SDA, FDA ಹುದ್ದೆಗಳಿಗೆ KSOU ನಿಂದ ಅರ್ಜಿ ಆಹ್ವಾನ! ಒಟ್ಟು 32 ಹುದ್ದೆಗಳು, ಈ ಕೂಡಲೇ ಅರ್ಜಿ ಸಲ್ಲಿಸಿ!!!
Government job news Karnataka State open University Mysore recruitment 32 recruitment in KSOU recruitment 2023
KSOU Mysuru Recruitment 2023: ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣ ಅವಕಾಶ ಇಲ್ಲಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು (Karnataka State Open University Mysuru) ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 32 ಬೋಧಕೇತರ ಹುದ್ದೆಗಳು (Non-Teaching Posts) ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಸದ್ಯ ಅರ್ಜಿ ಸಲ್ಲಿಸಲು ಕೊನೆಯ ಸೆಪ್ಟೆಂಬರ್ 30, 2023 ಕೊನೆಯ ದಿನಾಂಕವಾಗಿದ್ದು, ಬೋಧಕೇತರ ಹುದ್ದೆಯಲ್ಲಿ ಆಸಕ್ತಿ ಇರುವವರು ಆಫ್ಲೈನ್/ ಪೋಸ್ಟ್ ಮೂಲಕ ಅಪ್ಲೈ ಮಾಡಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರಿನಲ್ಲಿ (Mysuru) ಹುದ್ದೆಯನ್ನು ನೀಡಲಾಗುತ್ತದೆ.
ಹುದ್ದೆ ವಿವರಗಳು(KSOU Mysuru Recruitment 2023) :
ಸಂಸ್ಥೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು
ಹುದ್ದೆ: ಬೋಧಕೇತರ ಹುದ್ದೆ
ಒಟ್ಟು ಹುದ್ದೆ: 32
ವಿದ್ಯಾರ್ಹತೆ: 10ನೇ ತರಗತಿ, ಪಿಯುಸಿ, ಪದವಿ
ವೇತನ: ಮಾಸಿಕ ₹ 30,350- 58,250
ಉದ್ಯೋಗದ ಸ್ಥಳ: ಕರ್ನಾಟಕ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16/08/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆಪ್ಟೆಂಬರ್ 30, 2023
ಹುದ್ದೆಯ ಮಾಹಿತಿ:
ಪ್ರಥಮ ದರ್ಜೆ ಸಹಾಯಕ (FDA)- 4
ಡೇಟಾ ಎಂಟ್ರಿ ಆಪರೇಟರ್ (DEO)- 5
ದ್ವಿತೀಯ ದರ್ಜೆ ಸಹಾಯಕ (SDA)- 8
ಟೈಪಿಸ್ಟ್ & ಅಸಿಸ್ಟೆಂಟ್- 1
ವೆಹಿಕಲ್ ಡ್ರೈವರ್- 1
ಎಲೆಕ್ಟ್ರಿಷಿಯನ್-1
ಪ್ಲಂಬರ್- 1
ಅಟೆಂಡೆಂಟ್- 2
ಗ್ಯಾಂಗ್ಮೆನ್-1
ಸರ್ವೆಂಟ್- 5
ಸ್ವೀಪರ್- 2
ಹೆಲ್ಪರ್-1
ವಿದ್ಯಾರ್ಹತೆ:
ಪ್ರಥಮ ದರ್ಜೆ ಸಹಾಯಕ (FDA)- ಪದವಿ
ಡೇಟಾ ಎಂಟ್ರಿ ಆಪರೇಟರ್ (DEO)- ಪಿಯುಸಿ, ಪದವಿ
