ಯಾರೇ ಆಗಲಿ ಹೆತ್ತವರ ಮುಂದೆ ತಪ್ಪಿಯೂ ಈ ಮಾತು ಹೇಳಬಾರದು!
Lifestyle relationship between father and children Never tell these things to your father
Relationship: ಬುದ್ಧಿ ಕಲಿಸಿದ ಗುರುಗಳು ಹಾಗೂ ನಮ್ಮನ್ನು ಸಲಹಿದ ಹಿರಿಯರಿಗೆ ಕಿರಿಯರು ಗೌರವ ನೀಡಿ ನಡೆಯಬೇಕೆಂದು ಹಿರಿಯರು ಹೇಳಿದ್ದಾರೆ ಅಂತೆಯೇ ನಡೆದುಕೊಂಡು ಬಂದಿದ್ದಾರೆ. ಅದರಲ್ಲೂ ಜಗತ್ತಿನಲ್ಲಿ ಮಾನವನಿಗಿರುವ ಎಲ್ಲ ಋಣಗಳ ಪೈಕಿ ತಂದೆ-ತಾಯಿ ಋಣವು ಅತ್ಯಂತ ಮಹತ್ವದ್ದಾಗಿದೆ.
ಇನ್ನು ಯವ್ವನದಲ್ಲಿ ಎಷ್ಟೇ ಬೇಜವಾಬ್ದಾರಿ ವ್ಯಕ್ತಿಯಾಗಿದ್ದರೂ ತಂದೆಯಾದ ನಂತರ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ. ತಂದೆಯಾದವನು ತನ್ನ ಮಗುವಿನ ಆಸೆ ಆಕಾಂಕ್ಷೆಗಳನ್ನು ಪೂರೈಸಲು ಎಷ್ಟೆಲ್ಲಾ ಕಷ್ಟಪಡುತ್ತಾನೆ.
ಅದೇ ಮಕ್ಕಳಿಗೆ ಯವ್ವನ ತುಂಬಿದಾಗ, ತಂದೆಗೆ ವಯಸ್ಸಾಗಿದೆ ಎಂದು ತಾತ್ಸಾರ ಮಾಡುತ್ತಾರೆ, ನಂತರ ಮಕ್ಕಳಿಗೆ ಅವರು ಹೊರೆಯೆನಿಸಲಾರಂಭಿಸುತ್ತಾರೆ. ಆದರೆ ತಂದೆಯ ಜೊತೆಗೆ ಅವರ ಮನಸ್ಸಿಗೆ ಬೇಸರವಾಗುವಂತೆ ವರ್ತಿಸುವುದು ತಪ್ಪು. ತಂದೆ-ಮಗನ ಸಂಬಂಧ (Relationship) ಒಂದು ಉತ್ತಮ ಕಲ್ಮಶ ಇಲ್ಲದ ಬಾಂಧವ್ಯವಾಗಿದೆ. ಆದರೆ ಕೆಲವೊಮ್ಮೆ ಈ ಸಂಬಂಧವನ್ನು ಹಾಳು ಮಾಡುವ ಕೊಂಕು ಮಾತನ್ನು ಮಕ್ಕಳು ಮಾತನಾಡದೇ ಇರುವುದು ಉತ್ತಮ.
ಇದೆಲ್ಲಾ ಯುವಕರಿಗೆ ಸರಿಹೊಂದುತ್ತದೆ:
ತಂದೆ ಆಸೆಯಿಂದ ಏನಾದರೂ ಕೊಂಡುಕೊಂಡರೆ ಅದನ್ನು ತಿರಸ್ಕಾರ ಮಾಡದಿರಿ. ಉದಾಹರಣೆಗೆ ಸ್ಮಾರ್ಟ್ ಫೋನ್ ಆಗಿರಬಹುದು. ಇವೆಲ್ಲಾ ಯುವಕರಿಗೆ ಸರಿಹೊಂದುತ್ತದೆ, ವಯಸ್ಸಾದ ನಿಮಗಲ್ಲ ಎನ್ನುವ ಮಾತು ಸರಿಯಲ್ಲ. ಯಾಕೆಂದರೆ ಅವರಿಗೂ ಒಂದು ಆಸೆ ಇರುತ್ತದೆ. ಇದು ಅವರ ಮನಸ್ಸನ್ನು ಘಾಸಿಗೊಳಿಸಬಹುದು
ನಿಮಗೇನೂ ಗೊತ್ತಿಲ್ಲ ಬಾಯಿ ಮುಚ್ಚಿರಿ:
ತಂದೆ ಮಗನಿಗೆ ಸಲಹೆ ನೀಡುವಾಗ ತಮ್ಮ ಅಭಿಪ್ರಾಯ ಸರಿ ಎಂದು ವಾದಿಸುತ್ತ, ತಮ್ಮ ತಂದೆಯ ಬಾಯಿ ಮುಚ್ಚಿಸುತ್ತಾರೆ. ನಿಮಗೇನೂ ಗೊತ್ತಿಲ್ಲ ಬಾಯಿ ಮುಚ್ಚಿ ಎಂದು ಹೇಳುತ್ತಾರೆ. ಮಕ್ಕಳು ಇದನ್ನು ತಮಾಷೆಗೆ ಹೇಳಿದ್ದರೂ ಸಹ ಅದು ತಂದೆಗೆ ಅವಮಾನ ಮಾಡಿದಂತಾಗುತ್ತದೆ. ಅದು ಅವರ ಮನಸ್ಸಿನಲ್ಲಿ ಹಾಗೆಯೇ ಉಳಿದುಬಿಡುತ್ತದೆ.
