SBI PO Recruitment 2023: ಪದವಿ ಪಾಸಾದವರಿಗೆ ಗುಡ್‌ನ್ಯೂಸ್‌! ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2000 ಹುದ್ದೆಗಳ ನೇಮಕಾತಿ! ಈ ಕೂಡಲೇ ಅರ್ಜಿ ಸಲ್ಲಿಸಿ!!!

SBI PO Recruitment 2023: ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ, ಉದ್ಯೋಗಾಂಕ್ಷಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೇಮಕಾತಿಗಾಗಿ(SBI PO Recruitment 2023)ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದೆ. ಪ್ರೊಬೇಷನರಿ ಆಫೀಸರ್ (PO)ಹುದ್ದೆಗೆ 2000 ಖಾಲಿ ಹುದ್ದೆಗಳು ಖಾಲಿಯಿದ್ದು, ಆಸಕ್ತರು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಸೆಪ್ಟೆಂಬರ್ 07 ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಬ್ಯಾಂಕಿನ ಪೋರ್ಟಲ್ sbi.co.in/web/careers/ ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮೊದಲಿಗೆ, sbi.co.in/web/careers ಗೆ ಭೇಟಿ ನೀಡಬೇಕು. ಆನಂತರ, PO 2023 ನೋಂದಣಿ ಲಿಂಕ್ ಅನ್ನು ಕ್ಲಿಕ್ ಮಾಡಿಕೊಂಡು ನೋಂದಾಯಿಸಿ ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯೊಂದಿಗೆ ಮುಂದುವರಿಯಬೇಕು. ನಂತರ,ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಸಲ್ಲಿಸಬೇಕು.

ಅರ್ಜಿ ಶುಲ್ಕ:
ಸಾಮಾನ್ಯ, EWS ಮತ್ತು OBC ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 750 ರೂ.ಆಗಿದ್ದು, SC, ST ಮತ್ತು PWBD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಅರ್ಹತಾ ಮಾನದಂಡಗಳು:
# ಏಪ್ರಿಲ್ 1, 2023 ರಂತೆ ಅಭ್ಯರ್ಥಿಯ ವಯಸ್ಸು 21 ವರ್ಷಗಳಿಗಿಂತ ಕಡಿಮೆಯಿರಬಾರದು.
# 30 ವರ್ಷಗಳಿಗಿಂತ ಹೆಚ್ಚಿರಬಾರದು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರಲಿದೆ.
# SBI PO ಹುದ್ದೆಗೆ ಅರ್ಜಿ ಸಲ್ಲಿಸಲು, ಯಾವುದೇ ವಿಭಾಗದಲ್ಲಿ ಪದವಿ ಹೊಂದಿರಬೇಕು.
# ಪದವಿಯ ಅಂತಿಮ ವರ್ಷ ಇಲ್ಲವೇ ಕೊನೆಯ ಸೆಮಿಸ್ಟರ್‌ನಲ್ಲಿರುವವರು ಕೂಡ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಸಂದರ್ಶನಕ್ಕೆ ಆಯ್ಕೆಯಾದಲ್ಲಿ ಅವರು ಡಿಸೆಂಬರ್ 12, 2023 ರಂದು ಅಥವಾ ಮೊದಲು ಪದವಿಯನ್ನು ಪಡೆದಿರುವ ಪುರಾವೆಯನ್ನು ನೀಡಬೇಕು.
# ವೈದ್ಯಕೀಯ, ಇಂಜಿನಿಯರಿಂಗ್, ಚಾರ್ಟರ್ಡ್ ಅಕೌಂಟೆಂಟ್, ಕಾಸ್ಟ್ ಅಕೌಂಟೆಂಟ್ ಮುಂತಾದ ವಿದ್ಯಾರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಕೂಡ ಮೇಲೆ ತಿಳಿಸಿದ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

SBI PO ಪರೀಕ್ಷೆ 2023 ಮೂರು ಹಂತದಲ್ಲಿ ನಡೆಯಲಿದ್ದು, ಪೂರ್ವಭಾವಿ, ಮುಖ್ಯ ಮತ್ತು ಸಂದರ್ಶನ ನಡೆಯಲಿದೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರೊಬೇಷನರಿ ಆಫೀಸರ್ ಪ್ರಿಲಿಮಿನರಿ ಪರೀಕ್ಷೆಯು ನವೆಂಬರ್‌ನಲ್ಲಿ ನಡೆಯಲಿದೆ.

ಅಧಿಸೂಚನೆಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Leave A Reply

Your email address will not be published.