Bengaluru Bandh: ಬೆಂಗಳೂರು ಬಂದ್ ಗೆ ಹೊಸ ಟ್ವಿಸ್ಟ್! ಸಾರಿಗೆ ಸಚಿವರ ಮಾಸ್ಟರ್ ಪ್ಲಾನ್ ರೆಡಿ, ಯಾವ ಪ್ಲಾನ್ ಗೊತ್ತಾ?

Bengaluru news political news minister Ramalinga Reddy plan more bus operating in Bengaluru bandh day

Bengaluru Bandh: ಸರ್ಕಾರದ (Government) ವಿರುದ್ಧ ಕಿಡಿ ಕಾರಿರುವ ಖಾಸಗಿ ಸಾರಿಗೆ ಒಕ್ಕೂಟ (Private Transport Association) ವಿವಿಧ ಬೇಡಿಕೆಗಳ ಈಡೇರಿಕೆಗೆ ಸೋಮವಾರ ಬೆಂಗಳೂರು ಬಂದ್​ಗೆ (Bengaluru Bandh) ಕರೆ ನೀಡಿದ್ದು, ಈಗಾಗಲೇ ಬಂದ್​ಗೆ ಸಂಬಂಧಿಸಿದಂತೆ ಕರಪತ್ರಗಳ ಹಂಚಿಕೆ ಆರಂಭವಾಗಿದೆ. ಬಂದ್ ಕರೆಯಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿವರೆಗೂ ನಗರದಲ್ಲಿ ಖಾಸಗಿ ವಾಹನಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಗಲಿದೆ.

ಈ ಕುರಿತಾಗಿ ಆಟೋ, ಟ್ಯಾಕ್ಸಿ ಸಿಗದೇ ಜನ ಸಾಮಾನ್ಯರು ಪರದಾಟ ಅನುಭವಿಸಬಾರದು ಎಂದು ಸಾರಿಗೆ ಇಲಾಖೆ (Department Of Transport) ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.
ಹೌದು, ಬಂದ್ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಬಸ್​ಗಳನ್ನು ರಸ್ತೆಗಿಳಿಸಲು ಸಾರಿಗೆ ಇಲಾಖೆ ತಯಾರಿ ಮಾಡಿಕೊಂಡಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಬಸ್ ಕಾರ್ಯ ನಿರ್ವಹಣೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (RamalingaReddy, Transport Minister) ಸೂಚನೆ ನೀಡಿದ್ದಾರೆ.

ಸದ್ಯ ಬಿಎಂಟಿಸಿ ಎಂಡಿ, ಕೆಎಸ್‌ಆರ್​​​ಟಿಸಿ ಎಂಡಿ, ಸಾರಿಗೆ ಇಲಾಖೆಯ ಕಮಿಷನರ್ ಹಾಗೂ ‌ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಾರಿಗೆ ಸಚಿವರು ಸಭೆ ನಡೆಸಿದ್ದು ಸಭೆಯಲ್ಲಿ, ಸೋಮವಾರ ಜನಸಾಮಾನ್ಯರಿಗೆ ಸಮಸ್ಯೆ ಆಗದ ರೀತಿ ಪರ್ಯಾಯ ಪ್ಲಾನ್ ಮಾಡಲಾಗಿದೆ. ಬಂದ್ ಸಂಬಂಧ ಅಲರ್ಟ್ ಆಗಿರುವಂತೆ ಈಗಾಗಲೇ ಅಧಿಕಾರಿಗಳಿಗೆ ಸಾರಿಗೆ ಸಚಿವರು ಖಡಕ್ ಸೂಚನೆ ನೀಡಿದ್ದಾರೆ.

ಸಾರಿಗೆ ಸಚಿವರ ಸೂಚನೆಗಳು ಇಂತಿವೆ :
> ಸೆಪ್ಟೆಂಬರ್​ 11 ರಂದು ರಾಜಧಾನಿಯಲ್ಲಿ ಶಾಲಾ-ಕಾಲೇಜು ಮಕ್ಕಳಿಗೆ ಪರೀಕ್ಷೆಗಳಿದ್ರೆ ಆ ಮಾರ್ಗಗಳಲ್ಲಿ ಕೆಎಸ್​ಆರ್​ಟಿಸಿ ಬಸ್​​​ಗಳನ್ನು ನಿಯೋಜನೆ ಮಾಡೋದು.

> ಆಟೋ, ಕ್ಯಾಬ್​​ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಮಾಡುತ್ತಿರುವ ಮಾರ್ಗದಲ್ಲಿ ಹೆಚ್ಚು ಬಿಎಂಟಿಸಿ ಬಸ್​​ಗಳನ್ನು ರಸ್ತೆಗೆ ಇಳಿಸುವುದು.

> ಆಸ್ಪತ್ರೆ, ಗಾರ್ಮೆಂಟ್ಸ್ ಬಳಿ ರೋಗಿಗಳಿಗೆ, ಮಹಿಳೆಯರಿಗೆ ಸಮಸ್ಯೆ ಆಗದ ರೀತಿಯಲ್ಲಿ ಹೆಚ್ಚಿನ ಬಸ್ ವ್ಯವಸ್ಥೆ ‌ಮಾಡಬೇಕು.

> ಯಾವುದೇ ಸಂಘರ್ಷ ಉಂಟಾಗದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಅಲರ್ಟ್ ಇರುವಂತೆ, ಸೆಪ್ಟೆಂಬರ್ 10 ರ ಭಾನುವಾರ ರಾತ್ರಿಯಿಂದಲೇ ಫೀಲ್ಡಿಗಿಳಿಯುವಂತೆ ಸೂಚನೆ ನೀಡಿದ್ದಾರೆ.

> ಇನ್ನು ಕೆಲವೊಂದಷ್ಟು ಸಂಘಟನೆಗಳು ಬಂದ್ ನಲ್ಲಿ ಭಾಗಿಯಾಗ್ತಿಲ್ಲ ಅಂತಹ ಸಂಘಟನೆಗಳ ಆಟೋ, ಕ್ಯಾಬ್, ಬಸ್ ಚಾಲಕರಿಗೆ ತಮ್ಮ ಕರ್ತವ್ಯ ನಿರ್ವಹಿಸಲು ಭದ್ರತೆ ನೀಡಬೇಕು.

ಇನ್ನು ಬಲವಂತವಾಗಿ ಯಾರು ಕೂಡ ಬಂದ್ ಮಾಡಿಸಲು ಮುಂದಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ‘ಐಷಾರಾಮಿ ಹೋಟೆಲ್’ ಗೆ 16 ಸಾವಿರ ಕೋಟಿ ಖರ್ಚು ಮಾಡಿದ್ರಂತೆ! ವಿಶೇಷ ಅಂದ್ರೆ ಕಟ್ಟಿ 25 ವರ್ಷ ಆದ್ರೂ ಒಬ್ಬ ಅತಿಥಿ ಬಂದಿಲ್ಲವಂತೆ !! ಯಾಕೆ ಅಂತೀರಾ?

Leave A Reply

Your email address will not be published.