Death news: ಜೀವ ಹೋದರೂ ಅಂತ್ಯಕ್ರಿಯೆಗೆ ಬಾರದ ಮಕ್ಕಳು: ಶವ ಬಿಸಾಕಿ ಎಂದ ಮಗಳು, ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಪೊಲೀಸರು!
Maharashtra news children in foreign did not come even their father funeral then police conducting the funeral at chikkodi
Maharashtra: ಹುಟ್ಟು ಆಕಸ್ಮಿಕ ಆದರೆ ಸಾವು(Death)ನಿಶ್ಚಿತ. ಆದ್ರೆ, ಎತ್ತರಕ್ಕೆ ಹತ್ತುವವರೆಗೆ ಆಸರೆಯಾಗಿದ್ದ ಏಣಿಯನ್ನು ಅವಶ್ಯಕತೆ ಮುಗಿದ ಮೇಲೆ ನಿರ್ಲಕ್ಷ್ಯ ವಹಿಸುವಂತೆ ಬಾಲ್ಯದಿಂದ ತನ್ನ ಮಕ್ಕಳಿಗಾಗಿ ಜೀವ ಮುಡಿಪಾಗಿಟ್ಟ ಜೀವದ ಉಸಿರು ನಿಂತರೂ ಅದೇಕೋ ಆ ಮಕ್ಕಳಿಗೆ ತಂದೆಯ ಮೇಲೆ ವಾತ್ಸಲ್ಯ ಬಿಡಿ!!, ಜೀವ ಹೋದರೂ ಕೂಡ ಮಕ್ಕಳು ಅಂತ್ಯಕ್ರಿಯೆಯಿಂದ ಕೂಡ ಹೊರಗುಳಿದ ವಿಚಿತ್ರ ಘಟನೆಯೊಂದು ವರದಿಯಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನವಳ್ಳಿ ಗ್ರಾಮದ ವೃದ್ದರೊಬ್ಬರ ಸ್ಥಿತಿ ಕಂಡರೆ ನೋಡುಗರ ಹೊಟ್ಟೆ ಚುರುಕ್ ಎನ್ನದೇ ಇರದು. ಯಾವ ತಂದೆ ತಾಯಿಗು ಕೂಡ ಈ ರೀತಿಯ ಪರಿಸ್ಥಿತಿ ಬರದಿರಲಿ ಎಂದು ಸ್ಥಳೀಯರು ಭಾವಿಸಿದರು ಅಚ್ಚರಿಯಿಲ್ಲ. ಇಬ್ಬರು ಮಕ್ಕಳು ಸ್ಥಿತಿವಂತರಾಗಿದ್ದರು ಕೂಡ ಮಾನವೀಯ ಮೌಲ್ಯಗಳು ಇಲ್ಲದೆ ತಂದೆಯ ಅಂತ್ಯಕ್ರಿಯೆ ಮಾಡಲು ಕೂಡ ಮುಂದಾಗದೆ ಅಷ್ಟು ಸಾಲದೆಂಬಂತೆ ಶವವನ್ನು ಬಿಸಾಕಿ ಎಂದು ಮಗಳೇ ಹೇಳಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ(Maharashtra) ಪುಣೆ ಮೂಲದ ಬ್ಯಾಂಕ್‌ವೊಂದರ ನಿವೃತ್ತ ಮ್ಯಾನೇಜರ್ ಮೂಲಚಂದ್ರ ಶರ್ಮಾ (72) ಪಾರ್ಶ್ವವಾಯುಗೆ ತುತ್ತಾಗಿದ್ದರು.ಪರಿಚಯಸ್ಥರ ನೆರವಿನಿಂದ ಒಂದೂವರೆ ತಿಂಗಳ ಹಿಂದೆ ಮೂಲಚಂದ್ರ ಚಿಕಿತ್ಸೆಗಾಗಿ ಪುಣೆಯಿಂದ ನಾಗರಮುನವಳ್ಳಿಗೆ ಬಂದಿದ್ದರಂತೆ. ಇವರ ಇಬ್ಬರು ಮಕ್ಕಳಲ್ಲಿ ಮಗಳು ಕೆನಡಾದಲ್ಲಿದ್ದರೆ, ಪುತ್ರ ಸೌಥ್ ಆಫ್ರಿಕಾದಲ್ಲಿ ನೆಲೆಸಿದ್ದಾರೆ.ಈ ನಡುವೆ, ಮೂಲಚಂದ್ರ ಶರ್ಮಾ ಒಬ್ಬರೇ ಪುಣೆಯಲ್ಲಿ ವಾಸವಾಗಿದ್ದರು. ಮೂಲಚಂದ್ರ ಶರ್ಮಾ ಅವರನ್ನು ನಾಗರಮುನ್ನೋಳಿಗೆ ಚಿಕಿತ್ಸೆಗೆ ಬಂದಿದ್ದಾರೆ.