Dearness Allowance: ಕೇಂದ್ರ ನೌಕರರಿಗೆ ಭರ್ಜರಿ ಗುಡ್ ನ್ಯೂಸ್! ವೇತನದಲ್ಲಿ ಭಾರೀ ಹೆಚ್ಚಳ ?

Central Government news 7th pay commission dearness allowance salary hike for Central Government employees

Dearness Allowance: ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಹೆಚ್ಚಿದೆ. ಈ ತಿಂಗಳಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ (Central Government Employees) ಮೋದಿ ಸರ್ಕಾರ ಸಿಹಿಸುದ್ದಿ ನೀಡುವ ಸಾಧ್ಯತೆ ದಟ್ಟವಾಗಿದ್ದು, ತುಟ್ಟಿಭತ್ಯೆ (7th Pay Commission)ಹೆಚ್ಚಾಗಬಹುದು ಎಂದು ವರದಿಗಳು ಹೇಳಿವೆ ಎನ್ನಲಾಗಿದೆ.

ಉದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿಯೊಂದು ಪ್ರಕಟವಾಗುವ ನಿರೀಕ್ಷೆಯಿದೆ.ವರದಿಗಳ ಪ್ರಕಾರ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗುವ (Salary Hike)ಸಾಧ್ಯತೆಯಿದೆ ಎನ್ನಲಾಗಿದೆ. ಮೋದಿ ಸರ್ಕಾರ ಪ್ರತಿ ವರ್ಷ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಿಸುತ್ತದೆ. ಒಂದು ಬಾರಿ ಜನವರಿಯಿಂದ ಜೂನ್‌ನಲ್ಲಿ ಡಿಎ (DA)ಹೆಚ್ಚಳ ಮಾಡಿದರೆ ಮತ್ತೊಮ್ಮೆ ಜುಲೈನಿಂದ ಡಿಸೆಂಬರ್‌ನಲ್ಲಿ ಡಿಎ(Dearness Allowance) ಹೆಚ್ಚಳ ಮಾಡಲಾಗುತ್ತದೆ. ಡಿಎ ಪ್ರತಿ ವರ್ಷ ಎರಡು ಬಾರಿ ಹೆಚ್ಚಾದಂತೆ ಅದೆ ರೀತಿ ನೌಕರರ ವೇತನ ಕೂಡ ಏರಿಕೆಯಾಗುತ್ತದೆ.

ಈ ಡಿಎ ಹೆಚ್ಚಳ ಜುಲೈನಿಂದ ಜಾರಿಗೆ ಬರಲಿದೆ ಎನ್ನಲಾಗಿದ್ದು, ಎರಡು ತಿಂಗಳ ಬಾಕಿ ಒಟ್ಟಿಗೆ ಬರಲಿದ್ದು, ಹೀಗಾಗಿ, ನೌಕರರ ವೇತನ ಹೆಚ್ಚಲಿದೆ ಎನ್ನಲಾಗಿದೆ. ಮುಂದಿನ ವರ್ಷ ಡಿಎ ಶೇ.50ಕ್ಕಿಂತ ಹೆಚ್ಚು ತಲುಪುವ ನಿರೀಕ್ಷೆಯಿದ್ದು, ಇದು ಸಂಭವಿಸಿದಲ್ಲಿ ಡಿಎ ಮತ್ತೆ ಮೊದಲಿನಿಂದ ಪ್ರಾರಂಭವಾಗುತ್ತದೆ ಎಂದು ವರದಿಗಳು ಹೇಳುತ್ತವೆ. ಡಿಎ ನೌಕರರ ಮೂಲ ವೇತನಕ್ಕೆ ಜಮಾ ಆಗಲಿದ್ದು, ಅಂದರೆ, ಒಂದು ವೇಳೆ, ನೌಕರರ ಮೂಲ ವೇತನ 18 ಸಾವಿರ ರೂ.ಗಳಾಗಿದ್ದಲ್ಲಿ ಶೇ.50 ಡಿಎ ಅಂದರೆ ರೂ. 9 ಸಾವಿರ ವೇತನ ಹೆಚ್ಚಳ ಆಗಲಿದೆ. ಆ ಬಳಿಕ DA ಶೂನ್ಯದಿಂದ ಆರಂಭವಾಗಬಹುದು. ಹೀಗಾದರೆ ನೌಕರರ ವೇತನ ಒಂದೇ ಬಾರಿಗೆ ಹೆಚ್ಚಳವಾಗಲಿದೆ.

ಈ ಸುದ್ದಿ ಕೂಲಿಕಾರರಿಗೆ ನೆಮ್ಮದಿ ನೀಡುವ ಸಂಭವವಿದೆ ಎನ್ನಬಹುದು. ಈ ತಿಂಗಳಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಸಿಹಿಸುದ್ದಿ ನೀಡುವ ನಿರೀಕ್ಷೆಯಿದ್ದು,ತುಟ್ಟಿಭತ್ಯೆ ಹೆಚ್ಚಾಗಬಹುದು ಎಂದು ವರದಿಗಳು ತಿಳಿಸಿವೆ. ಈ ತಿಂಗಳ ಅಂತ್ಯದಲ್ಲಿ ಡಿಎ ಹೆಚ್ಚಳದ ಬಗ್ಗೆ ಘೋಷಣೆ ಹೊರಬೀಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇದನ್ನೂ ಓದಿ: Prerana Baby Shower: ಧ್ರುವ ಸರ್ಜಾ ಪತ್ನಿ ಪ್ರೇರಣಾ ಸೀಮಂತ ಎಲ್ಲಿ ಮಾಡಿದ್ರೂ ಗೊತ್ತಾ?! ವೀಡಿಯೋ ವೈರಲ್

Leave A Reply

Your email address will not be published.