Home latest Udayanidhi Stalin : ಮಲೇರಿಯಾ, ಡೆಂಘಿ ಗೆ ಸನಾತನ ಧರ್ಮವನ್ನು ಹೋಲಿಸಿದ ಉದಯನಿಧಿ ಸ್ಟಾಲಿನ್‌ !!!

Udayanidhi Stalin : ಮಲೇರಿಯಾ, ಡೆಂಘಿ ಗೆ ಸನಾತನ ಧರ್ಮವನ್ನು ಹೋಲಿಸಿದ ಉದಯನಿಧಿ ಸ್ಟಾಲಿನ್‌ !!!

Udayanidhi Stalin
Image source: Hindustan times

Hindu neighbor gifts plot of land

Hindu neighbour gifts land to Muslim journalist

Udayanidhi Stalin : ‘ಸನಾತನ ಧರ್ಮ (Sanatan dharm) ಎಂಬುದು ಮಲೇರಿಯಾ (maleria), ಡೆಂಘಿ ಇದ್ದಂತೆ ಅದನ್ನು ಕೇವಲ ವಿರೋಧ ಮಾಡಿದರೆ ಸಾಲದು, ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು’ ಎಂಬ ವಿವಾದಾತ್ಮಕ ಹೇಳಿಕೆಯನ್ನು ಡಿಎಂಕೆ ಸಚಿವ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ (M.K Stalin) ಅವರ ಪುತ್ರ ಉದಯನಿಧಿ ಸ್ಟಾಲಿನ್‌ (Udayanidhi Stalin) ಹೇಳಿದ್ದಾರೆ. ಸದ್ಯ ಈ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದಾರೆ.

ಸನಾತನ ಧರ್ಮ ನಿರ್ಮೂಲನೆ ಸಮಾವೇಶದಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್‌, ಸೊಳ್ಳೆಗಳು, ಡೆಂಘಿ ಜ್ವರ, ಮಲೇರಿಯಾ, ಕೊರೋನಾ ಇವುಗಳನ್ನು ಕೇವಲ ವಿರೋಧಿಸಿದರೆ ಸಾಲದು. ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಬಿಡಬೇಕು. ಸನಾತನ ಧರ್ಮವೂ ಸಹ ಇದೇ ರೀತಿ ಎಂದು ಹೇಳಿದರು.

ಸನಾತನಂ ಎಂಬ ಪದ ಸಂಸ್ಕೃತದಿಂದ ಬಂದಿದ್ದು, ಇದು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ಸನಾತನ ಎಂಬುದು ಶಾಶ್ವತತೆಯಾಗಿದೆ. ಅದನ್ನು ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ.
ಸನಾತನ ಧರ್ಮವನ್ನು ವಿರೋಧಿಸುವುದಲ್ಲ. ಅದನ್ನು ನಿರ್ಮೂಲನೆ ಮಾಡುವುದು ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು. ಹಾಗೆಯೇ ಸನಾತನ ಧರ್ಮ ನಿರ್ಮೂಲನೆ ಎಂಬ ಸಮ್ಮೇಳನ ಆಯೋಜನೆ ಮಾಡಿದವರಿಗೆ ಅಭಿನಂದನೆಗಳು ಎಂದರು. ಸದ್ಯ ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆಗೆ ಕಾರಣವಾಗಿದ್ದು, ತಮಿಳುನಾಡು ಸಚಿವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೂಗು ಕೇಳಿಬರುತ್ತಿದೆ.

ಇದನ್ನೂ ಓದಿ: Accident: ಟಾಟಾ ಏಸ್‌, ಕ್ಯಾಂಟರ್‌, ಖಾಸಗಿ ಬಸ್‌ ನಡುವೆ ಭೀಕರ ಅಪಘಾತ! ವರ್ಗಾವಣೆ ಖುಷಿಯಲ್ಲಿದ್ದ ಬಸ್‌ ಚಾಲಕ, ತಾಯಿ ದಾರುಣ ಸಾವು!!!