Mangaluru: ರಸ್ತೆ ಮಧ್ಯೆ ನಶೆಯಲ್ಲಿ ಯುವಕನೋರ್ವನಿಂದ ಚೂರಿ ಹಿಡಿದು ಧಾಂದಲೆ!

Mangalore news drug addict holds knife in the middle of the road at ullal

Share the Article

Mangaluru: ಅಮಲು ಪದಾರ್ಥ ಸೇವಿಸಿ ನಶೆಯಲ್ಲಿ ತೇಲಾಡುತ್ತಿದ್ದ ಯುವಕನೋರ್ವ ಚೂರಿ ಹಿಡಿದು ರಸ್ತೆ ಡಿವೈಡರ್ ನಲ್ಲಿ ಧಾಂದಲೆ ಮಾಡುತ್ತಿದ್ದ ಘಟನೆ ನಿನ್ನೆ (ಆ.19) ಇಲ್ಲಿನ (Mangaluru) ದೇರಳಕಟ್ಟೆ ಸಮೀಪದ ನಾಟೆಕಲ್ ಜಂಕ್ಷನ್ ನಲ್ಲಿ ನಡೆದಿದೆ.

ಯುವಕನನ್ನು ಉಳ್ಳಾಲ ಮುಕ್ಕಚ್ಚೇರಿ ಕೈಕೋ ರೋಡ್ ನಿವಾಸಿ ಅಬೂಬಕ್ಕರ್ ಸಿದ್ದೀಕ್ (24 ವ.) ಎಂದು ಗುರುತಿಸಲಾಗಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಯುವಕನನ್ನು ಬಂಧಿಸಿದ್ದಾರೆ.

ನಶೆಯಲ್ಲಿದ್ದ ಸಿದ್ದೀಕ್ ರಸ್ತೆ ಮಧ್ಯದ ಡಿವೈಡರ್ ನಲ್ಲಿ ಕಲ್ಲು ಮತ್ತು ಚೂರಿ ಹಿಡಿದು ದಾಂದಲೆ ನಡೆಸುತ್ತಿದ್ದ ಎನ್ನಲಾಗಿದೆ. ಈ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕಾಗಮಿಸಿದ ಕೊಣಾಜೆ ಮತ್ತು ಟ್ರಾಫಿಕ್ ಪೊಲೀಸರು ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ ಯುವಕನನ್ನು ಬಂಧಿಸಿದ್ದಾರೆ.

ನಂತರ ಆರೋಪಿ ಅಬ್ಲ್ಯೂಬಕ್ಕರ್ ಸಿದ್ದೀಕ್ ನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಅಮಲು ಪದಾರ್ಥ ಸೇವಿಸಿದ್ದು ದೃಢಪಟ್ಟ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನು ಪೊಲೀಸರ ವಿಭಿನ್ನ ರೀತಿಯ ಕಾರ್ಯಾಚರಣೆ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ವಿಡಿಯೋದಲ್ಲಿ ಯುವಕ ರಸ್ತೆಯ ಮಧ್ಯದಲ್ಲಿ ಚೂರಿ ಹಿಡಿದು ನಡೆದಾಡುತ್ತಿರವುದು ನೋಡಬಹುದು. ನಂತರ ಪೊಲೀಸರು ಚಾಣಾಕ್ಷತನದಿಂದ ಆತನನ್ನು ಲಾಕ್ ಮಾಡಿ ಪೊಲೀಸ್ ವಾಹನದೊಳಗೆ ಹಾಕುವ ದೃಶ್ಯವಿದೆ.

ಇದನ್ನೂ ಓದಿ: Kodi Mutt Shree Prediction: ಕೋಡಿಮಠ ಶ್ರೀಗಳಿಂದ ಚಂದ್ರಯಾನ-3 ಕುರಿತು ಆಘಾತಕಾರಿ ಭವಿಷ್ಯ ನುಡಿ! ಹಣದ ಹಿಂದೆ ಮನುಷ್ಯ ಹೋಗದೇ ದೈವದ ಹಿಂದೆ ಹೋಗಬೇಕು ಎಂದು ಸ್ವಾಮೀಜಿ ಹೇಳಿದ್ಯಾಕೆ!!!

Comments are closed.