Goddess Lakshmi: ಈ ರೀತಿ ಮಾಡಿದರೆ ಲಕ್ಷ್ಮೀ ನಿಮ್ಮ ಮನೆಯಲ್ಲಿ ಸದಾ ನೆಲೆಸುತ್ತಾಳೆ!!!
Astrology news goddess Lakshmi simple tips to get goddess Lakshmi Devi blessings
Goddess Lakshmi: ಲಕ್ಷ್ಮಿ ದೇವಿ ಎಲ್ಲರಿಗೂ ಒಳಿಯುವುದಿಲ್ಲ. ಲಕ್ಷ್ಮಿ ಯನ್ನು ಒಳಿಸಿಕೊಳ್ಳಲು ಪ್ರಯತ್ನ ಬಹಳ ಮುಖ್ಯ. ಶಾಸ್ತ್ರ ಪ್ರಕಾರ ನಮ್ಮ ರೂಢಿಯಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಂಡು ಹೋದಲ್ಲಿ ಲಕ್ಷ್ಮಿಯು ನಮ್ಮನ್ನರಸಿ ಬರುತ್ತಾಳೆ.
ಹಣ ಎನ್ನುವುದು ಮನುಷ್ಯನಿಗೆ ಅಗತ್ಯವಾಗಿ ಬೇಕು. ಒಂದು ತುತ್ತು ಅನ್ನ ತಿನ್ನಬೇಕಾದರೂ ನಮ್ಮ ಕೈಯಲ್ಲಿ ದುಡಿಮೆ ಇರಬೇಕು. ಹೀಗಿರುವಾಗ ಹಣ ಸಂಪಾದಿಸಲು ಶತಪ್ರಯತ್ನ ನಡೆಯುತ್ತಲೇ ಇರುತ್ತವೆ. ಆದರೆ ಹಣ ಎನ್ನುವುದು ಕೆಲವರಿಗೆ ಕೈ ಹತ್ತುವುದೇ ಇಲ್ಲ. ಯಾಕೆಂದರೆ ಅವರಲ್ಲಿ ದಾರಿದ್ರ್ಯ ಸುತ್ತುವರಿದಿರುತ್ತದೆ. ಈ ದಾರಿದ್ರ್ಯಗಳನ್ನು ದೂರ ಮಾಡಿಕೊಳ್ಳಲು ವರ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಮುಖ್ಯ. ಹಾಗಿದ್ದರೆ ಲಕ್ಷ್ಮೀ ಕೃಪೆ (Goddess Lakshmi) ಹೇಗೆ ಪಡೆಯಬೇಕು ಎಂದು ಇಲ್ಲಿ ತಿಳಿಯಿರಿ.
ಮುಖ್ಯವಾಗಿ ನಮ್ಮ ದೈನಂದಿನ ಬದುಕಿನ ಆಚರಣೆಗಳಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಂಡು ಅನುಸರಿಸಿದ್ದೇ ಆದರೆ ನಮಗೆ ”ಲಕ್ಷ್ಮಿ ಕಟಾಕ್ಷ”ವಾಗುತ್ತದೆ. ಲಕ್ಷ್ಮಿಯು ನಮ್ಮನ್ನರಸಿ ಬರುತ್ತಾಳೆ.
ಸಮುದ್ರರಾಜನ ಮಗಳಾದ ಲಕ್ಷ್ಮಿದೇವಿಯನ್ನು ಶ್ರೀಮನ್ನಾರಾಯಣನು ಆಕರ್ಷಿಸಿದ್ದರಿಂದ ಲಕ್ಷ್ಮಿಯು ನಾರಾಯಣನ ವಕ್ಷಸ್ಥಳವನ್ನು ಸೇರಿ ಲಕ್ಷೀನಾರಾಯಣರಾದರು. ಈ ಲಕ್ಷ್ಮೀನಾರಾಯಣರ ಆರಾಧನೆಯನ್ನು ಸದಾಕಾಲ ಮಾಡುವುದರಿಂದ ನಿಮಗೆ ಲಕ್ಷ್ಮಿಕಟಾಕ್ಷವಾಗುತ್ತದೆ. ಆದ್ದರಿಂದ
ಶ್ರೀಮನ್ನಾರಾಯಣನ ಸೇವೆಯನ್ನು ಪೂಜೆಯ ಮೂಲಕ ಅಥವಾ ಜಪದ ಮೂಲಕ ನೀವು ಮಾಡಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸುತ್ತಾಳೆ.
“ಓಂ ಓಂ ನಮೋ ನಾರಾಯಣಾಯ” ಈ ಮಂತ್ರವನ್ನು ಸದಾಕಾಲ ನೀವು ಜಪಿಸಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.
