Sowjanya case :ಆ.31ರಂದು ಸುಬ್ರಹ್ಮಣ್ಯದಲ್ಲಿ ಸೌಜನ್ಯ ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ಪಾದಯಾತ್ರೆ ,ಸಭೆ
Dakshina Kannada news demanding a re-investigation of the Sowjanya case padayatra held on subrahmanya on August 31
Sowjanya case: ಸುಬ್ರಹ್ಮಣ್ಯ : ಸೌಜನ್ಯ ಹತ್ಯೆ ಪ್ರಕರಣದ(Sowjanya case) ನ್ಯಾಯಕ್ಕಾಗಿ ಹಾಗೂ ಮರು ತನಿಖೆಗೆ ಒತ್ತಾಯಿಸಿ ಆ.31ರಂದು ಸುಬ್ರಹ್ಮಣ್ಯದ ಕುಮಾರಧಾರ ಬಳಿಯಿಂದ ದೇವಸ್ಥಾನದ ವರೆಗೆ ಮೌನ ಮೆರವಣಿಗೆ ಸುಬ್ರಹ್ಮಣ್ಯದ ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಿಂದ ನಡೆಯಲಿದೆ ಎಂದು ಸಮಿತಿಯ ಡಾ| ರವಿ ಕಕ್ಕೆಪದವು ಹೇಳಿದರು.
ಅವರು ಸುಬ್ರಹ್ಮಣ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಕುಮಾರಧಾರ ಬಳಿಯಿಂದ ಆರಂಭವಾಗುವ ಪಾದಯಾತ್ರೆ ದೇವಸ್ಥಾನದವರೆಗೆ ಸಾಗಿ ಅಲ್ಲಿ ಪ್ರಕರಣದ ನೈಜ ಆರೋಪಿಗಳಿಗೆ ಶಿಕ್ಷೆ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಗುವುದು. ಬಳಿಕ ಸಭೆ ನಡೆಯಲಿದೆ.
ಸಭೆಯಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ತಾಯಿ ಕುಸುಮಾವತಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುಬ್ರಹ್ಮಣ್ಯ ರೋಟರಿ ಕ್ಲಬ್ ಸ, ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ, ಜೆಸಿಐ ಸುಬ್ರಹ್ಮಣ್ಯ, ಬಿಎಂಎಸ್ ಆಟೋ ಚಾಲಕ ಮಾಲಕ ಸಂಘ ಸುಬ್ರಹ್ಮಣ್ಯ, ಕುಕ್ಕೇ ಶ್ರೀ ಆಟೋ ಚಾಲಕ ಮಾಲಕ ಸಂಘ, ಕುಕ್ಕೆ ಶ್ರೀ ಟ್ಯಾಕ್ಸಿ ಚಾಲಕ ಮಾಲಕ ಸಂಘ, ಸಂಜೀವಿನಿ ಒಕ್ಕೂಟ,ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟ್, ಸುಬ್ರಹ್ಮಣ್ಯ ವರ್ತಕರ ಸಂಘ, ಗೌಡ ಸಮಿತಿ ಸುಬ್ರಹ್ಮಣ್ಯ ವಲಯ ಹಾಗೂ ವಿವಿಧ ಸಂಘ ಸಂಸ್ಥೆಗಳು ಮತ್ತು ಸ್ಥಳೀಯರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಗೋಪಾಲ ಎಣ್ಣೆಮಜಲು, ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ ಗುರುಪ್ರಸಾದ್ ಮೇಲ್ನಾಡ್, ಸತೀಶ್.ಕೆ.ಪಿ. ಕೊಮ್ಮೆಮನೆ, ದಿನೇಶ್ ಶಿರಾಡಿ, ವಿವೇಕಾನಂದ ದೇವರಗದ್ದೆ, ತಿಲಕ್ ಎ.ಎ. ಭಾರತಿ ದಿನೇಶ್, ಶೇಖರ್ ಆಗೋಲಿಕಜೆ ಉಪಸ್ಥಿತರಿದ್ದರು.