ದ.ಕ: ಬಾವಿಗೆ ಹಾರಿ ನವವಿವಾಹಿತ ಆತ್ಮಹತ್ಯೆ!!

Dakshina Kannada news A new married man commits sucide by jumping into well in bantwal

Bantwal: ವ್ಯಕ್ತಿಯೋರ್ವ ಬಾವಿಗೆ ಹಾರಿ ಆತ್ಮಹತ್ಯೆಗೈದ ಘಟನೆಯೊಂದು ವಿಟ್ಲದಲ್ಲಿ(vitla, Bantwal) ನಡೆದಿದೆ. ಪ್ರಶಾಂತ್‌ ನಾಯ್ಕ್‌ (29) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.ಈ ಘಟನೆ ನಿನ್ನೆ ಸುಮಾರು ಎರಡು ಗಂಟೆಯ ರಾತ್ರಿಗೆ ನಡೆದಿದೆ.

 

ಬುಧವಾರ ರಾತ್ರಿ ಮೃತರ ಮನೆಯಲ್ಲಿ ಉತ್ತರಕ್ರಿಯೆ ಇದ್ದು, ಎಲ್ಲಾ ಕಾರ್ಯಕ್ರಮ ಮುಗಿದ ಮೇಲೆ ಈ ಘಟನೆ ನಡೆದಿದೆ. ಸ್ನೇಹಿತರು, ಸಂಬಂಧಿಕರು ಕಾರ್ಯಕ್ರಮ ಮುಗಿದ ಮೇಲೆ ಅವರವರ ಮನೆಗೆ ಹೋಗಿದ್ದರು. ನಂತರ ಮನೆ ಮಂದಿ ಮಲಗಿದ ಮೇಲೆ ಇವರು ಮನೆಯಿಂದ ಹೊರಗೆ ಬಂದು ಸಮೀಪದ ಬಾವಿಗೆ ಹಾರಿರಬೇಕು ಎಂದು ಶಂಕಿಸಲಾಗಿದೆ.

ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಪ್ರಶಾಂತ್‌ ಅವರು ನೇರಳಕಟ್ಟೆ ಅಗ್ರಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಬಿಜೆಪಿಯ ಸಕ್ರಿಯ ಕಾರ್ಯಕರ್ತ ಅವರಾಗಿದ್ದರು. ಬಿಜೆಪಿ ಬಂಟ್ವಾಳದ ಸಾಮಾಜಿಕ ಜಾಲತಾಣ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

ಘಟನೆಯ ನಂತರ ವಿಟ್ಲ ಪೊಲೀಸರು ಬಂದಿದ್ದು, ಕೌಟುಂಬಿಕ ಕಲಹವೇ ಈ ಆತ್ಮಹತ್ಯೆಗೆ ಕಾರಣವೇ ಎಂದು ಅಂದಾಜಿಸಲಾಗಿದೆ. ಮುಳುಗುತಜ್ಞರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗೆ ಶವವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಇದನ್ನೂ ಓದಿ: ರಾತ್ರೋರಾತ್ರಿ ಬ್ಯಾಂಕ್ ದರೋಡೆ: ಕೆನರಾ ಬ್ಯಾಂಕ್ ಎಟಿಎಂ ಲೂಟಿ, ಗ್ಯಾಸ್ ಕಟ್ಟರ್ ಬಳಸಿ ಕೃತ್ಯ

Comments are closed.