Big update for PPF, SSY Account Holders: PPF, SSY ಖಾತೆದಾರರಿಗೆ ಬಿಗ್ ಅಪ್ಡೇಟ್! ಸೆ.30 ರೊಳಗೆ ಈ ಕೆಲಸ ಮುಗಿಸಿ ಬಿಡಿ, ಇಲ್ಲದಿದ್ದರೆ ಸಮಸ್ಯೆ ತಪ್ಪಿದ್ದಲ್ಲ!!!
Big update for PPF, SSY Account Holders: PPF ಆದಾಯದ ಭದ್ರತೆಯನ್ನು ಒದಗಿಸುವ ಸರ್ಕಾರದ ಖಾತರಿ ಮತ್ತು ಸರಳ ಯೋಜನೆಯಾಗಿದೆ. ಸದ್ಯ PPF, SSY ಖಾತೆದಾರರಿಗೆ ಬಿಗ್ ಅಪ್ಡೇಟ್ ಇಲ್ಲಿದೆ (Big update for PPF, SSY Account Holders) . ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮುಗಿಸಿ ಬಿಡಿ, ಇಲ್ಲದಿದ್ದರೆ ನಿಮಗೆ ಸಮಸ್ಯೆ ತಪ್ಪಿದ್ದಲ್ಲ.
ಹೌದು, ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ಸಿಎಸ್ಎಸ್), ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ) ಅಥವಾ ಇತರ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರು ಸೆಪ್ಟೆಂಬರ್ 30 ರವರೆಗೆ ತಮ್ಮ ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನಿಮ್ಮ ಆಧಾರ್ ಸಂಖ್ಯೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಬೇಕು. ಇಲ್ಲದಿದ್ದರೆ ಆಧಾರ್ ಸಂಖ್ಯೆಯನ್ನು ಸಲ್ಲಿಸುವವರೆಗೆ ನಿಮ್ಮ ಸಣ್ಣ ಉಳಿತಾಯ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ.
ಅಂಚೆ ಕಚೇರಿಯಲ್ಲಿ (post office) ಮಾಡಿದ ಹೂಡಿಕೆಗಳನ್ನು ಸ್ಥಗಿತಗೊಳಿಸುವ ಸಂದರ್ಭದಲ್ಲಿ ನೀವು ಹಲವು ನಷ್ಟ ಅನುಭವಿಸಬಹುದು. ಯಾವುದೇ ರೀತಿಯ ಬಡ್ಡಿ ಬಾಕಿಯಿದ್ದರೆ, ಅದನ್ನು ಹೂಡಿಕೆದಾರರ ಬ್ಯಾಂಕ್ ಖಾತೆಗೆ (bank account) ಜಮಾ ಮಾಡಲಾಗುವುದಿಲ್ಲ. ಹೂಡಿಕೆದಾರರು ತಮ್ಮ ಪಿಪಿಎಫ್ ಅಥವಾ ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಾಗದಿರಬಹುದು. ಹೂಡಿಕೆದಾರರು ತಮ್ಮ ಬ್ಯಾಂಕ್ ಖಾತೆಯಲ್ಲಿ ಮೆಕ್ಯೂರಿಟಿ ಮನಿ ಕ್ರೆಡಿಟ್ ಪಡೆಯುವುದಿಲ್ಲ. ಠೇವಣಿದಾರನು ಆರು ತಿಂಗಳ ಅವಧಿಯಲ್ಲಿ ತನ್ನ ಆಧಾರ್ ಸಂಖ್ಯೆಯನ್ನು ಒದಗಿಸದಿದ್ದರೆ, ಆಧಾರ್ ಸಂಖ್ಯೆಯನ್ನು ಅಕೌಂಟ್ಸ್ ಆಫೀಸ್ ಒದಗಿಸುವವರೆಗೆ ಖಾತೆ ನಿಷ್ಕ್ರಿಯವಾಗುತ್ತದೆ.
ಪಿಪಿಎಫ್, ಎನ್ಎಸ್ಸಿ ಮತ್ತು ಇತರ ಸಣ್ಣ ಉಳಿತಾಯ ಯೋಜನೆಗಳಿಗೆ ಹಣಕಾಸು ಸಚಿವಾಲಯವು ಆಧಾರ್ ಮತ್ತು ಪ್ಯಾನ್ ಅನ್ನು ಕಡ್ಡಾಯಗೊಳಿಸಿದೆ. ಇದನ್ನು ಮಾರ್ಚ್ 31, 2023 ರಂದು ಹೊರಡಿಸಿದ ಅಧಿಸೂಚನೆಯ ಮೂಲಕ ತಿಳಿಸಲಾಗಿದೆ. ಹಾಗಾಗಿ PPF, SSY ಖಾತೆದಾರರು ಸೆ.30 ರೊಳಗೆ ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನಿಮ್ಮ ಆಧಾರ್ ಸಂಖ್ಯೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿರಿ!!!.