ದ್ವಿತೀಯ ದರ್ಜೆ ಸಹಾಯಕ (SDA)- ಪಿಯುಸಿ, ಪದವಿ
ಟೈಪಿಸ್ಟ್ & ಅಸಿಸ್ಟೆಂಟ್- ಪಿಯುಸಿ, ಪದವಿ
ವೆಹಿಕಲ್ ಡ್ರೈವರ್- 10ನೇ ತರಗತಿ
ಎಲೆಕ್ಟ್ರಿಷಿಯನ್- 10ನೇ ತರಗತಿ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ, ITI
ಪ್ಲಂಬರ್- 7ನೇ ತರಗತಿ, SSLC
ಅಟೆಂಡೆಂಟ್- SSLC
ಗ್ಯಾಂಗ್ಮೆನ್-7ನೇ ತರಗತಿ, SSLC
ಸರ್ವೆಂಟ್- 7ನೇ ತರಗತಿ
ಸ್ವೀಪರ್- 7ನೇ ತರಗತಿ
ಹೆಲ್ಪರ್-7ನೇ ತರಗತಿ
ಅನುಭವ:
ವೆಹಿಕಲ್ ಡ್ರೈವರ್- ಕನಿಷ್ಠ 3 ವರ್ಷ ಅನುಭವ
ಪ್ಲಂಬರ್- ಕನಿಷ್ಠ 2 ವರ್ಷ ಅನುಭವ
ವಯೋಮಿತಿ:
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
SC/ST/ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
OBC ಅಭ್ಯರ್ಥಿಗಳು- 3 ವರ್ಷ
ಅರ್ಜಿ ಶುಲ್ಕ:
SC/ST/ ಪ್ರವರ್ಗ-1 ಅಭ್ಯರ್ಥಿಗಳು- 500 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳು- 1000 ರೂ.
ಪಾವತಿಸುವ ವಿಧಾನ- ಆನ್ಲೈನ್
ವೇತನ:
ಪ್ರಥಮ ದರ್ಜೆ ಸಹಾಯಕ (FDA)- ಮಾಸಿಕ ₹ 30,350- 58,250
ಡೇಟಾ ಎಂಟ್ರಿ ಆಪರೇಟರ್ (DEO)- ಮಾಸಿಕ ₹ 27,650-52,650
ದ್ವಿತೀಯ ದರ್ಜೆ ಸಹಾಯಕ (SDA)- ಮಾಸಿಕ ₹ 21,400-42,000
ಟೈಪಿಸ್ಟ್ & ಅಸಿಸ್ಟೆಂಟ್- ಮಾಸಿಕ ₹ 21,400-42,000
ವೆಹಿಕಲ್ ಡ್ರೈವರ್- ಮಾಸಿಕ ₹ 21,400-42,000
ಎಲೆಕ್ಟ್ರಿಷಿಯನ್- ಮಾಸಿಕ ₹ 21,400-42,000
ಪ್ಲಂಬರ್- ಮಾಸಿಕ ₹ 21,400-42,000
ಅಟೆಂಡೆಂಟ್- ಮಾಸಿಕ ₹ 19,950- 37,900
ಗ್ಯಾಂಗ್ಮೆನ್- ಮಾಸಿಕ ₹ 18,600-32,600
ಸರ್ವೆಂಟ್- ಮಾಸಿಕ ₹ 17,000- 28,950
ಸ್ವೀಪರ್- ಮಾಸಿಕ ₹ 17,000- 28,950
ಹೆಲ್ಪರ್-ಮಾಸಿಕ ₹ 17,000- 28,950
ಅರ್ಜಿ ಹಾಕುವ ವಿಧಾನ :
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಕುಲಪತಿ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ
ಮುಕ್ತಗಂಗೋತ್ರಿ
ಮೈಸೂರು – 570006
ಕರ್ನಾಟಕ.
ಇದನ್ನೂ ಓದಿ: ಲೈಂಗಿಕ ಕ್ರಿಯೆಯ ನಂತರ ಪುರುಷರು ನಿದ್ರೆಗೆ ಜಾರಲು ಕಾರಣವೇನು? ಮಹಿಳೆಯರೇ ಇಲ್ಲಿದೆ ನಿಮ್ಮ ಪ್ರಶ್ನೆಗೆ ಉತ್ತರ!!!