Garuda Purana: ಶಾರೀರಿಕ ಸಂಬಂಧ ಯಾವಾಗ ಮಾಡುವುದು ಉತ್ತಮ? ದಿನದ ಈ ಹೊತ್ತು ಒಳ್ಳೆಯದಲ್ಲ, ಇಲ್ಲಿದೆ ಸಂಪೂರ್ಣ ಮಾಹಿತಿ!!!

lifestyle in kannada Garuda Purana do not ever do physical relation at this time of day

Garuda Purana: ಹಿಂದೂ ಧರ್ಮದಲ್ಲಿ 18 ಪುರಾಣಗಳಿದ್ದು, ಅವುಗಳ ಪೈಕಿ ಗರುಡ ಪುರಾಣದಲ್ಲಿ (ಗರುಡ ಪುರಾಣ) ಜೀವನದ ಅನೇಕ ವಿಷಯಗಳ ಬಗ್ಗೆ ಹೇಳಲಾಗಿದೆ. ಅದನ್ನು ಅನುಸರಿಸಿಕೊಂಡು ಹೋದರೆ ಮನೆಯಲ್ಲಿ ಸಮೃದ್ಧಿ ನೆಲೆಯಾಗುತ್ತದೆ. ಅಂತೆಯೇ ಗರುಡ ಪುರಾಣದಲ್ಲಿ ನಾವು ಯಾವ ಅಭ್ಯಾಸಗಳನ್ನು ನಮ್ಮಲ್ಲಿ ರೂಢಿಸಿಕೊಳ್ಳೇಕು..? ಮತ್ತು ಇದರೊಂದಿಗೆ, ಕೆಲವು ಅಭ್ಯಾಸಗಳನ್ನು ದೂರವಿಡುವಂತೆ ಸಲಹೆ ನೀಡಲಾಗುತ್ತದೆ.

ಗರುಡ ಪುರಾಣದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ಬ್ರಹ್ಮ ಮುಹೂರ್ತದಲ್ಲಿ ಏಳಬೇಕು. ಯಾಕೆಂದರೆ ಬೆಳಗ್ಗೆ ತಡವಾಗಿ ಏಳುವುದರಿಂದ ಆಯಸ್ಸು ಕಡಿಮೆಯಾಗುತ್ತದೆ. ಗರುಡ ಪುರಾಣ ಪ್ರಕಾರ ವಾಸ್ತವದಲ್ಲಿ ಬೆಳಗ್ಗೆ ಗಾಳಿಯು ಶುದ್ಧವಾಗಿರುತ್ತದೆ. ಅದು ಹಲವು ರೋಗಗಳನ್ನು ಗುಣಪಡಿಸುತ್ತದೆ. ಇನ್ನು ಗರುಡ ಪುರಾಣದ ಪ್ರಕಾರ, ಬೆಳಗ್ಗೆ ದೈಹಿಕ ಸಂಬಂಧ ಬೆಸೆಯಬಾರದು. ಅದರಲ್ಲೂ ಬ್ರಹ್ಮ ಮುಹೂರ್ತದಲ್ಲಿ ಶಾರೀರಿಕ ಸಂಬಂಧ ಬೆಳೆಸುವುದರಿಂದ ಆಯಸ್ಸು ಕಡಿಮೆಯಾಗುತ್ತದೆ.

ಇನ್ನು ಮೊಸರು ತಂಪು ಗುಣ ಹೊಂದಿದೆ. ಆದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ರಾತ್ರಿಯಲ್ಲಿ ಇದನ್ನು ಸೇವಿಸುವುದರಿಂದ ಹಲವಾರು ರೋಗಗಳು ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ರಾತ್ರಿ ವೇಳೆ ಮೊಸರನ್ನು ಸೇವಿಸಬಾರದು ಎಂದು ಗರುಡ ಪುರಾಣದಲ್ಲಿ ತಿಳಿಸಲಾಗಿದೆ.

ಒಣ ಮತ್ತು ಹಳಸಿದ ಮಾಂಸವು ಯಾವುದೇ ಮನುಷ್ಯನಿಗೆ ಹಾನಿಕಾರಕವಾಗಿದೆ. ಇದರಿಂದ ಕ್ಯಾನ್ಸರ್ ನಂತಹ ಕಾಯಿಲೆಗಳು ಬರುತ್ತವೆ. ಹಳಸಿದ ಮಾಂಸದಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳು ಹೊಟ್ಟೆ ಸೇರಿ ಕಾಯಿಲೆಗಳಿಗೆ ಕಾರಣವಾಗಬಹುದು.

ಅಂತೆಯೇ ಸತ್ತ ವ್ಯಕ್ತಿಯ ದೇಹವನ್ನು ಸುಟ್ಟಾಗ, ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳು ಮೃತದೇಹದೊಂದಿಗೆ ನಾಶವಾಗಿ ಹೊಗೆಯೊಂದಿಗೆ ವಾತಾವರಣದಲ್ಲಿ ಹರಡುತ್ತವೆ. ಆ ಹೊಗೆಯ ಸಂಪರ್ಕಕ್ಕೆ ಬಂದಾಗ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಮನುಷ್ಯನ ದೇಹಕ್ಕೆ ಅಂಟಿಕೊಳ್ಳುತ್ತವೆ ಮತ್ತು ಅನೇಕ ರೀತಿಯ ರೋಗಗಳನ್ನು ಹರಡುತ್ತವೆ. ಆದ್ದರಿಂದ ಶವಸಂಸ್ಕಾರದ ಹೊಗೆಯಿಂದ ದೂರವಿರಿ.

ಇದನ್ನೂ ಓದಿ: Married Women: ಹೆಂಡತಿಯಾದವಳು ಪ್ರತಿದಿನ ಈ 4 ಕೆಲಸ ಮಾಡಿದರೆ ಬಹಳ ಉತ್ತಮ!!!

Comments are closed.