DA Hike: ಸರಕಾರಿ ಉದ್ಯೋಗಿಗಳಿಗೆ ಗುಡ್ ನ್ಯೂಸ್! ತುಟ್ಟಿಭತ್ಯೆ ಹೆಚ್ಚಿಸಲು ಸರಕಾರದಿಂದ ಹೊಸ ಸೂತ್ರ!
Central Government news new formula for da Hike bumper Hike to Government employees
DA Hike: ಕೇಂದ್ರ ಸರ್ಕಾರವು (Central Government) ತನ್ನ ಉದ್ಯೋಗಿಗಳಿಗೆ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆಯನ್ನು ಹೆಚ್ಚಿಸುತ್ತದೆ. ಸದ್ಯ ಏರುತ್ತಿರುವ ಬೆಲೆಗಳನ್ನು ಸರಿದೂಗಿಸಲು ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ಡಿಎ ನೀಡುತ್ತದೆ. ಇದೀಗ ಸರಕಾರಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ. ತುಟ್ಟಿಭತ್ಯೆ ಹೆಚ್ಚಿಸಲು ಸರಕಾರದಿಂದ ಹೊಸ ಸೂತ್ರ ಜಾರಿಗೆ ಬರಲಿದೆ.
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಶೇ.42 ತುಟ್ಟಿಭತ್ಯೆ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರವು ತನ್ನ ಸರ್ಕಾರಿ ಉದ್ಯೋಗಿಗಳ (Central Govt Employees) ತುಟ್ಟಿಭತ್ಯೆಯನ್ನು (DA) ಜನವರಿ 2023 ರಲ್ಲಿ ಶೇಕಡಾ 4 ರಷ್ಟು ಹೆಚ್ಚಿಸಿದೆ. ಹೀಗಾಗಿ ಅಲ್ಲಿಯವರೆಗೆ ಶೇ.38 ರಷ್ಟಿದ್ದ ನೌಕರರ ತುಟ್ಟಿಭತ್ಯೆ ಶೇ.42ಕ್ಕೆ ಏರಿಕೆಯಾಯಿತು. ಅಂದಹಾಗೆ, ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ, ಡಿಎ (DA Hike) ಎಷ್ಟು ಹೆಚ್ಚಾಗಬಹುದು ಎಂಬ ಅಂದಾಜಿಸಲಾಗುವುದು.
ಈ ಬಾರಿ ಕಾರ್ಮಿಕ ಸಚಿವಾಲಯವು ವೆಚ್ಚಕ್ಕೆ ಅನುಗುಣವಾಗಿ ಲೆಕ್ಕಾಚಾರವನ್ನು ಬದಲಾಯಿಸಿದೆ. ಕೇಂದ್ರ ಸರ್ಕಾರವು 1963-65=100 ರಿಂದ 2016=100 ಕ್ಕೆ ವೇತನ ದರ ಸೂಚ್ಯಂಕವನ್ನು (WRI) ಬದಲಾಯಿಸಿದೆ. 2016 ರಲ್ಲಿ ತುಟ್ಟಿಭತ್ಯೆ ಆಧಾರದ ಮೇಲೆ ವೇತನ ದರ ಸೂಚ್ಯಂಕಗಳ ಹೊಸ ಸರಣಿಯನ್ನು ಪರಿಷ್ಕರಿಸಲಾಗಿದೆ ಮತ್ತು ಪ್ರಕಟಿಸಲಾಗಿದೆ. ಅಂದರೆ, ಈಗ ವೆಚ್ಚವನ್ನು ಲೆಕ್ಕಾಚಾರ ಮಾಡುವ ವಿಧಾನವೂ ಬದಲಾಗುತ್ತದೆ.
ಇದರ ಅಡಿಯಲ್ಲಿ ಉದ್ಯೋಗಿಗಳು ಹೆಚ್ಚಿನ ಪ್ರಯೋಜನಗಳನ್ನು ಪಡೆಯಲಿದ್ದಾರೆ.
ಎಐಸಿಪಿಐ ಸೂಚ್ಯಂಕ ಮಾಹಿತಿಯ ಪ್ರಕಾರ, ಜನವರಿ ಮತ್ತು ಜುಲೈ ನಡುವೆ ತುಟ್ಟಿಭತ್ಯೆ 3 ಅಥವಾ 4 ಪ್ರತಿಶತದಷ್ಟು ಹೆಚ್ಚಾಗಬಹುದು ಎನ್ನಲಾಗಿದೆ. ಆದರೆ, ಈ ಬಾರಿ ಕೂಡಾ ಶೇ 4 ರಷ್ಟೇ ಹೆಚ್ಚಳವಾಗಲಿದೆ ಎಂದು ಕೂಡಾ ಬಲವಾಗಿ ಹೇಳಲಾಗುತ್ತಿದೆ. ಒಂದು ವೇಳೆ ತುಟ್ಟಿ ಭತ್ಯೆಯಲ್ಲಿ ಶೇಕಡಾ 3 ರಷ್ಟು ಹೆಚ್ಚಳವಾದರೆ ಒಟ್ಟು ಡಿಎ 45% ಕ್ಕೆ ಏರಿಕೆಯಾಗುತ್ತದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿಲ್ಲ, ಘೋಷಣೆಯಾದ ನಂತರವೇ ಸ್ಪಷ್ಟತೆ ಸಿಗಲಿದೆ.
ಇದನ್ನೂ ಓದಿ: LPG Gas Cylinder Price: ಗ್ಯಾಸ್ ಸಿಲಿಂಡರ್ ಬೆಲೆ ರೂ. 200 ಮಾತ್ರವಲ್ಲ, ರೂ. 400 ಕಡಿತ ! ಹೇಗೆ ಅಂತೀರಾ?