Honnavara: ಕಾರವಾರ ಬೀಚಿನಲ್ಲಿ ಬಲೀನ್ ತಿಮಿಂಗಿಲ ಪತ್ತೆ!!! ದೈತ್ಯ ಗಾತ್ರದ ಮೀನನ್ನು ಕಂಡು ಅಚ್ಚರಿಗೊಂಡ ಜನ!!!

Uttar kannada news baleen whale spotted at Karwar near mugali beach

Share the Article

Honnavara: ಕಡಲ ಕಿನಾರೆಯಲ್ಲಿ ಸಮುದ್ರದ ಕೆಲವು ವಿಚಿತ್ರ ಜೀವಿಗಳು ಕಂಡು ಬರುವುದು ಈಗಾಗಲೇ ಕೇಳಿದ್ದೇವೆ ಮತ್ತು ನೋಡಿದ್ದೇವೆ. ಇದೀಗ ಜಾಗತಿಕ ಮಟ್ಟದಲ್ಲಿ ಅಳಿವಿನಂಚಿನಲ್ಲಿರುವ ಸಮುದ್ರ ಪ್ರಾಣಿಗಳಲ್ಲಿ ಬಲೀನ್‌ ಜಾತಿಯ ಭಾರಿ ಗಾತ್ರದ ತಿಮಿಂಗಲ, ಉತ್ತರಕನ್ನಡ ಜಿಲ್ಲೆಯ ಹೊನ್ನಾವರ (Honnavara) ತಾಲೂಕಿನ ಮುಗಳಿ ಕಡಲತೀರಕ್ಕೆ ಕೊಚ್ಚಿಕೊಂಡು ಬಂದಿದೆ.

ಸದ್ಯ ಮುಗಳಿ ಕಡಲ ತೀರದಲ್ಲಿ ಪತ್ತೆಯಾಗಿರುವುದು ಬಲೀನ್‌ ತಿಮಿಂಗಿಲ ಆಗಿದ್ದು, ಸುಮಾರು 46 ಫೀಟ್ ಉದ್ದ, 9 ಫೀಟ್ ಎತ್ತರವಿದೆ. ಸಾಮಾನ್ಯವಾಗಿ 10ಮೀಟರ್‌ನಿಂದ 102ಮೀಟರ್‌ವರೆಗೆ ಈ ಬಲೀನ್ ಜಾತಿಯ ತಿಮಿಂಗಿಲ ಬೆಳೆಯುತ್ತದೆ ಎನ್ನಲಾಗುತ್ತದೆ.

ಮಾಹಿತಿ ಪ್ರಕಾರ ತಿಮಿಂಗಲವು ಮೃತಪಟ್ಟು ಹಲವು ದಿನ ಕಳೆದ ಬಳಿಕ ದಡಕ್ಕೆ ಬಂದು ಬಿದ್ದಿರುವ ಶಂಕೆಯಿದೆ. ತಿಮಿಂಗಿಲದ‌ ಸಾವಿಗೆ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸ್ಪಷ್ಟವಾಗಿ ತಿಳಿಯಲಿದೆ. ಮೀನುಗಾರಿಕೆಗೆ ತೆರಳಿದ್ದ ಸ್ಥಳೀಯ ಮೀನುಗಾರರು ಬೃಹತ್‌ ಗಾತ್ರದ ತಿಮಿಂಗಲ ಮೃತದೇಹವನ್ನು ನೋಡಿದ ಕೂಡಲೇ ಈ ಬಗ್ಗೆ ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಯಿಂದ ಮಾಜಿ ಸಿ ಎಂ ಔಟ್?! ಬಿಜೆಪಿಗೆ ಮತ್ತೊಂದು ದೊಡ್ಡ ಆಘಾತ

Leave A Reply