ಕೆಲಸ ಬರದಿದ್ದಾಗ ಯಾಕೆ ಮಾಡಬೇಕಿತ್ತು?:
ಆಧುನಿಕ ಜೀವನದಲ್ಲಿ ಪ್ರತಿಯೊಂದು ಉಪಕರಣ ನಿರ್ವಹಣೆ ಬದಲಾವಣೆ ಹೊಂದಿದೆ, ಹಾಗಿರುವಾಗ ಮಗನಾದವನು ನಿಧಾನವಾಗಿ ಅವುಗಳನ್ನು ತಿಳಿ ಹೇಳಬೇಕು, ಇದರ ಹೊರತು ಆ ಕೆಲಸ ಬರದಿದ್ದರೆ ಮಾಡಲು ಯಾಕೆ ಹೋಗಬೇಕು ಎನ್ನುವ ಮಾತು ಅವರನ್ನು ತುಂಬಾ ಘಾಸಿ ಗೊಳಿಸುತ್ತದೆ.
ನೀವು ನನಗಾಗಿ ಏನು ಮಾಡಿದಿರಾ?
ಹೆತ್ತವರು ತಮ್ಮ ಶಕ್ತಿ ಮೀರಿ ನಿಮ್ಮನ್ನು ಒಂದು ಹಂತದ ವರೆಗೆ ತಲುಪಿಸುತ್ತಾರೆ. ನಂತರ ಮಕ್ಕಳ ಪ್ರಯತ್ನವು ಮುಖ್ಯವಾಗುತ್ತದೆ. ಹಾಗಿರುವಾಗ ನೀವು ನಿಮ್ಮ ಜೀವನದ ಕೆಲವು ಸೋಲುಗಳನ್ನು , ದೂಷಿಸುವುದಾಗಲಿ, ಅಪವಾದವನ್ನು ಹೆತ್ತವರ ಮೇಲೆ ಬೆರಳು ಮಾಡಿ ತೋರಿಸುವುದಾಗಲಿ ಮಾಡಬಾರದು. ಕೆಲವೊಮ್ಮೆ ತಮಾಷೆಗೆ, ಕೆಲವೊಮ್ಮೆ ಕೋಪದಲ್ಲಿ, ನೀವು ನಮಗಾಗಿ ಏನು ಮಾಡಿದ್ದೀರಿ ಎಂದು ಹೇಳಿದ ಮಾತು ಅಪ್ಪನ ಹೃದಯವನ್ನು ನೋಯಿಸಬಹುದು.
ನೀವು ಮಕ್ಕಳನ್ನು ಹಾಳು ಮಾಡುತ್ತಿದ್ದೀರಿ:
ಪ್ರತಿಯೊಬ್ಬ ವಯಸ್ಸಾದ ವ್ಯಕ್ತಿಯು ತಮ್ಮ ಉಳಿದ ದಿನಗಳನ್ನು ತನ್ನ ಮೊಮ್ಮಕ್ಕಳೊಂದಿಗೆ ಆಟವಾಡುವ ಕನಸು ಕಾಣುತ್ತಾರೆ. ಆದ್ದರಿಂದ ಅವರು ಮತ್ತೊಮ್ಮೆ ತನ್ನ ಬಾಲ್ಯ ಮತ್ತು ಯೌವನವನ್ನು ಬದುಕಬಹುದು.
ಅಂತಹ ಪರಿಸ್ಥಿತಿಯಲ್ಲಿ, ಅವರು ತಮ್ಮ ಮನೆಯ ಮಕ್ಕಳನ್ನು ಹೆಚ್ಚು ಮುದ್ದಿಸಲು ಪ್ರಾರಂಭಿಸುತ್ತಾರೆ, ಇದರಿಂದಾಗಿ ಮಕ್ಕಳು ಹೆಚ್ಚು ಹಠ ಮಾರಿಗಳಾಗುತ್ತಾರೆ. ನಿಮ್ಮ ತಂದೆ ಮಕ್ಕಳನ್ನು ಹಾಳು ಮಾಡುತ್ತಿದ್ದಾರೆ ಎಂದು ನೀವು ಆರೋಪಿಸಿದರೆ, ಅವರು ಖಿನ್ನತೆಗೆ ಒಳಗಾಗಬಹುದು.
ಒಟ್ಟಿನಲ್ಲಿ ಮಕ್ಕಳು ಕೆಲವೊಮ್ಮೆ ತಮಾಷೆಗೆ, ಕೆಲವೊಮ್ಮೆ ಕೋಪದಲ್ಲಿ, ಆಡಿದ ಮಾತನ್ನು ತಾಯಿ ಮರುದಿನ ಮರೆತುಬಿಡಬಹುದು, ಆದರೆ ದೃಢ ಮನಸ್ಸಿನ, ಜೀವನವಿಡೀ ತನ್ನ ಕುಟುಂಬಕ್ಕಾಗಿ ತನ್ನನ್ನು ಸವೆಸಿದ ತಂದೆ ತನ್ನ ಮಕ್ಕಳು ಮಾಡಿದ ಈ ಅಗೌರವವನ್ನು, ನೋವನ್ನು ಎಂದಿಗೂ ಮರೆಯುವುದಿಲ್ಲ.
ಇದನ್ನೂ ಓದಿ: ಮಕ್ಕಳ ತಲೆಯಲ್ಲಿ ಹೇನಿನ ಸಮಸ್ಯೆಯೇ? ಪೋಷಕರಿಗೊಂದು ಬೆಸ್ಟ್ ಸೊಲ್ಯೂಶನ್ ಇಲ್ಲಿ ನೀಡಲಾಗಿದೆ!!