Viral News: ಐಫೋನ್ ಕೊಡಿಸಲ್ಲ ಎಂದ ಪೋಷಕರ ಮೇಲೆ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋದ ಬಾಲಕರು! ಕೊನೆಗೆ ಪತ್ತೆಯಾದದ್ದೆಲ್ಲಿ ಗೊತ್ತೇ?
Bengaluru news Boys left home angry at their parents for not giving an iPhone in Bengaluru
Bengaluru: ಇತ್ತೀಚಿನ ಮಕ್ಕಳಲ್ಲಿ ಗೇಮಿಂಗ್ ಕ್ರೇಜ್ ಹೆಚ್ಚು. ಒಳ್ಳೊಳ್ಳೆ ಸ್ಮಾರ್ಟ್‌ಫೋನ್‌ನಲ್ಲಿ ಗೇಮಿಂಗ್ ಫೀಚರ್ ಹೆಚ್ಚು ಆಕರ್ಷಕವಾಗಿದೆ ಎಂದು ಮಕ್ಕಳು ಅದರಲ್ಲೇ ಕಾಲ ಕಳೆಯುವ ಎಷ್ಟೋ ವರದಿಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಈಗ ಇದೇ ವಿಚಾರವಾಗಿ ಬೆಂಗಳೂರಿನ (Bengaluru) ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕರು ತಮ್ಮ ಪೋಷಕರು ಐಫೋನ್ ಕೊಟ್ಟಿಲ್ಲವೆಂದು ಮನೆ ಬಿಟ್ಟು ಹೋಗಿರುವ ಪ್ರಸಂಗವೊಂದು ನಡೆದಿದೆ.
ಭೂಪಸಂದ್ರದಿಂದ ನಾಪತ್ತೆಯಾಗಿದ್ದ ಸುಮನ್ ಕರಿಯರ್ ಸುಲೇಮಾನ್ (15), ಅಬ್ದುಲ್ ಸಮದ್ (15) ಎಂಬುವವರನ್ನು ಪೊಲೀಸರು ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ.
ಅಬ್ದುಲ್ ಸಮದ್ ಮದರಸಗೆ ಓದಲು ತೆರಳುತ್ತಿದ್ದ. ಹೀಗೆ ಮದರಸಾಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈತನಿಗೆ ಸುಲೇಮಾನ್ ಎಂಬ ಬಾಲಕನ ಪರಿಚಯವಾಗಿತ್ತು. ಇವರಿಬ್ಬರ ಮಧ್ಯೆ ಸ್ನೇಹ ಇತ್ತು. ಸಮದ್‌ಗೆ ಆತನ ಪೋಷಕರು ಒಂದು ಸ್ಮಾರ್ಟ್‌ಫೋನ್ ನೀಡಿದ್ದರು.
ಸಮದ್ ಸುಲೇಮಾನ್ ಇಬ್ಬರೂ ಫೋನ್ ಬಳಕೆ ಮಾಡುತ್ತಿದ್ದರು. ಇತ್ತೀಚೆಗೆ ಅವರಿಗೆ ಐಫೋನ್ ತಗೊಳ್ಳೋ ಮನಸ್ಸಾಗಿದೆ. ಹಾಗಾಗಿ ಮನೆಯಲ್ಲಿ ಐಫೋನ್ ಕೊಡಿಸುವಂತೆ ಕೇಳಿದ್ದರು. ಆದರೆ ಪೋಷಕರು ಐಫೋನ್ ಕೊಡಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅದಕ್ಕೆ ಬಾಲಕರು ನಾವು ಬಾಂಬೆಗೆ ಹೋಗಿ ದುಡಿದು ಐಫೋನ್ ಕೊಳ್ಳುತ್ತೇವೆಂದು ಹೇಳಿದ್ದಾರೆ. ಆದರೆ ಪೋಷಕರು ಇದನ್ನೆಲ್ಲ ಸೀರಿಯಸ್ ಆಗಿ ತಗೊಂಡಿಲ್ಲ. ಆದರೆ ಬಾಲಕರು ಪೋಷಕರ ಕಣ್ತಪ್ಪಿಸಿಬಾಂಬೆ ಗೋವಾಕ್ಕೆ ತೆರಳಿದ್ದರು. ಪೋಷಕರು ಹೆದರಿಕೊಂಡು ಎಲ್ಲಾ ಕಡೆ ಹುಡುಕಿದರೂ ಬಾಲಕರ ಪತ್ತೆಯಾಗಿರಲಿಲ್ಲ. ಕೊನೆಗೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇದೀಗ ಪೊಲೀಸರು ಬಾಲಕರನ್ನು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: Mangalore News: ಪೊಲೀಸ್ ಠಾಣೆಯಲ್ಲಿ ಯುವತಿಯೋರ್ವಳಿಂದ ಪೊಲೀಸರ ಮೇಲೆ ಆಕ್ರಮಣ; ಹಿಡಿದಿಡಿಯಲು ಹರಸಾಹಸ ಪಟ್ಟ ಪೊಲೀಸರು!