BJP:ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರ- ಮಾಸ್ ಲೀಡರ್ ಯಡಿಯೂರಪ್ಪ ಕೊಟ್ರು ಹೊಸ ಬಿಗ್ ಅಪ್ಡೇಟ್!

Political news BJP jds will form an alliance former CM BS Yeddyurappa statement

BS Yeddyurappa : ಬಿಜೆಪಿ ನಾಯಕರು ಲೋಕ ಸಭಾ ಚುನಾವಣೆಗೆ ಈಗಲೇ ತಯಾರಿ ನಡೆಸುತ್ತಿದ್ದು, ಪಕ್ಷ ಸಂಘಟನೆ ಮಾಡುವತ್ತ ಗಮನ ಹರಿಸಿದ್ದಾರೆ. ಈ ನಡುವೆ, ರಾಜಾ ಹುಲಿ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರದ ಕುರಿತಂತೆ ಹೊಸ ಬಿಗ್ ಅಪ್ಡೇಟ್ ನೀಡಿದ್ದಾರೆ.

ಬಿಜೆಪಿ, ಜೆಡಿಎಸ್ ಮೈತ್ರಿ ಕುರಿತಂತೆ ಇತ್ತೀಚಿಗೆ ನಾನಾ ಬಗೆಯ ಊಹಾಪೋಹ, ಟ್ವಿಟ್ ಗಳು ಬಂದಿದ್ದವು. ಇದೀಗ ಬಿಜೆಪಿ ನಾಯಕರೇ ಮೈತ್ರಿ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಗೆ ಟಕ್ಕರ್ ನೀಡಲು ಬಿಜೆಪಿ-ಜೆಡಿಎಸ್ ನಿರ್ಧರಿಸಿದೆ.ಬಿಜೆಪಿ-ಜೆಡಿಎಸ್ ( BJP-JDS) ಮೈತ್ರಿ ಮಾಡಿಕೊಳ್ಳಲಿರುವ ಕುರಿತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ(BS Yeddyurappa) ಮಾಹಿತಿ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ಮಾತನಾಡಿರುವ ಮಾಜಿ ಸಿಎಂ ಯಡಿಯೂರಪ್ಪ ‘ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ ಗೆ ಶಾಕ್ ಕೊಡಲು ನಿರ್ಧರಿಸಿರುವ ಜೆಡಿಎಸ್ ಲೋಕಸಭಾ ಚುನಾವಣೆ ಸಂಬಂಧ ದೆಹಲಿಯಲ್ಲಿ ಬಿಜೆಪಿ ವರಿಷ್ಠ ನಾಯಕರನ್ನು ರಾಜಾ ಹುಲಿ ಯಡಿಯೂರಪ್ಪ ಭೇಟಿಯಾಗಿದ್ದಾರೆ. ಇತ್ತೀಚೆಗೆ ಪ್ರಜ್ವಲ್ ರೇವಣ್ಣ ಅವರ ಕೋರ್ಟ್ ಕೇಸ್ ಗೆ ಸಂಬಂಧಿಸಿದಂತೆ ವಕೀಲರ ಭೇಟಿಗೆ ದೇವೇಗೌಡರು ತೆರಳಿದ್ದರು. ಈ ಸಂದರ್ಭ ಅಮಿತ್ ಶಾ ಅವರೊಂದಿಗೆ ಗುಪ್ತವಾಗಿ ಚರ್ಚೆ ಕೂಡ ಮಾಡಿದ್ದರು.ಇದರ ಬೆನ್ನಲ್ಲೇ ಇದೀಗ, ಬಿಎಸೈ ಬಹಿರಂಗವಾಗಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಲಿರುವ ಕುರಿತು ಮಾಹಿತಿ ನೀಡಿದ್ದಾರೆ. ‘ಜೆಡಿಎಸ್ ಗೆ 4 – 5 ಸ್ಥಾನ ಕೊಡಲು ಅಮಿತ್ ಶಾ ಗ್ರೀನ್ ಸಿಗ್ನಲ್ ನೀಡಿದ್ದು, ಈ ಮೂಲಕ ನಮಗೆ ಶಕ್ತಿ ಡಬಲ್ ಆಗಿದೆ.ಈ ಮೂಲಕ ನಾವು 20-25 ಕ್ಷೇತ್ರದಲ್ಲಿ ಗೆಲ್ಲೋದು ಖಚಿತ ಎಂಬ ವಿಶ್ವಾಸವನ್ನು ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ. ಮೈತ್ರಿ ಬಗ್ಗೆ ನಮ್ಮ ವರಿಷ್ಟರ ಜೊತೆ ಕೂಡ ಮಾತನಾಡಿದ್ದು, ಅವರು ಕೂಡ ಸಮ್ಮತಿ ಸೂಚಿಸಿದ್ದಾರೆ ‘ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಇದನ್ನೂ ಓದಿ: ಜೈಲರ್ ಸಿನಿಮಾದಲ್ಲಿ ವಿಲನ್ ಆಗಿ ಮಿಂಚಿದ್ದ ಖ್ಯಾತ ತಮಿಳು ನಟ ಮಾರಿಮುತ್ತು ನಿಧನ!

Leave A Reply

Your email address will not be published.