Home Education Hospete: TET ಪರೀಕ್ಷೆ ಬರೆಯಲು ಬುರ್ಖಾ ಧರಿಸಿ ಬಂದ ಪರೀಕ್ಷಾರ್ಥಿಗಳು – ನಂತರ ಆದದ್ದೇನು?

Hospete: TET ಪರೀಕ್ಷೆ ಬರೆಯಲು ಬುರ್ಖಾ ಧರಿಸಿ ಬಂದ ಪರೀಕ್ಷಾರ್ಥಿಗಳು – ನಂತರ ಆದದ್ದೇನು?

Hospete

Hindu neighbor gifts plot of land

Hindu neighbour gifts land to Muslim journalist

Hospete: ಹೊಸಪೇಟೆಯ(Hospete)ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಭಾನುವಾರ ಇಬ್ಬರು ಪರೀಕ್ಷಾರ್ಥಿಗಳು(Students)ಬುರ್ಖಾ(Burqa)ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸಿದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ವರದಿಯಾಗಿದೆ.

ಭಾನುವಾರ ರಾಜ್ಯಾದ್ಯಂತ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಪರೀಕ್ಷೆಯಿದ್ದ ಸಂದರ್ಭ ಹೊಸಪೇಟೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಟಿಇಟಿ ಪರೀಕ್ಷೆಗೆ ಇಬ್ಬರು ಪರೀಕ್ಷಾರ್ಥಿಗಳು ಬುರ್ಖಾ (Burqa) ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶಿಸಿದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ (Exam Center) ಕೆಲಕಾಲ ಗೊಂದಲ ಸೃಷ್ಟಿಯಾಗಿ, ಈ ವೇಳೆ ಅಧಿಕಾರಿಗಳು ಬುರ್ಕಾ ತೆಗೆದು ಬರಲು ಸೂಚನೆ ನೀಡಿದ್ದಾರೆ.

ಪರೀಕ್ಷಾರ್ಥಿಗಳ ಪೋಷಕರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮಗಳಲ್ಲಿ ಬುರ್ಖಾ ಧರಿಸುವುದರ ಕುರಿತು ಷರತ್ತುಗಳು ಇವೆಯೇ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದು,ಇದಕ್ಕೆ ಅಧಿಕಾರಿಗಳು ಹಾಲ್ ಟಿಕೆಟ್‌ನಲ್ಲಿ ನಿಯಮಗಳನ್ನು ನಮೂದಿಸಲಾಗಿದ್ದು, ಪರೀಕ್ಷಾರ್ಥಿಗಳು ನಿಯಮಗಳ ಪಾಲನೆ ಮಾಡಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನು ಅರಿತ ಪೋಷಕರು ಮತ್ತು ಪರೀಕ್ಷಾರ್ಥಿಗಳು ಕೂಡ ಬುರ್ಖಾ ತೆಗೆಯಲು ಸಮ್ಮತಿಸಿ ಆ ಬಳಿಕ ಪರೀಕ್ಷೆಗೆ ಹಾಜರಾಗುವ ಮೊದಲು ಕಾಯ್ದಿರಿಸಿದ ತರಗತಿಯಲ್ಲಿ ಬುರ್ಖಾಗಳನ್ನು ತೆಗೆದ ನಂತರ ಪರೀಕ್ಷೆ ಬರೆದಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Love Jihad: ಮತಾಂತರ ಆಗುತ್ತೇನೆಂದರೂ ನಿಲ್ಲದ ಪಾಪಿ ಪ್ರಿಯಕರನ ಕಿರುಕುಳ- ಲವ್‌ ಜಿಹಾದ್‌ಗೆ ಮತ್ತೊಂದು ಹಿಂದೂ ಯುವತಿ ಬಲಿ ?! ಅಷ್ಟಕ್ಕೂ ನಡೆದದ್ದೇನು?