಬಹುದು ಎಂಬ ಅಂದಾಜು ಕೂಡ ನನಗಿರಲಿಲ್ಲ. ಅದು ತಂದೆ-ಮಗಳ ಬಾಂಧವ್ಯದ ಮುತ್ತು ಅಷ್ಟೇ ಆಗಿತ್ತು. ಆದರೆ ಅದನ್ನು ನೋಡಿದ ಜನರ ಯೋಚನಾ ಲಹರಿಯೇ ಬೇರೆ ರೀತಿ ಇತ್ತು”.

ನನಗೆ ಶಾರುಖ್‌ ಖಾನ್‌ ಹೇಳಿದ ಮಾತು ಈಗಲೂ ಕೂಡ ನೆನಪಾಗುತ್ತದೆ. ಮಕ್ಕಳು 17-18 ವರ್ಷ ವಯಸ್ಸಾದ ಬಳಿಕ ತಂದೆ ತಾಯಿಗೆ ಮುತ್ತು ಕೊಡುತ್ತಾರೆ. ಅವರ ಬಳಿ ಕಿಸ್‌ ಕೇಳುತ್ತಾರೆ. ಜನರು ತಂದೆ ಹಾಗೂ ಮಗಳ ಸಂಬಂಧದ ಬಗ್ಗೆ ಹೀಗೆಲ್ಲಾ ಮಾತನಾಡುವ ಕ್ರಮ ಸರಿಯಲ್ಲ. ಆ ಫೋಟೋಶೂಟ್‌ ಬಗ್ಗೆ ನನಗೆ ಯಾವುದೇ ರೀತಿಯ ವಿಷಾದವಿಲ್ಲ. ನಮ್ಮ ಉದ್ದೇಶ ಒಳ್ಳೆಯದೇ ಆಗಿತ್ತು. ಆದರೆ ಜನರು ಏನೇ ಘಟನೆ ನಡೆದರೂ ಕೂಡ ಅದರ ಬಗ್ಗೆ ತಪ್ಪಾಗಿಯೇ ಮಾತಾಡುತ್ತಾರೆ. ನನಗೆ ಇಷ್ಟು ವಯಸ್ಸಾಗಿದ್ದರೂ ಕೂಡ ಈಗಲೂ ಕೂಡ ನನ್ನ ತಂದೆಗೆ ಚಿಕ್ಕ ಮಗುವೇ ತಾನೇ?” ಎಂದು ಪೂಜಾ ಭಟ್‌ ವೈರಲ್‌ ಫೋಟೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:ಯುಪಿಎಸ್‌ಸಿ ಇಂದ ಉದ್ಯೋಗಾವಕಾಶ! ಟೀಚಿಂಗ್, ನಾನ್‌ ಟೀಚಿಂಗ್ ಹುದ್ದೆಗೆ ಅರ್ಜಿ ಆಹ್ವಾನ!!!