ಈ ಸಂದರ್ಭದಲ್ಲಿ ಇವರ ಆರೈಕೆಗಾಗಿ ಒಬ್ಬ ಗುತ್ತಿಗೆ ನೌಕರನನ್ನು ಮನೆಯವರೇ ನೇಮಕ ಮಾಡಿದ್ದಾರೆ. ಆತನ ಗುತ್ತಿಗೆ ಅವಧಿ ಮುಗಿಯುತ್ತಿದ್ದಂತೆ ಆತನಿಗೆ ಮನೆಯವರು ಹಣ ನೀಡಿಲ್ಲ ಎಂದು ವ್ಯಕ್ತಿ ವೃದ್ಧನನ್ನು ಲಾಡ್ಜ್‌ನಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ನಾಗರಮುನವಳ್ಳಿಯ ಲಾಡ್ಜ್‌ನಲ್ಲಿ ಮೂಲಚಂದ್ರರನ್ನು ಬಿಟ್ಟು ಆ ವ್ಯಕ್ತಿ ಪರಾರಿಯಾಗಿದ್ದ. ಈ ವಿಷಯವನ್ನು ಸ್ಥಳೀಯರು ಚಿಕ್ಕೋಡಿ ಪಿಎಸ್ಐ ಬಸಗೌಡ ನೇರ್ಲಿ ಅವರ ಗಮನಕ್ಕೆ ತಂದಿದ್ದು, ಅವರು ಅಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ(Hospital )ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವೃದ್ಧ ಅಸುನೀಗಿದ್ದಾರೆ. ಚಿಕಿತ್ಸೆ ಫಲಿಸದೇ ಮೃತರಾದ ವೃದ್ಧರ ಮನೆಯವರಿಗೆ ವಿಚಾರ ತಿಳಿಸಲು ಪೋಲಿಸರು ಮಕ್ಕಳನ್ನು ಮತ್ತು ವೃದ್ಧನ ಸಂಬಂಧಿಕರಿಗೆ ಕರೆಮಾಡಿದ್ದು, ಮಗಳು ಮಾತ್ರ ಕರೆ ಸ್ವೀಕರಿಸಿದ್ದು, ವಿದೇಶಗಳಲ್ಲಿ ನೆಲೆಸಿರುವ ಅವರ ಮಕ್ಕಳು ಅಂತ್ಯಕ್ರಿಯೆಗೆ ಬರಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಮಗಳಿಗೆ ಚಿಕ್ಕೋಡಿ ಪೋಲಿಸರು ವಾಟ್ಸ್‌ಆ್ಯಪ್ ಕರೆ ಮಾಡಿದಾಗ, ” ನಮ್ಮ ತಂದೆ ಮೊದಲು ಇದ್ದರು. ಈಗ ಇಲ್ಲ. ಅವರಿಗೆ ನನಗೆ ಯಾವುದೇ ಸಂಬಂಧವಿಲ್ಲ. ಅವರಿಗೆ ಚಿಕಿತ್ಸೆ ಕೊಡಿಸುವಂತೆ ನಾವೇನು ನಿಮಗೆ ಹೇಳಿಲ್ಲ. ನಾವು ನೆಮ್ಮದಿಯಿಂದ ಇದ್ದೇವೆ. ವಿನಾಕಾರಣ ತೊಂದರೆ ಕೊಡಬೇಡಿ. ಬೇಕಾದರೆ ಅಂತ್ಯಕ್ರಿಯೆ ನೆರವೇರಿಸಿ ಅಥವಾ ಶವ ಬಿಸಾಕಿ” ಎಂದು ವೃದ್ಧನ ಮಗಳು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ,ಅಂತ್ಯಕ್ರಿಯೆಯಿಂದ ದೂರ ಉಳಿದ ಮಕ್ಕಳ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮಕ್ಕಳು- ಸಂಬಂಧಿಕರ ಅನುಪಸ್ಥಿತಿಯಲ್ಲಿ ಪೊಲೀಸರೇ ಅನಾಥ ಶವಕ್ಕೆ ಬಂಧುವಾಗಿ ಸ್ಥಳೀಯ ಪೊಲೀಸರು, ಅಧಿಕಾರಿಗಳೇ ಸೇರಿ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ.