Actress Sadhika Venugopal: ಮಂಚ ಹಂಚಿಕೊಳ್ಳಲು ಓಕೆ ಅಂದರೆ ಪ್ರಮುಖ ನಾಯಕಿ ಪಾತ್ರದ ಆಫರ್ ! ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಹಾಟ್ ಬ್ಯೂಟಿ ನಟಿ !!
Mollywood news Malayalam actress Sadhika Venugopal talks about directors and producers casting couch
Actress Sadhika Venugopal: ಈ ಹಿಂದೆ ಕಾಸ್ಟಿಂಗ್ ಕೌಚ್ ಬಗ್ಗೆ ಅನೇಕ ಘಟನೆಗಳು ಚಿತ್ರರಂಗವಿರಲಿ ಅಥವಾ ಟಿವಿ ಧಾರಾವಾಹಿ (Serial) ಕ್ಷೇತ್ರವಿರಲಿ ಸಾಕಷ್ಟು ಕೇಳಿಬಂದಿವೆ. ಕಾಸ್ಟಿಂಗ್ ಕೌಚ್ (cast couching) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. ಈಗಾಗಲೇ ಸಾಕಷ್ಟು ನಟಿಯರು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಇದೀಗ ಮಲಯಾಳಂ ನಟಿ ಸಾಧಿಕಾ ವೇಣುಗೋಪಾಲ್ (Actress Sadhika Venugopal) ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.
ಬೋಲ್ಡ್ ಫೋಟೋಶೂಟ್ನಿಂದಲೇ ಆಗಾಗ ಸುದ್ದಿಯಲ್ಲಿರುವ ಸಾಧಿಕಾ ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರು. ಇದೀಗ ಚಿತ್ರರಂಗದ ಕೆಲವು ಕರಾಳ ಛಾಯೆಯನ್ನು ಸಾಧಿಕಾ ಬಹಿರಂಗ ಮಾಡಿದ್ದಾರೆ. ಮಂಚ ಹಂಚಿಕೊಳ್ಳಲು ಓಕೆ ಅಂದರೆ ಮಾತ್ರ ಪ್ರಮುಖ ನಾಯಕಿ ಪಾತ್ರದ ಆಫರ್ ಸಿಗುತ್ತೆ ಎಂದು ಹೇಳುವ ಮೂಲಕ ಹಾಟ್ ಬ್ಯೂಟಿ ನಟಿ ಚಿತ್ರರಂಗದ ಇನ್ನೊಂದು ಮುಖ ಪರಿಚಯಿಸಿದ್ದಾರೆ.
ನಾನು ಮಂಚ ಹಂಚಿಕೊಳ್ಳಲು ಒಪ್ಪಿಕೊಂಡರೆ ಪ್ರಮುಖ ನಾಯಕಿ ಪಾತ್ರವನ್ನು ನೀಡುತ್ತೇನೆ ಎಂದು ಹಲವರು ನನಗೆ ಆಫರ್‌ಗಳನ್ನು ನೀಡಿದ್ದಾರೆ. ಈ ರೀತಿಯ ಹೆಚ್ಚಿನ ಕರೆಗಳು ಸಿನಿಮಾರಂಗದ ಮಧ್ಯವರ್ತಿಗಳಿಂದಲೇ ಬರುತ್ತವೆ. ಈ ಬಗ್ಗೆ ಚಿತ್ರದ ನಿರ್ಮಾಪಕ ಅಥವಾ ನಿರ್ದೇಶಕರಿಗೆ ತಿಳಿದಿಲ್ಲದಿರಬಹುದು ಆದರೆ ಉದ್ಯಮದಲ್ಲಿ ಕೆಲವು ನಡೆಯುವುದೇ ಹೀಗೆ ಎಂದು ಸಾಧಿಕಾ ಹೇಳಿದ್ದಾರೆ.
ನಾನೇನಾದರೂ ಮಂಚ ಹಂಚಿಕೊಳ್ಳುತ್ತೇನೆ ಎಂದು ಒಬ್ಬರಿಗೆ ಒಪ್ಪಿಕೊಂಡರೆ ಸಾಕು ಮತ್ತೆಂದೂ ಈ ಕಾಸ್ಟಿಂಗ್ ಕೌಚ್ ಹಳ್ಳದಿಂದ ಹೊರಬರಲು ಸಾಧ್ಯವಿಲ್ಲ. ಯಾಕಂದ್ರೆ ನನ್ನಷ್ಟಕ್ಕೆ ನಾನು ದುರ್ಬಲ ಎಂದು ಪರಿಗಣಿಸುತ್ತೇನೆ ಮತ್ತು ಪಾತ್ರಗಳಿಗಾಗಿ ರಾಜಿ ಮಾಡಿಕೊಳ್ಳುವ ಮನೋಭಾವ ಬರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾನು ಯಾವಾಗಲೂ ಇಂತಹ ಆಫರ್ಗಳಿಗೆ ನೋ ಎಂದು ಹೇಳುತ್ತೇನೆ ಎಂದು ಸಾಧಿಕಾ ಹೇಳಿದರು.
ಕೆಲವು ನಟಿಯರು ಸಾಮಾಜಿಕ ಮಾಧ್ಯಮದಲ್ಲಿ ಅಂತಹ ಸಿನಿಮಾ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸುವುದರಿಂದ ಕೆಲವರು ನನ್ನನ್ನು ಸಂಪರ್ಕಿಸಲು ಭಯಪಡುತ್ತಾರೆ. ಯಾಕಂದ್ರೆ ನಾನು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತೇನೆ ಎಂಬ ಭಯದಿಂದ ನನ್ನನ್ನು ಸಂಪರ್ಕಿಸಲು ಹೆದರುತ್ತಾರೆ. ಈ ಕಾರಣದಿಂದ ನಾನು ಅನೇಕ ಪಾತ್ರಗಳನ್ನು ಕಳೆದುಕೊಂಡಿದ್ದೇನೆ. ನನಗೆ ಇಂತಹ ಆಫರ್‌ಗಳನ್ನು ಪ್ರಸ್ತಾಪ ಮಾಡಲು ನನ್ನ ಬೋಲ್ಡ್ ಫೋಟೋಶೂಟ್‌ಗಳು ಕಾರಣ ಇರಬಹುದು. ಆದರೆ, ಫೋಟೋಗಳಿಂದ ನನ್ನ ವ್ಯಕ್ತಿತ್ವದ ನಿರ್ಧಾರಕ್ಕೆ ಬರಬೇಡಿ. ನಾನು ವಿಭಿನ್ನ ವ್ಯಕ್ತಿ ಎಂದು ಸಾಧಿಕಾ ಹೇಳಿದ್ದಾರೆ.
ಇದನ್ನೂ ಓದಿ: Laptops To Students: ವಿದ್ಯಾರ್ಥಿಗಳೇ ಗುಡ್‌ನ್ಯೂಸ್ ! ಸಿಗಲಿದೆ ಉಚಿತ ಲ್ಯಾಪ್‌ಟಾಪ್- ಸಿಎಂ ಸಿದ್ದರಾಮಯ್ಯ ಆದೇಶ !