Home National Jammu and Kashmir: ʼಜೈ ಶ್ರೀರಾಮ್‌ʼ ಎಂದು ಬರೆದ ವಿದ್ಯಾರ್ಥಿಗೆ ಬೂಟ್‌ಕಾಲಿನಿಂದ ಒದ್ದು ಹಲ್ಲೆ ಮಾಡಿದ...

Jammu and Kashmir: ʼಜೈ ಶ್ರೀರಾಮ್‌ʼ ಎಂದು ಬರೆದ ವಿದ್ಯಾರ್ಥಿಗೆ ಬೂಟ್‌ಕಾಲಿನಿಂದ ಒದ್ದು ಹಲ್ಲೆ ಮಾಡಿದ ಶಿಕ್ಷಕ! ವೀಡಿಯೋ ವೈರಲ್‌

Hindu neighbor gifts plot of land

Hindu neighbour gifts land to Muslim journalist

Jammu and Kashmir : ಉತ್ತರಪ್ರದೇಶದಲ್ಲಿ ನಿನ್ನೆ ಬೆಳಕಿಗೆ ಬಂದಂತಹ ಘಟನೆಯೊಂದು ಬಹಳ ಸುದ್ದಿಯನ್ನು ಮಾಡಿತ್ತು. ತರಗತಿಯೊಂದರಲ್ಲಿ ಶಿಕ್ಷಕಿಯು ಇತರ ವಿದ್ಯಾರ್ಥಿಗಳಿಂದ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿಸಿರುವ ಘಟನೆ ನಡೆದಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಜಮ್ಮು ಕಾಶ್ಮೀರದಲ್ಲಿ (Jammu and Kashmir) ಅಂತಹುದೇ ಒಂದು ಘಟನೆ ನಡೆದಿದೆ.

ಓರ್ವ ವಿದ್ಯಾರ್ಥಿ ಶಾಲೆಯಲ್ಲಿ ಬೋರ್ಡ್‌ ಮೇಲೆ ಜೈ ಶ್ರೀರಾಮ್‌ ಎಂದು ಬರೆದಿದ್ದು, ಅದರಿಂದ ಕೋಪಗೊಂಡ ಶಿಕ್ಷಕ ಮತ್ತು ಪ್ರಾಂಶುಪಾಲ ಆ ವಿದ್ಯಾರ್ಥಿಯನ್ನು ಅಮಾನುಷವಾಗಿ ಥಳಿಸಿರುವ ಘಟನೆ ನಡೆದಿದೆ. ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಥಳಿತಕ್ಕೊಳಗಾದ ವಿದ್ಯಾರ್ಥಿ ನೀರಜ್‌ ಕುಮಾರ್‌ ಎಂದು ಗುರುತಿಸಲಾಗಿದೆ. ಈತ ಕ್ಲಾಸ್‌ ರೂಮಿನ ಬೋರ್ಡ್‌ ಮೇಲೆ ಜೈ ಶ್ರೀರಾಮ್‌ ಎಂದು ಬರೆದಿದ್ದು, ಇದರಿಂದ ಕೋಪಗೊಂಡ ಪ್ರಾಂಶುಪಾಲ ಫಾರೂಕ್‌ ಅಹ್ಮದ್‌ ವಿದ್ಯಾರ್ಥಿಯನ್ನು ಬೂಟ್‌ ಕಾಲಿನಿಂದ ಒದ್ದು, ಥಳಿಸಿರುವ ಘಟನೆ ನಡೆದಿದೆ. ವಿದ್ಯಾರ್ಥಿಯ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಈಗ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

https://twitter.com/i/status/1695376949894599034

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಡಳಿತ ವಿಭಾಗೀಯ ಮ್ಯಾಜಿಸ್ಟ್ರೇಟ್‌, ಉಪ ಮುಖ್ಯ ಶಿಕ್ಷಣ ಅಧಿಕಾರಿ, ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯ ಪ್ರಾಂಶುಪಾಲರನ್ನು ಒಳಗೊಂಡ ಸಮಿತಿಯನ್ನು ನೇಮಿಸಿ ತನಿಖೆ ನಡೆಸುವಂತೆ ಆದೇಶ ನೀಡಿದೆ. ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿದೆ.

ಇದನ್ನೂ ಓದಿ:Kadaba: ಕೆಲಸಕ್ಕೆ ಹೋಗಿ ಬರುವುದಾಗಿ ಮನೆಯಿಂದ ಹೋದ ಮಹಿಳೆ ನಾಪತ್ತೆ