Lips personality: ನಿಮ್ಮ ತುಟಿಗಳೇ ನಿಮ್ಮ ಬಗೆಗಿನ ರಹಸ್ಯ ಬಯಲು ಮಾಡುತ್ತವಂತೆ! ಹೇಗೆ ಅಂತೀರಾ
Lips personality: ಮುಖದಲ್ಲಿ ಅಂದವನ್ನು ಹೆಚ್ಚಿಸುವಲ್ಲಿ ಮಾತ್ರ ತುಟಿಯ ಪಾತ್ರವಲ್ಲ. ತುಟಿಗಳ ಪಾತ್ರ ಇನ್ನು ಬಹಳ ವಿಸ್ತಾರವಾಗಿದೆ. ಯಾಕೆಂದರೆ ಒಬ್ಬರ ತುಟಿ ದಪ್ಪ ಆಗಿದ್ರೆ, ಮತ್ತೊಬ್ಬರ ತುಟಿ ಸಣ್ಣ ಅಥವಾ ಸಪೂರ ಇರತ್ತೆ. ಕೆಲವರ ಮೇಲಿನ ತುಟಿ ದೊಡ್ಡ ಇದ್ರೆ, ಕೆಲವರಿಗೆ ಕೆಳಗಿನ ತುಟಿ ದಪ್ಪ ಇರತ್ತೆ. (Lips personality)ಹೀಗೆ ಒಬ್ಬೊಬ್ಬರ ತುಟಿ ಒಂದೊಂದು ರೀತಿ ಇರುತ್ತದೆ.
ಮುಖ್ಯವಾಗಿ ತುಟಿಗಳು ನಿಮ್ಮ ಭಾವನಾತ್ಮಕ ಸ್ಥಿತಿ, ಆತ್ಮವಿಶ್ವಾಸದ ಮಟ್ಟ, ಬುದ್ಧಿವಂತಿಕೆಯ ಮಟ್ಟ, ಮುಕ್ತತೆಯ ಮಟ್ಟ ಮತ್ತು ಇತರ ಅನೇಕ ಗುಪ್ತ ಗುಣಲಕ್ಷಣಗಳನ್ನು (Lips personality) ತೋರಿಸುತ್ತದೆಯಂತೆ. ಅದು ಹೇಗೆಂದು ಬನ್ನಿ ನೋಡೋಣ.
ಮೇಲಿನ ತುಟಿ ದೊಡ್ಡ ಇದ್ದರೆ:
ಕೆಳಗಿನ ತುಟಿಗೆ ಹೋಲಿಸಿದರೆ ಮೇಲಿನ ತುಟಿ ದೊಡ್ಡ ಇದ್ದರೆ ಅಂತವರು ಮತ್ತೊಬ್ಬರ ಗಮನವನ್ನು ತಮ್ಮತ್ತ ಗಮನ ಸೆಳೆಯಲು ಬಯಸುತ್ತಾರೆ. ಪ್ರತಿ ವಿಚಾರಕ್ಕೂ ನಾಟಕ ಜಾಸ್ತಿ ಮಾಡುತ್ತಾರಂತೆ.
ಕೆಳಗಿನ ತುಟಿ ದಪ್ಪ ಇದ್ದರೆ :
ದೊಡ್ಡದಾದ ಕೆಳತುಟಿಯನ್ನು ಹೊಂದಿರುವ ಜನರು ಹೊಸ ಮತ್ತು ಕುತೂಹಲಕಾರಿ ವಿಷಯಗಳಿಗೆ ಆದ್ಯತೆ ನೀಡುತ್ತಾರೆ. ಇನ್ನು ಒಂದೇ ಕಡೆ ಕೆಲಸ ಮಾಡಲು ಇಷ್ಟಪಡುವುದಿಲ್ಲ, ಇವರ ಗಮನ ಮೋಜು-ಮಸ್ತಿಯ ಕಡೆ ಇರುತ್ತದೆ. ಇವರು ಹೊಸ ಸ್ಥಳಗಳಿಗೆ ಭೇಟಿ ನೀಡಲು, ಹೊಸ ಸ್ನೇಹಿತರನ್ನು ಹುಡುಕಲು ಮತ್ತು ಹೊಸ ಜನರನ್ನು ಭೇಟಿ ಮಾಡಲು ಇಷ್ಟಪಡುತ್ತಾರೆ.
