30 ಲಕ್ಷ ಕುಟುಂಬಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ- ಕೇವಲ 5% ಬಡ್ಡಿಯಲ್ಲಿ ಸಿಗಲಿದೆ ಸಾಲ !! ಈ ದಿನದಿಂದಲೇ ಜಾರಿ !

business news five percent interest for loan central government news

ಕೇಂದ್ರ ಸರ್ಕಾರವು (Central Govt Scheme) ವಿಶ್ವಕರ್ಮ ಜನಾಂಗಕ್ಕೆ ಬಹುದೊಡ್ಡ ಗುಡ್ ನ್ಯೂಸ್ ನೀಡಿದೆ. ಸಾಂಪ್ರದಾಯಿಕ ಕೌಶಲ್ಯಗಳಲ್ಲಿ ತೊಡಗಿರುವ ಜನರಿಗೆ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸುವ ‘ಪಿಎಂ ವಿಶ್ವಕರ್ಮ’ (PM Vishwa Karma) ಯೋಜನೆಗೆ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಈ ಬಗ್ಗೆ ಕೇಂದ್ರ ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಮಾಹಿತಿ ನೀಡಿದ್ದಾರೆ. ಇಂದು ನಡೆದ ಕೇಂದ್ರ ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

 

ನಿನ್ನೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ವಿಶ್ವಕರ್ಮ ಯೋಜನೆಯನ್ನು(Vishwakarma Yojana) ಘೋಷಿಸಿದ, ನಂತರ ಇಂದು ಸಚಿವ ಸಂಪುಟ ಸಭೆ ಸೇರಿತ್ತು. ಅಲ್ಲಿ ಈ ಪ್ರಮುಖ ಯೋಜನೆಗೆ ಅನುಮೋದನೆ ಸಿಕ್ಕಿದೆ. ಭಾರತದಲ್ಲಿ ವಿಶ್ವಕರ್ಮ ಸಮಾಜವು ತಾಂತ್ರಿಕವಾಗಿ ಬಲಿಷ್ಠವಾದ ಭಾರತ ಕಟ್ಟಲು ನೆರವಾಗಿದೆ. ಕರ ಕುಶಲತೆಯಲ್ಲಿ ಗ್ರಾಮ್ಯ ಮಟ್ಟದಲ್ಲಿ ದೊಡ್ಡದಾದ ಕೊಡುಗೆಯನ್ನು ವಿಶ್ವಕರ್ಮ ಸಮಾಜ ನೀಡುತ್ತಿದೆ. ಈ ಯೋಜನೆಯು ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳಿಗೆ ಆರ್ಥಿಕ ಬೆಂಬಲವನ್ನು ನೀಡುವುದರ ಜತೆಗೆ ಅವರಲ್ಲಿ ಸುಧಾರಿತ ಕೌಶಲ್ಯ ತರಬೇತಿಯನ್ನು ವೃದ್ಧಿ ಮಾಡಲು ಸಹಕಾರಿಯಾಗಲಿದೆ ಎನ್ನಲಾಗಿದೆ.

PM ವಿಶ್ವಕರ್ಮ ಯೋಜನೆಯ ಲಾಭಗಳೇನು ?
1) ಪ್ರಧಾನಿ ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳಿಗೆ 5% ಬಡ್ಡಿಯಲ್ಲಿ ರೂ. 1 ಲಕ್ಷದವರೆಗೆ (ಮೊದಲ ಕಂತಿನಲ್ಲಿ) ಸಾಲವನ್ನು ನೀಡಲಾಗುತ್ತದೆ.
2) ಎರಡನೇ ಕಂತಿನಲ್ಲಿ ರೂ. 2 ಲಕ್ಷದವರೆಗೆ ಸಾಲದ ಬೆಂಬಲವನ್ನು ನೀಡಲಾಗುತ್ತದೆ, ಇದು 5% ರಷ್ಟು ರಿಯಾಯಿತಿ ಬಡ್ಡಿ ದರದಲ್ಲಿ ಇರಲಿದೆ
3) ಕೌಶಲ್ಯ ತರಬೇತಿಗೆ ರೂ.500 ಸ್ಟೈಫಂಡ್
4) ಆಧುನಿಕ ಉಪಕರಣ ಖರೀದಿಸಲು ರೂ.1,500 ನೀಡಿಕೆ
5) ವಿಶ್ವಕರ್ಮ ಯೋಜನೆಯಿಂದ 30 ಲಕ್ಷ ಕುಟುಂಬಗಳು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.
6) ಯೋಜನೆಗೆ ನೋಂದಣಿಯನ್ನು ಗ್ರಾಮಗಳ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಮಾಡಬಹುದು
7) ಯೋಜನೆಗೆ ಸಂಪೂರ್ಣ ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ, ಆದರೂ ರಾಜ್ಯ ಸರ್ಕಾರಗಳ ಬೆಂಬಲದ ಅಗತ್ಯವಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.

ಉದಾರ ನಿಯಮಗಳ ಜತೆ ಕೌಶಲ್ಯ ಉನ್ನತೀಕರಣ, ಟೂಲ್ ಕಿಟ್ ನೀಡಿ ಪ್ರೋತ್ಸಾಹ, ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ಮತ್ತು ಮಾರುಕಟ್ಟೆ ಬೆಂಬಲ, ಸಾಲಗಳ ಲಭ್ಯತೆ – ಮುಂತಾದುವುಗಳ ಮೂಲಕ ಸಾಂಪ್ರದಾಯಿಕ ವಿಶ್ವ ಕರ್ಮರಿಗೆ ಸಮಗ್ರ ಸಾಂಸ್ಥಿಕ ಬೆಂಬಲವನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ಕೇಂದ್ರ ಮಂತ್ರಿಗಳು ಹೇಳಿದ್ದಾರೆ.

Comments are closed.