Indira Canteen: ಇಂದಿರಾ ಕ್ಯಾಂಟೀನ್‌ ಊಟದ ಬೆಲೆ ಏರಿಕೆ ಕುರಿತು ಸರಕಾರದಿಂದ ಬಂತು ಮಹತ್ವದ ಸ್ಪಷ್ಟನೆ! ಇಲ್ಲಿದೆ ಸಂಪೂರ್ಣ ಮಾಹಿತಿ

Congress government no increase in Indira canteen food prices minister HK Patil clarifies

Indira Canteen: ಇಂದಿರಾ ಕ್ಯಾಂಟೀನ್‌ ಊಟದ ದರದ ಏರಿಕೆ ಕುರಿತು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯವಾದ ಮಾಹಿತಿಯನ್ನು ನೀಡಿದ್ದಾರೆ. ಇಂದಿರಾ ಕ್ಯಾಂಟೀನ್‌(Indira Canteen) ಊಟದ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆಹಾರ ಸರಬರಾಜುದಾರರಿಗೆ ಸರಕಾರ ನೀಡುವ ದರದಲ್ಲಿ 5 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂಬ ಸುಳ್ಳು ಸುದ್ದಿಗೆ ತೆರೆ ಬಿದ್ದಿದೆ.

 

ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಒಟ್ಟು 57 ರೂಪಾಯಿ ಆಗುತ್ತಿತ್ತು. ಈಗ ಅದನ್ನು ರೂ.62ಕ್ಕೆ ಏರಿಸಲಾಗಿದೆ. ಈ ಹೆಚ್ಚುವರಿ ಮೊತ್ತವನ್ನು ಸರಕಾರವೇ ಭರಿಸಲಿದೆ. ಗ್ರಾಹಕರಿಗೆ ಈ ಮೊದಲೇ ನಿಗದಿ ಪಡಿಸಿದ 5 ರೂಪಾಯಿಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ತಲಾ 10 ರೂಪಾಯಿ ಪಾವತಿಸಬೇಕು ಅಷ್ಟೇ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಸಚಿವ ಸಂಪುಟ ಸಭೆಯಲ್ಲಿ ಸಂಚಿವ ಸಂಪುಟದ ನಿರ್ಣಯದ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ್‌ ಎಚ್‌ ಕೆ ಪಾಟೀಲ್‌ ಅವರು ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿಯನ್ನು ನೀಡಿದ್ದಾರೆ.

ಇದನ್ನೂ ಓದಿ: ಭಾರೀ ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯ ಸ್ಕ್ಯಾನ್‌ ಮಾಡಿದ ಡಾಕ್ಟರ್!‌ ಹೊಟ್ಟೆಯೊಳಗಿದ್ದ ವಸ್ತು ನೋಡಿ ಶಾಕ್‌ ಆದ ವೈದ್ಯರು!

Comments are closed.