“ಓಂ ಓಂ ನಮೋ ನಾರಾಯಣಾಯ” ಈ ಅಷ್ಟಾಕ್ಷರಿ ನಾರಾಯಣ ಜಪವನ್ನು ಲಕ್ಷ ಸಂಖ್ಯೆಯಲ್ಲಿ ಜಪಿಸುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿಯು ಸದಾ ಕಾಲ ನಿಲ್ಲುವಳು.
ಈ ನಾರಾಯಣ ಜಪವನ್ನು ಲಕ್ಷ ಸಂಖ್ಯೆಯಲ್ಲಿ ಮಾಡಿ ತರ್ಪಣ, ಹೋಮ, ಅರ್ಚನೆ, ನಮಸ್ಕಾರ ಹಾಗೂ ಬ್ರಾಹ್ಮಣ ಭೋಜನ ಕ್ರಮದಲ್ಲಿ ಅನುಷ್ಠಾನ ಮಾಡಿದಾಗ ನಿಮಗೆ ಸದಾಕಾಲ ತಾಯಿ ಲಕ್ಷ್ಮಿ ಪ್ರಾಪ್ತಿಯಾಗುತ್ತಾಳೆ.
“ಓಂ ನಮೋ ಭಗವತೇ ವಾಸುದೇವಾಯ” ಈ ಕೃಷ್ಣನ ಮಂತ್ರವನ್ನು ಒಂದು ಲಕ್ಷ ಸಾರಿ ಜಪಿಸಿದರೂ ಮಹಾಲಕ್ಷ್ಮಿಯ ಅನುಗ್ರಹವಾಗುತ್ತದೆ.
“ಶ್ರೀಲಕ್ಷ್ಮೀನಾರಾಯಣ ಪಾರಾಯಣ”ವನ್ನು ಗುರುಮುಖದಿಂದ ಉಪದೇಶ ಪಡೆದು 108 ಬಾರಿ ಜಪಿಸುವುದರಿಂದ ಲಕ್ಷಿ ಪ್ರಾಪ್ತಿಯಾಗುತ್ತದೆ.
ಜೊತೆಗೆ “ನಾರಾಯಣ ಹೃದಯ”ವನ್ನು ಒಂದು ಸಾವಿರದ ಎಂಟು ಸಲ ಪಠಿಸುವುದರಿಂದಲೂ ಲಕ್ಷ್ಮಿ ಅನುಗ್ರಹವಾಗುತ್ತಾಳೆ.
“ಮಹಾಲಕ್ಷ್ಮಿ ಹೃದಯ”ವನ್ನು ಒಂದು ಸಾವಿರದ ಎಂಟು ಬಾರಿ ಪಠಿಸುವುದರಿಂದ ಲಕ್ಷ್ಮಿ ಅನುಗ್ರಹವಾಗುತ್ತದೆ.
“ಲಕ್ಷ್ಮೀನಾರಾಯಣ ಪಾರಾಯಣ”ವನ್ನು ಏಕೋತ್ತರವಾರ ಕ್ರಮದಲ್ಲಿ ಅಂದರೆ ಮೊದಲನೆಯ ದಿನ ಒಂದು ಪಾರಾಯಣ, ಎರಡನೆಯ ದಿನ ಎರಡು ಪಾರಾಯಣ, ಮೂರನೆಯ ದಿನ ನಾಲ್ಕು ಪಾರಾಯಣ, ನಾಲ್ಕನೆಯ ದಿನ ಎಂಟು ಪಾರಾಯಣ, ಐದನೆಯ ದಿನ ಹದಿನಾರು ಪಾರಾಯಣ, ಆರನೆಯ ದಿನ ಮುವ್ವತ್ತೆರಡು ಪಾರಾಯಣ, ಏಳನೆಯ ದಿನ ಅರವತ್ತನಾಲ್ಕು ಪಾರಾಯಣ, ಎಂಟನೆಯದಿನ ನೂರಾ ಇಪ್ಪತ್ತೆಂಟು ಪಾರಾಯಣ, ಒಂಬತ್ತನೆಯ ದಿನ ಎರಡು ನೂರಾ ಐವತ್ತಾರು ಪಾರಾಯಣ] ಮಾಡುವುದರಿಂದ ಸದಾಕಾಲ ಲಕ್ಷ್ಮಿ ಪ್ರಾಪ್ತಿಯಾಗುತ್ತಾಳೆ.
ಇದನ್ನೂ ಓದಿ: ಶಾರೀರಿಕ ಸಂಬಂಧ ಯಾವಾಗ ಮಾಡುವುದು ಉತ್ತಮ? ದಿನದ ಈ ಹೊತ್ತು ಒಳ್ಳೆಯದಲ್ಲ, ಇಲ್ಲಿದೆ ಸಂಪೂರ್ಣ ಮಾಹಿತಿ!!!