Hit and Run: ಕಾರು ಅಪಘಾತ ಪ್ರಕರಣ: ಕೊನೆಗೂ ಕಾಮಿಡಿ ಸ್ಟಾರ್ ಚಂದ್ರಪ್ರಭರಿಂದ ತಪ್ಪೊಪ್ಪಿಗೆ- ಕೊಟ್ಟೇ ಬಿಟ್ರು ಟ್ವಿಸ್ಟ್ ಮೇಲೆ ಟ್ವಿಸ್ಟ್!!!

Entertainment gicchi giligili show contest chandraprabha hit and run case at Chikkamagalur

Chikkamagaluru : ಕನ್ನಡದ ರಿಯಾಲಿಟಿ ಶೋ ಗಿಚ್ಚಿ ಗಿಲಿ ಗಿಲಿʼ (Gichchi Gili Gili Winner) ವಿನ್ನರ್ ಆದ ಚಂದ್ರಪ್ರಭಾ (Chandraprabha) ಅವರು ಹಿಟ್ & ರನ್ ಕೇಸ್ ವಿಚಾರವಾಗಿ ಭಾರೀ ಸುದ್ದಿಯಾಗುತ್ತಿದ್ದಾರೆ. ಚಂದ್ರಪ್ರಭ ಅವರು ಚಿಕ್ಕಮಗಳೂರು ಬಸ್‌ ನಿಲ್ದಾಣದ ಬಳಿ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭ ಬೈಕ್‌ ಸವಾರನಿಗೆ ಗುದ್ದಿದ್ದಾರೆ. ಈ ರೀತಿ ಬೈಕ್ ಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಮಾನವೀಯತೆಗೂ ಕೂಡ ಕಾರು ನಿಲ್ಲಿಸದೇ ನಟ ಪರಾರಿ ಆಗಿದ್ದು, ಪೊಲೀಸ್‌ ಠಾಣೆಯಲ್ಲಿ (Police Station)ದೂರು ದಾಖಲಾಗಿದೆ.

ಚಿಕ್ಕಮಗಳೂರಿನಲ್ಲಿ ನಡೆದ ಅಪಘಾತ (Road Accident) ಪ್ರಕರಣದಲ್ಲಿ ಚಂದ್ರಪ್ರಭಾರವರು ಸಂಕಷ್ಟ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಅವರು ಚಲಿಸುತ್ತಿದ್ದ ಕಾರು ಮಾಲತೇಶ್ ಎಂಬ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ತಮ್ಮದೇನು ತಪ್ಪಿಲ್ಲವೆಂದು ಚಂದ್ರಪ್ರಭ (Chandraprabha) ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೇ, ಆ ಬೈಕ್ ಸವಾರ ಮದ್ಯಪಾನ ಮಾಡಿದ್ದರು ಎಂದು ಕೂಡ ಚಂದ್ರಪ್ರಭ ಆರೋಪ ಮಾಡಿದ್ದರು. ಆದರೆ ಈಗ ತಮ್ಮ ಹೇಳಿಕೆ ಬದಲಾಯಿಸಿಕೊಂಡಿರುವ ಚಂದ್ರಪ್ರಭ ತನ್ನದೇ ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ಚಿಕ್ಕಮಗಳೂರು ಸಂಚಾರ ಪೊಲೀಸ್ ಠಾಣೆ ಬಳಿ ಮಾಧ್ಯಮವೊಂದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ನನ್ನಿಂದ ತಪ್ಪಾಯ್ತು, ಹೀಗಾಗಿ ಎಲ್ಲರಿಗೂ ಕ್ಷಮೆ ಕೇಳುತ್ತೇನೆ. ಆತ ಕುಡಿದಿದ್ದ ಎಂದು ಈ ಮೊದಲು ಹೇಳಿದ್ದೆ. ತಪ್ಪಾಯ್ತು. ನನ್ನನ್ನು ಕ್ಷಮಿಸಿ. ಆತ ಕುಡಿದಿರಲಿಲ್ಲ ಜೊತೆಗೆ ನಾನು ಮತ್ತು ನನ್ನ ಸ್ನೇಹಿತ ಆಸ್ಪತ್ರೆಯವರೆಗೆ ಹೋಗಿದ್ದೆವು. ಆದರೆ ಆಸ್ಪತ್ರೆಗೆ ಸೇರಿಸಲಿಲ್ಲ. ನನಗೆ ಭಯವಾಯಿತು ಮತ್ತು ಅಪಘಾತವಾದ ಯುವಕನ ಯೋಗಕ್ಷೇಮದ ಬಗ್ಗೆ ನಾನು ವಿಚಾರಿಸಬೇಕಿತ್ತು. ಆದರೆ, ವಿಚಾರಿಸಲಿಲ್ಲ. ನಾನು ಬಡವ, ತಂದೆ ಸತ್ತು 11 ವರ್ಷವಾಯ್ತು. ಆಸ್ಪತ್ರೆಗೆ ಹೋಗಿ ಯೋಗಕ್ಷೇಮ ವಿಚಾರಿಸುತ್ತೇನೆ. ಮಾಲತೇಶ್ ಅವರ ಆಸ್ಪತ್ರೆ ಖರ್ಚಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ’ ಎಂದು ಹಾಸ್ಯನಟ ಚಂದ್ರಪ್ರಭ ಹೇಳಿಕೆ ನೀಡಿದ್ದಾರೆ.

ಚಿಕ್ಕಮಗಳೂರಿನ ಸಂಚಾರಿ ಠಾಣೆ ಮುಂಭಾಗ ಚಂದ್ರಪ್ರಭ ಅವರು ಕಂಬನಿ ಮಿಡಿದಿದ್ದಾರೆ. ಸೋಮವಾರ ಚಂದ್ರ ಪ್ರಭಾ ರವರು ಅಪಘಾತ ಮಾಡಿ ಎಸ್ಕೇಪ್ ಆಗಿದ್ದರು. ಪೊಲೀಸರ ಸೂಚನೆ ಮೇರೆಗೆ ಇಂದು (ಸೆಪ್ಟೆಂಬರ್ 8) ಚಿಕ್ಕಮಗಳೂರು ಠಾಣೆಗೆ ಹಾಜರಾಗಿದ್ದಾರೆ. ಈ ವೇಳೆ ನಟ ತಮ್ಮ ತಪ್ಪನ್ನು ಒಪ್ಪಿಕೊಂಡು ಕಣ್ಣೀರು ಹಾಕಿದ್ದು, ಅಪಘಾತಕ್ಕೀಡಾದ ಯುವಕನ ಯೋಗಕ್ಷೇಮ ವಿಚಾರಿಸುವುದಾಗಿ ಇದೆ ವೇಳೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಇನ್ನು ಸರ್ಕಾರಿ ದಾಖಲೆಗಳಲೆಲ್ಲಾ ಅಧಿಕೃತವಾಗಿ ‘ಭಾರತ’ ಹೆಸರು ?! ಸರ್ಕಾರ ಕೊಡ್ತು ಬಿಗ್ ಅಪ್ಡೇಟ್

Leave A Reply

Your email address will not be published.