Atal pension Yojana: ನೀವು ಹೊಸದಾಗಿ ಮದುವೆಯಾದವರಾ? ನಿಮಗೆ ಸರಕಾರ ಕೊಡುತ್ತೆ ಹಣ, ಈ ಯೋಜನೆ ಬಗ್ಗೆ ಗೊತ್ತಿದೆಯೇ?

Government scheme for marriage atal pension Yojana benefits for married couple

Atal pension Yojana: ಕೇಂದ್ರಸರಕಾರ ದೇಶದ ಎಲ್ಲಾ ವರ್ಗದ ಜನರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನು ಕೆಲವು ಯೋಜನೆಗಳನ್ನು ಪ್ರತಿ ವರ್ಷ ಪರಿಷ್ಕರಣೆ ಕೂಡಾ ಮಾಡಲಾಗುತ್ತದೆ. ಬದಲಾವಣೆ ಕೂಡಾ ಮಾಡಲಾಗುತ್ತದೆ.

ಸರಕಾರದ ಯೋಜನೆ ಮಕ್ಕಳಿಗೆ, ಯುವಕರಿಗೆ, ಹಿರಿಯರಿಗೆ ಹೀಗೆ ಅಗತ್ಯ ಇರುವವರಿಗೆ ಹಲವು ಯೋಜನೆಗಳ ಬಗ್ಗೆ ನಿಮಗೆ ತಿಳಿದಿರಬಹುದು. ಇದೀಗ ಸರಕಾರದ ಹೊಸ ಯೋಜನೆಯೊಂದು ನವದಂಪತಿಗಳಿಗೆ ಉಪಯೋಗವಾಗಬಹುದು. ಬನ್ನಿ ಈ ಕುರಿತು ತಿಳಿಯೋಣ.

ಅಟಲ್‌ ಪಿಂಚಣಿ ಯೋಜನೆ (APY): ಈ ಯೋಜನೆಯ ಅಡಿಯಲ್ಲಿ ವಯಸ್ಸಾದ ದಂಪತಿಗಳು ಸಾವಿರದಿಂದ ಐದು ಸಾವಿರದವರಗೆ ಪ್ರತಿತಿಂಗಳು ಪಡೆದುಕೊಳ್ಳಲು ಸಾಧ್ಯವಿದೆ. ಈ ಯೋಜನೆ 2018ರಲ್ಲಿ ಆರಂಭವಾಗಿದ್ದು, 2023ರ ತನಕ ಹೆಚ್ಚಿನ ಜನರಿಗೆ ಪ್ರಯೋಜನವಾಗಿದೆ. ಐದು ಕೋಟಿಗೂ ಹೆಚ್ಚಿನ ಜನ ಈ ಯೋಜನೆಯ ಅಡಿಯಲ್ಲಿ ಚಂದಾದಾರಿಕೆ ಪಡೆದುಕೊಂಡಿದ್ದಾರೆ. ನೀವು ನಿಮ್ಮ ಹತ್ತಿರದ ಬ್ಯಾಂಕ್‌ ಅಥವಾ ಅಂಚೆ ಕಚೇರಿಯಲ್ಲಿ ಈ ಯೋಜನೆಯನ್ನು ತೆರೆಯಬಹುಉದ. ಮದುವೆಯಾದ ದಂಪತಿಗಳು ಚಂದಾದಾರರಾಗುವುದಿದ್ದರೆ ನಾಮಿನಿಯನ್ನು ಡೀಫಾಲ್ಟ್‌ ಆಗಿ ಹೆಂಡತಿಯ ಹೆಸರಿಗೆ ಮಾಡಬೇಕು. ಅವಿವಾಹಿತರು ತಮನಗೆ ಬೇಕಾದವರ ಹೆಸರು ನಾಮಿನಿ ಮಾಡಬಹುದು. ಇದಕ್ಕೆ ಭಾರತೀಯ ನಾಗರಿಕರು ಮಾತ್ರ ತಮ್ಮ ಖಾತೆ ತೆರೆಯಲು ಸಾಧ್ಯ.

ವಯೋಮಿತಿ: ಈ ಯೋಜನೆಯ ಚಂದದಾರರಾಗಲು 18ರಿಂದ 40ವರ್ಷ ವಯಸ್ಸಿನವರಾಗಿರಬೇಕು. ಬ್ಯಾಂಕ್‌ ಅಥವಾ ಅಂಚೆಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಅಷ್ಟು ಮಾತ್ರವಲ್ಲದೇ ಆಧಾರ್‌ ಸಂಖ್ಯೆ, ಮೊಬೈಲ್‌ ಸಂಖ್ಯೆಯನ್ನು ಕೂಡಾ ಹೊಂದಿರಲೇಬೇಕು.

ಈ ಯೋಜನೆಯಲ್ಲಿ ದಿನಕ್ಕೆ ಏಳು ರೂ. ಇಡುತ್ತಾ ಹೋದರೆ 60 ವರ್ಷದ ಬಳಿಕ 5000 ರೂ.ಗಳನ್ನು ಪಿಂಚಣಿಯಾಗಿ ಪಡೆಯಬಹುದು. ಈ ಯೋಜನೆಯಲ್ಲಿ ಪ್ರತಿಯೊಬ್ಬರೂ ತಮ್ಮ ಹೆಸರು ದಾಖಲು ಮಾಡಬಹುದು.

ಉದಾ. ಈಗ ನಿಮ್ಮ ವಯಸ್ಸು 18 ಎಂದಿಟ್ಟುಕೊಂಡರೆ, ನೀವು ಎಪಿವೈ ಖಾತೆ (Atal pension Yojana) ತೆರೆಯೋದಾದರೆ, 60 ವರ್ಷದ ಬಳಿಕ ಪ್ರತಿ ತಿಂಗಳು 1000 ಪಿಂಚಣಿಗಾಗಿ ಪ್ರತಿ ತಿಂಗಳು ನೀವು 42 ರೂಪಾಯಿಗಳನ್ನು ಠೇವಣಿ ಇಡಬೇಕಾಗುತ್ತದೆ.

ಇದನ್ನೂ ಓದಿ: Chikkamagaluru: ಕೊನೆಯ ಸುತ್ತಿನ ಎತ್ತಿನಗಾಡಿ ಸ್ಪರ್ಧೆಯಲ್ಲಿ, ನೊಗ ಬಡಿದು ಯುವಕ ಸ್ಥಳದಲ್ಲೇ ಸಾವು!!!

Leave A Reply

Your email address will not be published.