

Viral Video: ಮಹಿಳೆಯೊಬ್ಬರು (women) ಮಲಗಿದ್ದ ವೇಳೆ ಹಾವೊಂದು ಬಂದು ಆಕೆಯ ಕಾಲಿಗೆ ಸುತ್ತಿಕೊಂಡು ಮೂರು ಗಂಟೆ ಹೆಡೆ ಎತ್ತಿ ನಿಂತು ನೋಡಿರುವ ಆಘಾತಕಾರಿ ಹಾಗೂ ವಿಚಿತ್ರ ಘಟನೆ ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯ ದೇವಿಗಂಜ್ ಗ್ರಾಮದಲ್ಲಿ ನಡೆದಿದೆ. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ. (Viral Video)
ಇಲ್ಲಿನ ನಿವಾಸಿ ಮಿಥಿಲೇಶ್ ಕುಮಾರಿ ಯಾದವ್ ಎಂಬಾಕೆ ರಾಖಿ ಹಬ್ಬದಂದು ಮನೆಗೆ ಬಂದಿದ್ದರು. ನಿದ್ರಿಸಲು ಮಲಗಿದ್ದಾಕೆಗೆ ಎದ್ದಾಗ ಆಶ್ಚರ್ಯ ಕಾದಿತ್ತು. ಹೌದು, ಮಹಿಳೆ ಮಲಗಿದ್ದ ವೇಳೆ ಆಕೆಯ ಕಾಲಿಗೆ ಹಾವು ಸುತ್ತಿಕೊಂಡಿದೆ. ನಿದ್ದೆಯಿಂದ ಎದ್ದು ಹಾವನ್ನು ನೋಡಿದಾಕೆ ಭಯಗೊಂಡರೂ ಧೈರ್ಯ ತಂದುಕೊಂಡು ಹಾವನ್ನು ನೋಡುತ್ತಾ ಶಿವನನ್ನು ಧ್ಯಾನಿಸಿದಳು.
ಮಹಿಳೆಯ ಕಾಲಿಗೆ ಹಾವು ಸುತ್ತಿಕೊಂಡು ಸುಮಾರು 3 ಗಂಟೆಗಳ ಕಾಲ ಅಲ್ಲೇ ಇತ್ತು. ಮಹಿಳೆ ಹಾಗೆಯೇ ಕುಳಿತು ಶಿವನ ನಾಮಸ್ಮರಣೆ ಮಾಡುತ್ತಲೇ ಇದ್ದಳು. ಮನೆಯವರು ಈ ದೃಶ್ಯವನ್ನು ಭಯ-ಭಕ್ತಿಯಿಂದಲೇ ನೋಡುತ್ತಲೇ ಇದ್ದರು. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಹಾವು ಹಿಡಿಯುವವರನ್ನು ಕರೆಸಿ ಮಹಿಳೆಯ ಕಾಲಿನಿಂದ ಹಾವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಸದ್ಯ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿರುವ ನಾನಾ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಮಹಿಳೆಯ ಕಾಲಿಗೆ ವಿಷಪೂರಿತ ಹಾವು ಸುತ್ತಿಕೊಂಡಿದ್ದರೂ ಅದು ಯಾಕೆ ಆಕೆಗೆ ಕಚ್ಚಿಲ್ಲ ಎಂದು ಆಶ್ಚರ್ಯಚಕಿತರಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಆಕೆಯ ಧೈರ್ಯಕ್ಕೆ ಮೆಚ್ಚಿದ್ದಾರೆ, ಶಿವನನ್ನು ಧ್ಯಾನಿಸಿದ್ದಾರೆ.
ಇದನ್ನೂ ಓದಿ: Tomato Price: ಭಾರೀ ಇಳಿಕೆ ಕಂಡ ಟೊಮೆಟೋ ದರ ; ಗ್ರಾಹಕರ ಮುಖದಲ್ಲಿ ಸಂತಸ !!!