ತೆಳ್ಳಗಿನ ತುಟಿಗಳು ಇದ್ದರೆ :
ತೆಳ್ಳಗಿನ ತುಟಿಗಳನ್ನು ಹೊಂದಿರುವವರು ಮುಖ್ಯವಾಗಿ ಒಂಟಿತನ ಪ್ರೀತಿಸುತ್ತಾರೆ. ಇವರು ಎಲ್ಲ ವಿಚಾರದಲ್ಲಿ ಸ್ವತಂತ್ರರಾಗಿರಲು ಬಯಸುತ್ತಾರೆ ಮತ್ತು ಯಾವುದೇ ರೀತಿಯ ಸಮಸ್ಯೆಯನ್ನು ನಿಭಾಯಿಸಬಲ್ಲರು.
ತೆಳ್ಳಗಿನ ಮೇಲ್ದುಟಿ ಇದ್ದರೆ :
ಮೇಲಿನ ತುಟಿ ತುಂಬಾ ತೆಳ್ಳಗೆ ಇರುವವರು ನಾಯಕತ್ವ ಗುಣಗಳನ್ನು ಹೊಂದಿರುತ್ತಾರೆ. ಇತರರನ್ನು ಮನವೊಲಿಸುವಲ್ಲಿ ಅತ್ಯುತ್ತಮರು. ಇವರಲ್ಲಿರುವ ಒಂದು ಸಮಸ್ಯೆಯೆಂದರೆ ಇವರು ಸಂಬಂಧವನ್ನು ಮುಂದುವರಿಸಲು ಕಷ್ಟಪಡುತ್ತಾರೆ.
ತುಂಬಿದ ತುಟಿ ಇದ್ದರೆ :
ಈ ರೀತಿಯ ತುಟಿಗಳನ್ನು ಹೊಂದಿರುವ ಜನರು ಸ್ವಾಭಾವಿಕವಾಗಿ ಸಹಾನುಭೂತಿ ಹೊಂದಿರುತ್ತಾರೆ ಮತ್ತು ಅತ್ಯುತ್ತಮ ಪೋಷಕರ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರು ತಮ್ಮ ಮಕ್ಕಳು, ಕಿರಿಯ ಸಹೋದರರು ಅಥವಾ ಸ್ನೇಹಿತರಾಗಿರಲಿ, ಕಾಳಜಿಯುಳ್ಳವರು ಮತ್ತು ಇತರರನ್ನು ನೋಡಿಕೊಳ್ಳುತ್ತಾರೆ. ಇವರು ಸಂಬಂಧಗಳನ್ನು ಹೆಚ್ಚು ಗೌರವಿಸುತ್ತಾರೆ.
ಬಿಲ್ಲು ತುಟಿ ಇದ್ದರೆ :
ಇವರು ಬಯಸಿದ್ದನ್ನು ಪಡೆಯಲು ಸಮರ್ಥವಾಗಿ ಯೋಜನೆ ಹಾಕುತ್ತಾರೆ. ಈ ಜನರು ಯಾವುದೇ ಪರಿಸ್ಥಿತಿಯಲ್ಲಿ ಸಂಭಾಷಣೆಯನ್ನು ನೆನಪಿಸಿಕೊಳ್ಳಬಹುದು ಮತ್ತು ಹಿಡಿದಿಟ್ಟುಕೊಳ್ಳಬಹುದು. ಇವರ ಸಾಮರ್ಥ್ಯ ಬಗ್ಗೆ ಇವರಿಗೆ ಹಿಡಿತ ಇರುತ್ತದೆ.
ಸಾಮಾನ್ಯ ತುಟಿ ಇದ್ದರೆ :
ಇವರ ಶಕ್ತಿ ಮತ್ತು ಗಮನ ಯಾವಾಗಲೂ ಬೇರೆಯವರ ಮಾತನ್ನು ಕೇಳಿಸಿಕೊಳ್ಳುವುದರಲ್ಲಿ ಇರುತ್ತದೆ. ಇವರನ್ನು ಯಾರಾದರೂ ಅವಮಾನಿಸಿದರೆ ಅದನ್ನು ಸುಲಭವಾಗಿ ತೆಗೆದುಕೊಳ್ಳುತ್ತಾರೆ. ಮತ್ತು ಬೇರೆಯವರ ನಿಲುವಿಗೆ ಆದ್ಯತೆ ಕೊಡುತ್ತಾರೆ.
ಇದನ್ನೂ ಓದಿ : ಹೊಸಚಿತ್ರಕ್ಕೆ ಹೊಸದಾಗಿ ಫೋಟೋಶೂಟ್ ಮಾಡಿಸಿಕೊಂಡ ‘ಪುಟ್ಟ ಗೌರಿ’!ಸಖತ್ ಹಾಟ್ ಗುರು!!!